ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ ಆರೋಪಿಗಳ ಮಾದರಿ ಸಹಿ ಸಂಗ್ರಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ ಆರೋಪಿಗಳ ಮಾದರಿ ಸಹಿ ಸಂಗ್ರಹ
ಸತ್ಯಂ ಗೋಲ್ಮಾಲ್ ಪ್ರಕರಣದ ಆರೋಪಿಗಳಾದ, ಸಂಸ್ಥಾಪಕ ರಾಮಲಿಂಗಾ ರಾಜು ಮತ್ತು ಇತರ ನಾಲ್ವರು ಆರೋಪಿಗಳ ಮಾದರಿ ಸಹಿಯನ್ನು ಸಿಬಿಐ ಗುರವಾರ ಸಂಗ್ರಹಿಸಿದೆ.

ಸತ್ಯಂ ಸಂಸ್ಥಾಪಕ ರಾಮಲಿಂಗಾ ರಾಜು, ಅವರ ಸಹೋದರ ರಾಮ ರಾಜು, ಮಾಜಿ ಮುಖ್ಯ ಹಣಕಾಸು ಅಧಿಕಾರಿ ವಡ್ಲಮಣಿ ಶ್ರೀನಿವಾಸ್ ಮತ್ತು ಇಬ್ಬರು ಮಾಜಿ ಲೆಕ್ಕಪರಿಶೋಧಕರಾಗಿರುವ ಎಸ್.ಗೋಪಾಲಕೃಷ್ಣನ್ ಮತ್ತು ತಲ್ಲುರಿ ಶ್ರೀನಿವಾಸ್ ಅವರ ತಲಾ 60 ಸಹಿಗಳನ್ನು ಸಿಬಿಐ ಆರೋಪಿಗಳ ವಕೀಲರ ಸಮಕ್ಷಮದಲ್ಲಿ ನ್ಯಾಯಾಲಯದಲ್ಲಿ ಪಡೆಯಿತು.

ಆರೋಪಿಗಳನ್ನು ಚಂಚಲಗುಡ್ಡ ಜೈಲಿನಿಂದ ಬಿಗಿ ಭದ್ರತೆಯಲ್ಲಿ ಪೊಲೀಸ್ ವ್ಯಾನಿನಲ್ಲಿ ಕರೆತರಲಾಯಿತು. ಅವರ ಸಹಿ ಸಂಗ್ರಹದ ಬಳಿಕ ತಕ್ಷಣವೇ ಅವರನ್ನು ಮರಳಿ ಜೈಲಿಗೆ ಕಳುಹಿಸಲಾಯಿತು.

ಸತ್ಯಂ ಸಂಸ್ಥೆಯಿಂದ ವಶಪಡಿಸಿಕೊಳ್ಳಲಾಗಿರುವ ದಾಖಲೆ ಪತ್ರಗಳಲ್ಲಿರುವ ಸಹಿಯೊಂದಿಗೆ ಹೋಲಿಸಲು ಇವರ ಸಹಿ ಸಂಗ್ರಹಿಸಲು ಸಿಬಿಐ ನ್ಯಾಯಾಲಯದ ಅನುಮತಿ ಪಡೆದಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಔದ್ಯಮಿಕ ವೃದ್ಧಿ ಋಣಾತ್ಮಕ ವಲಯದಲ್ಲಿ
ಟಾಟಾ ನ್ಯಾನೋ ಬುಕ್ಕಿಂಗ್ ಆರಂಭ
ಐತಿಹಾಸಿಕ ಇಳಿಕೆ ಕಂಡ ಹಣದುಬ್ಬರ: ಶೇ. 0.26ಕ್ಕೆ
ಇರಾನ್ ಪೈಪ್‌ಲೈನ್ ಯೋಜನೆಗೆ ಪಾಕ್ ಅಸ್ತು
ಬ್ಯಾಂಕ್ ರಾಷ್ಟ್ರೀಕರಣ ಕಾನೂನಿಗೆ ಜರ್ಮನ್ ಅಂಕಿತ
ಆರ್ಥಿಕ ಚೇತರಿಕೆಗೆ ಮತ್ತಷ್ಟು ನೆರವು ಅಗತ್ಯ: ಅಹ್ಲುವಾಲಿಯಾ