ಕೋಲ್ಕತ್ತಾ: ಕರ್ನಾಟಕಕ್ಕೆ ಬರಬಹುದಾಗಿದ್ದ ಟಾಟಾ ಸಮೂಹದ 800 ಕೋಟಿಗಳಷ್ಟು ಹೂಡಿಕೆಯ ಉಕ್ಕು ತಯರಿಕಾ ಘಟಕ ಪಶ್ಚಿಮ ಬಂಗಾಳ ಸರ್ಕಾರದ ಮನವೊಲಿಕೆ ಪ್ರಯತ್ನದ ಹಿನ್ನೆಲೆಯಲ್ಲಿ ಕೈತಪ್ಪುವ ಸಂಭವವಿದೆ. ಭೂಸ್ವಾಧೀನಕ್ಕೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಟಾಟಾ ಮೆಕಾಲಿಕ್ಸ್ ಲಿಮಿಟೆಡ್ ಕರ್ನಾಟಕಕ್ಕೆ ಸ್ಥಳಾಂತರಿಸುವುದಾಗಿ ಪ್ರಕಟಿಸಿತ್ತು. ಇದರಿಂದ ವಿಚಲಿತರಾದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಇದೀಗ ಕಾರ್ಖಾನೆಯನ್ನು ತಮ್ಮ ರಾಜ್ಯದಲ್ಲೇ ಉಳಿಸಲು ಮುಂದಾಗಿದ್ದಾರೆ. |