ಬಹುಕೋಟಿ ಐಪಿಐ ಗ್ಯಾಸ್ ಪೈಪ್ ಲೈನ್ ಯೋಜನೆ ಹಿನ್ನೆಲೆಯಲ್ಲಿ ಪಾಕಿಸ್ತಾನ ಭಾರತವನ್ನು ಹೊರತುಪಡಿಸಿ ಇರಾನ್ ಜತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ.
ಪಾಕಿಸ್ತಾನ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ, ಪಾಕಿಸ್ತಾನ್-ಇರಾನ್ ಗ್ಯಾಸ್ ಪೈಪ್‌ಲೈನ್ ಯೋಜನೆಗೆ ಅನುಮತಿ ನೀಡಿದೆ. ಅಲ್ಲದೇ ಸ್ಥಳೀಯ ಅವಶ್ಯಕತೆಯನ್ನು ಪೂರೈಸುವ ನಿಟ್ಟಿನಲ್ಲಿ ಇರಾನ್‌ನಿಂದ 750 ಮಿಲಿಯನ್ ಕ್ಯೂಬಿಕ್ ಗ್ಯಾಸ್ ಖರೀದಿಗಾಗಿಯೂ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಐಪಿಐನ 2,775ಕಿ.ಮೀ. ದೂರದ ಗ್ಯಾಸ್ ಪೈಪ್‌ಲೈನ್ ಯೋಜನೆಗೆ ಭಾರತ ಯಾವುದೇ ಖಚಿತವಾದ ಸೂಚನೆಯನ್ನು ನೀಡಿಲ್ಲ ಎಂದು ಪಾಕ್ ಮುಖಂಡರು ತಿಳಿಸಿದ್ದಾರೆ. ಈ ಯೋಜನೆಯ ಒಟ್ಟು ಮೊತ್ತ 7.5ಬಿಲಿಯನ್ ಅಮೆರಿಕನ್ ಡಾಲರ್. ಪೈಪ್ ಲೈನ್ ಯೋಜನೆ ಅಗತ್ಯವಿದ್ದಲ್ಲಿ ಭಾರತ ನಾವು ಮುಂದುವರಿಯುವ ಮೊದಲು ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿ ನಿರ್ಧಾರ ಪ್ರಕಟಿಸುವಂತೆ ಪಾಕ್ ತಿಳಿಸಿದೆ.
ಗಿಲಾನಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಇರಾನ್‌ನಿಂದ ಗ್ಯಾಸ್ ಆಮದು ಮಾಡಿಕೊಳ್ಳುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ಖಾತನೆ ಸಚಿವ ಕ್ವಾಮಾರ್ ಜಮಾನ್ ಖೈರಾ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು. |