ಜಗತ್ತಿನ ಅತಿ ಕಡಿಮೆ ಬೆಲೆಯ ಜನಸಾಮಾನ್ಯರ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಟಾಟಾದ ನ್ಯಾನೊ ಕಾರು ಬುಕ್ಕಿಂಗ್‌ಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶೇ.100 ಸಾಲ ಯೋಜನೆಗೆ ಅವಕಾಶ ಕಲ್ಪಿಸಿದೆ.
ನ್ಯಾನೋ ಕಾರು ಬುಕ್ಕಿಂಗ್ ಗುರುವಾರದಿಂದ ಅಧಿಕೃತವಾಗಿ ಚಾಲನೆಗೊಂಡಿದೆ. ಬುಕ್ಕಿಂಗ್ ಮೊತ್ತ/ಸಾಲ 95ಸಾವಿರು ರೂ.ಗಳಿಗೆ ಬ್ಯಾಂಕ್‌ನ ಸಾಲ ಮಂಜೂರಾತಿ ಶುಲ್ಕ 2999ರೂ. , 1,20,000 ಸಾವಿರು ರೂ.ಗಳಿಗೆ ಸಾಲ ಮಂಜೂರಾತಿ ಶುಲ್ಕ 3,499 ರೂ. ಹಾಗೂ 1,40,000ರೂ.ಗಳಿಗೆ ಸಾಲ ಮಂಜೂರಾತಿ ಶುಲ್ಕ 3,999ರೂ.ಗಳು ಅರ್ಜಿದಾರರು ಗುರುತಿನ ಚೀಟಿ, ವಿಳಾಸದ ಪ್ರತಿ, ಪಾನ್ ಕಾರ್ಡ್ ಪ್ರತಿ ಸಲ್ಲಿಸಬೇಕು.
ಏಪ್ರಿಲ್ 9ರಿಂದ 25ರವರೆಗೆ ಬುಕ್ಕಿಂಗ್ ನಡೆಯಲಿದ್ದು, ಇಂದಿನಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅರ್ಜಿಯನ್ನು ವಿತರಣೆ ಆರಂಭಿಸಿದೆ. ಸುಮಾರು 850 ನಗರಗಳಲ್ಲಿನ 1,350 ಶಾಖೆಗಳಲ್ಲಿ ನ್ಯಾನೋ ಬುಕ್ಕಿಂಗ್ ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರೆತಿದೆ.
ಭಾರತದ ಬೃಹತ್ ಕಾರು ಉತ್ಪಾದಕ ಸಂಸ್ಥೆಯಾಗಿರುವ ಟಾಟಾ ನ್ಯಾನೋ ಬುಕ್ಕಿಂಗ್ ಬ್ಯಾಂಕ್ ಶಾಖೆಗಳಲ್ಲಿ ಅಲ್ಲದೇ ಭಾರತದಲ್ಲಿ ಆನ್ ಲೈನ್‌ನಲ್ಲಿಯೂ ಅವಕಾಶ ಕಲ್ಪಿಸಿದ್ದು, ಅದಕ್ಕಾಗಿ 200ರೂ. ನಿಗದಿಪಡಿಸಿದೆ.
ಜನಸಾಮಾನ್ಯರ ಕಾರು ಎಂಬ ಹೆಗ್ಗಳಿಕೆ ಪಡೆದಿರುವ ನ್ಯಾನೋ ಖರೀದಿಗಾಗಿ, ಟಾಟಾ ಸಂಸ್ಥೆ ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂರ್, ಬ್ಯಾಂಕ್ ಆಫ್ ಇಂಡಿಯಾ ಹಾಗೂ ದೇನಾ ಬ್ಯಾಂಕ್ ಸೇರಿದಂತೆ 15 ನ್ಯಾಷನಲ್ ಬ್ಯಾಂಕ್ ಜತೆ ಸಾಲ ನೀಡಿಕೆಗಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಟಾಟಾ ಸಂಸ್ಥೆ ವಿವರಿಸಿದೆ.
|