ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ನಾಳೆಯಿಂದ 'ನ್ಯಾನೋ' ಬುಕ್ಕಿಂಗ್ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾಳೆಯಿಂದ 'ನ್ಯಾನೋ' ಬುಕ್ಕಿಂಗ್ ಆರಂಭ
ಜಗತ್ತಿನ ಅತ್ಯಂತ ಕಡಿಮೆ ಬೆಲೆಯ ಕಾರು ಎಂಬ ಹೆಗ್ಗಳಿಕೆ ಭಾಜನವಾಗಿರುವ ಟಾಟಾ ಸಂಸ್ಥೆಯ 644ಸಿಸಿ ನ್ಯಾನೋ ಕಾರಿನ ಬುಕ್ಕಿಂಗ್ ಏ.9ರಿಂದ ಆರಂಭವಾಗಲಿದೆ.

ಏಪ್ರಿಲ್ 9ರಿಂದ 25ರವರೆಗೆ ಬುಕ್ಕಿಂಗ್ ಇದ್ದು, ಅರ್ಜಿಗೆ 300ರೂ.ನಿಗದಿಪಡಿಸಲಾಗಿದೆ. ನ್ಯಾನೋ ಕಾರು ಬುಕ್ಕಿಂಗ್‌ಗಾಗಿ 95ಸಾವಿರ ರೂ. ಪಾವತಿ ಅಥವಾ 2999 ರೂ.ಗೆ ಬುಕ್ಕಿಂಗ್ ಮಾಡಬಹುದಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯಾನೋ ಕಾರನ್ನು 1ಲಕ್ಷ ರೂ.(2000 ಅಮೆರಿಕನ್ ಡಾಲರ್) ಕಾರನ್ನು ನೀಡುವುದಾಗಿ ಟಾಟಾ ಸಂಸ್ಥೆಯ ಅಧ್ಯಕ್ಷ ರತನ್ ಟಾಟಾ ಈ ಮೊದಲು ಭರವಸೆ ನೀಡಿದ್ದು, ಆ ದರದಲ್ಲಿ ಸ್ವಲ್ಪ ಹೆಚ್ಚಳವಾಗಲಿದೆ ಎಂದು ಸಂಸ್ಥೆ ಹೇಳಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಾಳೆಯಿಂದ ಅರ್ಜಿಯನ್ನು ವಿತರಿಸಲಿದೆ ಎಂದು ತಿಳಿಸಿರುವ ಅಧಿಕಾರಿಗಳು, ಸುಮಾರು 850 ನಗರಗಳಲ್ಲಿನ 1,350 ಶಾಖೆಗಳಲ್ಲಿ ನ್ಯಾನೋ ಬುಕ್ಕಿಂಗ್ ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರೆಯಲಿದೆ.

ಭಾರತದ ಬೃಹತ್ ಕಾರು ಉತ್ಪಾದಕ ಸಂಸ್ಥೆಯಾಗಿರುವ ಟಾಟಾ ನ್ಯಾನೋ ಬುಕ್ಕಿಂಗ್ ಬ್ಯಾಂಕ್ ಶಾಖೆಗಳಲ್ಲಿ ಅಲ್ಲದೇ ಭಾರತದಲ್ಲಿ ಆನ್ ಲೈನ್‌ನಲ್ಲಿಯೂ ಅವಕಾಶ ಕಲ್ಪಿಸಿದ್ದು, ಅದಕ್ಕಾಗಿ 200ರೂ. ನಿಗದಿಪಡಿಸಿದೆ.

ಜನಸಾಮಾನ್ಯರ ಕಾರು ಎಂಬ ಹೆಗ್ಗಳಿಕೆ ಪಡೆದಿರುವ ನ್ಯಾನೋ ಖರೀದಿಗಾಗಿ, ಟಾಟಾ ಸಂಸ್ಥೆ ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂರ್, ಬ್ಯಾಂಕ್ ಆಫ್ ಇಂಡಿಯಾ ಹಾಗೂ ದೇನಾ ಬ್ಯಾಂಕ್ ಸೇರಿದಂತೆ 15 ನ್ಯಾಷನಲ್ ಬ್ಯಾಂಕ್‌ ಜತೆ ಸಾಲ ನೀಡಿಕೆಗಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಟಾಟಾ ಸಂಸ್ಥೆ ವಿವರಿಸಿದೆ.

ಗುಜರಾತ್‌ನ ಸಾನಂದ್‌ನಲ್ಲಿ ನೂತನವಾಗಿ ಆರಂಭವಾಗಿರುವ ಟಾಟಾ ಶಾಖೆಯಲ್ಲಿ ಆರಂಭಿಕವಾಗಿ 250,000 ಕಾರು ಉತ್ಪಾದನೆಯಾಗಲಿದ್ದು, ಮುಂದಿನ ವರ್ಷದ ಅಂತ್ಯದೊಳಗೆ 500,000 ಕಾರು ಮಾರುಕಟ್ಟೆಗೆ ಬರಲಿದೆ ಎಂದು ತಿಳಿಸಿದೆ.

ಏಪ್ರಿಲ್ 4ರಿಂದ ಅಧಿಕೃತವಾಗಿ ನ್ಯಾನೋ ಮಾರಾಟಕ್ಕಾಗಿ ಬುಕ್ಕಿಂಗ್ ಆರಂಭಿಸಿದ್ದು, ಕಳೆದ ಮೂರು ದಿನಗಳಲ್ಲಿ 218 ಡೀಲರ್‌ಶಿಪ್ಸ್‌ಗಳಲ್ಲಿ 51ಸಾವಿರ ಅರ್ಜಿಗಳು ಮಾರಾಟವಾಗಿರುವುದಾಗಿ ಟಾಟಾ ಕಂಪೆನಿ ಮಂಗಳವಾರ ತಿಳಿಸಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸರ್ಬಿಯಾ: 8000 ಸರ್ಕಾರ ಉದ್ಯೋಗಕ್ಕೆ ಕತ್ತರಿ
ಕಾರು-ಬೈಕ್ ಮಾರಾಟದಲ್ಲಿ ಹೆಚ್ಚಳ
ಮಹಾವಂಚನೆ: 'ಸತ್ಯಂ' ರಾಜುಗೆ ಜೀವಾವಧಿ ಶಿಕ್ಷೆ ?
ಸತ್ಯಂ ಮಾರಾಟ ತಡೆಯಲು ವಿನಂತಿ
ಬೇಸಿಗೆ ಕೊನೆವರೆಗೆ ಚಿನ್ನದ ಬೆಲೆಯಲ್ಲಿ ಇಳಿಕೆ
ಒಡೆಯದ ಗಾಜುಗಳು ಸದ್ಯದಲ್ಲೇ ಲಭ್ಯ!