ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಟಾಟಾ ನ್ಯಾನೋ ಬುಕ್ಕಿಂಗ್ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಾಟಾ ನ್ಯಾನೋ ಬುಕ್ಕಿಂಗ್ ಆರಂಭ
PTI
ಜನಸಾಮಾನ್ಯರ ಬಹುನಿರೀಕ್ಷೆಯ ಕನಸಿನ ಕಾರು ಟಾಟಾ ನ್ಯಾನೋದ ಬುಕ್ಕಿಂಗ್ ಕರ್ನಾಟಕ ಸೇರಿದಂತೆ ರಾಷ್ಟ್ರಾದ್ಯಂತ ಗುರುವಾರ ಆರಂಭವಾಗಿದ್ದು, ಇದು ಎಪ್ರಿಲ್ 25ರ ತನಕ ಮುಂದುವರಿಯಲಿದೆ.

"ಮುಂಜಾನೆಯಿಂದಲೇ ನ್ಯಾನೋ ಕಾರುಗಳ ಬುಕ್ಕಿಂಗ್ ಆರಂಭವಾಗಿದ್ದು, ಜನರ ಪ್ರತಿಕ್ರಿಯೆ ಉತ್ತೇಜನಕಾರಿಯಾಗಿದೆ" ಎಂಬುದಾಗಿ ಟಾಟಾ ಮೋಟಾರ್ಸ್‌ ವಕ್ತಾರರು ಹೇಳಿದ್ದಾರೆ.

ಒಂದು ಲಕ್ಷ ರೂಪಾಯಿ ಕಾರು ಖರೀದಿಯ ಅರ್ಜಿಯ ಮಾರಾಟವು ಎಪ್ರಿಲ್ ಒಂದರಂದು ಆರಂಭವಾಗಿದ್ದು, ಜನತೆಯ ಪ್ರತಿಕ್ರಿಯೆ ಆಶಾದಾಯಕವಾಗಿದೆ ಎಂದು ಕಂಪೆನಿಯ ಹೇಳಿಕೆ ತಿಳಿಸಿದೆ. ಟಾಟಾ ನ್ಯಾನೋ ವೆಬ್ ಸೈಟ್ ಐದು ಕೋಟಿಗೂ ಹೆಚ್ಚು ಹಿಟ್‌ಗಳನ್ನು ಗಳಿಸಿದೆ. ಮಾರ್ಚ್ 23ರಂದು ನ್ಯಾನೋ ಅನಾವರಣಗೊಂಡ ಬಳಿಕ 15ದಿನದ ಅವಧಿಯಲ್ಲಿ ಸುಮಾರು 2 ಕೋಟಿ ಹಿಟ್‌ಗಳು ದಾಖಲಾಗಿವೆ.

ಮೊದಲ ಹಂತದಲ್ಲಿ ಟಾಟವು ಒಂದು ಲಕ್ಷಕಾರುಗಳ ಪೂರೈಕೆ ಮಾಡಲಿದ್ದು, ಲಾಟರಿ ಎತ್ತುವ ಮೂಲಕ ಅರ್ಜಿಗಳನ್ನು ಆಯ್ಕೆ ಮಾಡಲಾಗುವುದು. ಕಾರು ಖರೀದಿದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಟಾಟಾ ಸಂಸ್ಥೆಯು ಸಾಲ ಸೌಲಭ್ಯವನ್ನು ಒದಗಿಸಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಐತಿಹಾಸಿಕ ಇಳಿಕೆ ಕಂಡ ಹಣದುಬ್ಬರ: ಶೇ. 0.26ಕ್ಕೆ
ಇರಾನ್ ಪೈಪ್‌ಲೈನ್ ಯೋಜನೆಗೆ ಪಾಕ್ ಅಸ್ತು
ಬ್ಯಾಂಕ್ ರಾಷ್ಟ್ರೀಕರಣ ಕಾನೂನಿಗೆ ಜರ್ಮನ್ ಅಂಕಿತ
ಆರ್ಥಿಕ ಚೇತರಿಕೆಗೆ ಮತ್ತಷ್ಟು ನೆರವು ಅಗತ್ಯ: ಅಹ್ಲುವಾಲಿಯಾ
ನ್ಯಾನೊ: ಎಸ್‌ಬಿಐನಿಂದ ಶೇ.100 ಸಾಲ ಘೋಷಣೆ
ಗ್ರಾಮಮಟ್ಟದಲ್ಲಿ ರೀಟೇಲ್‌ಗೆ ಹೆಚ್ಚಿದ ಬೇಡಿಕೆ