ನವದೆಹಲಿ: ಭಾರತದ ನಗರ ಪ್ರದೇಶದಲ್ಲಿ ಸರಕುಗಳಿಗೆ ಬೇಡಿಕೆ ಕುಸಿಯುತ್ತಿದ್ದರೂ, ಹಳ್ಳಿಗಾಡಿನ ಪ್ರದೇಶಗಳಲ್ಲಿ ಈಗ ಗ್ರಾಹಕ ವಸ್ತುಗಳು, ಅಟೋಮೊಬೈಲ್ ತಯಾರಕರು ಹಾಗೂ ವ್ಯವಸ್ಥಿತ ರೀಟೇಲ್ ಬ್ಯುಸಿನೆಸ್ ಸಂಸ್ಥೆಗಳಲ್ಲಿ ಬೇಡಿಕ ಹೆಚ್ಚುತ್ತಿದೆ. ಅಸೋಚಾಮ್ ಎಂಬಹ ವಾಣಿಜ್ಯೋದ್ಯಮ ಸಂಸ್ಥೆ ಬಿಡುಗಡೆ ಮಾಡಿದ ಗ್ರಾಮ ಭಾರತ ಉದಯ ವರದಿಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. |