ಕಾರು ಮಾರಾಟದಲ್ಲಿ ಕಳೆದ ವರ್ಷಕ್ಕಿಂತ ಪ್ರಸಕ್ತ ಸಾಲಿನ ಮಾರ್ಚ್ ತಿಂಗಳಲ್ಲಿ ಹೆಚ್ಚಳ ಕಂಡಿದ್ದು, ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ 1,28,089 ಮಾರಾಟವಾಗಿದ್ದರೆ, ಈ ವರ್ಷ ಮಾರ್ಚ್‌ನಲ್ಲಿ 1,29,358 ಕಾರು ಮಾರಾಟವಾಗಿದೆ.
ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್(ಎಸ್‌ಐಎಎಂ) ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ದೇಶದ ಕಾರು ಮಾರಾಟದಲ್ಲಿ ಹೆಚ್ಚಳವಾಗಿರುವುದಾಗಿ ತಿಳಿಸಿದೆ. ಅಲ್ಲದೇ ಬೈಕ್‌ಗಳ ಮಾರಾಟದಲ್ಲಿಯೂ ಶೇ.2.98ರಷ್ಟು ಹೆಚ್ಚಳವಾಗಿದೆ.
ಕಳೆದ ವರ್ಷ 5,06,884 ಬೈಕ್ ಮಾರಾಟವಾಗಿದ್ದರೆ, ಪ್ರಸಕ್ತ ವರ್ಷದಲ್ಲಿ 5,22,000 ಬೈಕ್ ಮಾರಾಟವಾಗಿದ್ದು, ಶೇ.2.98ರಷ್ಟು ಹೆಚ್ಚಳ ಕಂಡಿರುವುದಾಗಿ ಎಸ್‌ಐಎಎಂ ವಿವರಿಸಿದೆ.
ಒಟ್ಟಾರೆಯಾಗಿ ಮಾರ್ಚ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಶೇ.3.65ರಷ್ಟು ಹೆಚ್ಚಳಗೊಂಡಿದೆ. ಕಳೆದ ಮಾರ್ಚ್ ತಿಂಗಳಲ್ಲಿ 6,30,976 ದ್ವಿಚಕ್ರ ವಾಹನ ಮಾರಾಟವಾಗಿದ್ದು, ಪ್ರಸಕ್ತ ಮಾರ್ಚ್‌ನಲ್ಲಿ 6,54,017ರಷ್ಟು ಮಾರಾಟವಾಗಿದೆ. |