ಕಡಿಮೆ ಹೊಗೆಯುಗುಳುವ ಕಾರು ತಯಾರಿಕೆಗಾಗಿ ಭಾರತದ ಪ್ರತಿಷ್ಠಿತ ಟಾಟಾ ಕಂಪೆನಿ ಒಡೆತನದ ಜಾಗ್ವಾರ್ ಲ್ಯಾಂಡ್ ರೋವರ್ ಕಂಪೆನಿ ಯುರೋಪಿಯನ್ ಇನ್ವೆಸ್ಟ್ಮೆಂಟ್ ಬ್ಯಾಂಕ್(ಇಐಬಿ)ನಿಂದ 366ಮಿಲಿಯನ್ ಯುರೋ (2,450ಕೋಟಿ) ಸಾಲ ಪಡೆದಿರುವುದಾಗಿ ತಿಳಿಸಿದೆ.
ಯುರೋಪಿಯನ್ ಯುನೈಟೆಡ್ ಕಾರು ತಯಾರಿಕಾ ಕಂಪೆನಿಯಾದ ಜಾಗ್ವಾರ್ ಹಾಗೂ ನಿಸ್ಸಾನ್ಗೆ 866ಮಿಲಿಯನ್ ಯುರೋ ಸಾಲಕ್ಕೆ ಅನುಮತಿ ನೀಡಿರುವುದಾಗಿ ಇಐಬಿ ತಿಳಿಸಿದೆ.
ಜಾಗ್ವಾರ್ ಲ್ಯಾಂಡ್ ರೋವರ್ ಹಾಗೂ ನಿಸ್ಸಾನ್ ಕಂಪೆನಿ ಸಂಡರ್ಲ್ಯಾಂಡ್ ಪ್ಲ್ಯಾಂಟ್ನಿಂದ ಪ್ರಸಕ್ತ ಸಾಲಿನಲ್ಲಿ ಸುಮಾರು 1,200 ನೌಕರರನ್ನು ಕೆಲದಿಂದ ವಜಾಗೊಳಿಸಲಾಗಿತ್ತು.
ಆದರೆ ಕಂಪೆನಿಯು ಉತ್ತಮ ಸ್ಥಿತಿಯಲ್ಲಿ ಪ್ರಗತಿ ಕಾಣುತ್ತಿದ್ದು, ಆರ್ಥಿಕ ಹೊಡೆತವನ್ನು ಶೀಘ್ರವೇ ಬಗೆಹರಿಸಲಾಗುವುದು ಎಂಬ ಭರವಸೆ ಮೇರೆಗೆ ಇಐಬಿಯಿಂದ ಸಾಲ ಪಡೆಯಲಾಗಿದೆ ಎಂದು ಜಾಗ್ವಾರ್ ಲ್ಯಾಂಡ್ ರೋವರ್ ವಕ್ತಾರ ತಿಳಿಸಿದ್ದಾರೆ.
ಜಪಾನ್ ಮೂಲದ ನಿಸ್ಸಾನ್ ಕಂಪೆನಿ ಕೂಡ 400ಮಿಲಿಯನ್ ಯುರೋದಷ್ಟು ಸಾಲ ಪಡೆದಿದೆ. ಉಳಿದ ಹಣ ಭಾರತದಲ್ಲಿ ಕಡಿಮೆ ಹೊಗೆಯುಗುಳುವ ಸಣ್ಣ ಕಾರು ತಯಾರಿಕೆಗಾಗಿ ವೋಲ್ಕ್ಸಾವ್ಯಾಗನ್ ಕಂಪೆನಿಗೆ ನೀಡಲಾಗಿದೆ. |