ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜಾಗತಿಕ ಕುಸಿತ: ಪ್ರವಾಸಿಗರ ಸಂಖ್ಯೆಯಲ್ಲೂ ತೀವ್ರ ಇಳಿಮುಖ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಾಗತಿಕ ಕುಸಿತ: ಪ್ರವಾಸಿಗರ ಸಂಖ್ಯೆಯಲ್ಲೂ ತೀವ್ರ ಇಳಿಮುಖ
ಜಾಗತಿಕ ಆರ್ಥಿಕ ಕುಸಿತದ ಹಿನ್ನಲೆಯಲ್ಲಿ ಪ್ರವಾಸೋದ್ಯಮ ಕೂಡ ಹೊಡೆತ ಕಂಡಿದೆ. ಕಳೆದ ವರ್ಷದ ವಿದೇಶಿ ಪ್ರವಾಸಿಗರ ಸಂಖ್ಯೆಯನ್ನು ಈ ವರ್ಷಕ್ಕೆ ಹೋಲಿಸಿದಾಗ ಗಮನಾರ್ಹ ಕುಸಿತವಾಗಿರುವುದು ಕಂಡು ಬಂದಿದೆ.

2008ರ ಮಾರ್ಚ್ ತಿಂಗಳಲ್ಲಿ ಭಾರತಕ್ಕೆ 541,478 ಮಂದಿ ವಿದೇಶೀ ಪ್ರವಾಸಿಗರು ಬಂದಿದ್ದರೆ, ಅದು ಈ ಬಾರಿ ಶೇಕಡಾ 12.9ರಷ್ಟು ಕುಸಿತ ಕಂಡಿದೆ. ಅಂದರೆ ಕೇವಲ 471,627 ಮಂದಿ ಮಾತ್ರ ಭಾರತಕ್ಕೆ ಆಗಮಿಸಿದ್ದಾರೆ.

ಈ ಕುಸಿತಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿನ ಅಲ್ಲೋಲ-ಕಲ್ಲೋಲಗಳೇ ಕಾರಣ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ವಿದೇಶೀ ಪ್ರವಾಸಿಗರನ್ನು ಭಾರತೀಯ ಪ್ರವಾಸಿ ಸ್ಥಳಗಳ ಕಡೆ ಆಕರ್ಷಿಸಲು ಯತ್ನಿಸಿದರೂ ಕೂಡ ಈ ನಿಟ್ಟಿನಲ್ಲಿ ಹೆಚ್ಚಿನ ಲಾಭವಾಗಿಲ್ಲ ಎಂದಿದ್ದಾರೆ.

ಪ್ರವಾಸಿಗಳನ್ನು ಆಕರ್ಷಿಸಲು ವಿದೇಶಗಳಲ್ಲಿ ಇತರ ಪ್ರವಾಸಿ ಸಂಸ್ಥೆಗಳ ಸಹಯೋಗದೊಂದಿಗೆ ರೋಡ್ ಶೋಗಳನ್ನು ನಡೆಸಲಾಗಿದೆ. ಸಿಂಗಾಪುರ, ಆಸ್ಟ್ರೇಲಿಯಾ, ಐರ್ಲೆಂಡ್, ಮಲೇಷಿಯಾ ಮತ್ತು ಇಂಗ್ಲೆಂಡ್‌ಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಜಪಾನ್, ಕೊರಿಯಾ, ಮೆಕ್ಸಿಕೋ ಸೇರಿದಂತೆ ಹಲವು ದೇಶಗಳಲ್ಲಿ ಪ್ರಚಾರ ನಡೆಸುವ ಉದ್ದೇಶ, ಯೋಜನೆಗಳನ್ನು ಇಟ್ಟುಕೊಂಡಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಸ್ಮಯ ಭಾರತ ಎಂಬ ಹೆಸರಿನಲ್ಲಿ ನಾವು ಮೇಯಲ್ಲಿ ತಿಂಗಳುಗಳಷ್ಟು ದೀರ್ಘ ಕಾಲ ಅಮೆರಿಕಾ ಮತ್ತು ಕೆನಡಾದ ನಗರಗಳಾದ ಬೋಸ್ಟನ್, ಲಾಸ್ ಎಂಜಲೀಸ್, ಕ್ಯಾಲಿಫೋರ್ನಿಯಾ, ಸಾನ್ ಫ್ರಾನ್ಸಿಸ್ಕೋ ಮತ್ತು ಟೊರೆಂಟೋಗಳಲ್ಲಿ ಪ್ರವಾಸಿಗರನ್ನು ಸೆಳೆಯುವ ಯತ್ನವನ್ನು ಮಾಡಲಿದ್ದೇವೆ ಎಂದೂ ಅವರು ಮಾಹಿತಿ ನೀಡಿದರು.

ಕಳೆದ ವರ್ಷದ ಜನವರಿಯಲ್ಲಿ 591,337 ವಿದೇಶೀ ಪ್ರವಾಸಿಗರು ಭಾರತ ಪ್ರವಾಸ ಕೈಗೊಂಡಿದ್ದರೆ ಅದು ಈ ವರ್ಷಕ್ಕಾಗುವಾಗ 487,262ಕ್ಕೆ ಇಳಿದಿದೆ. ಫೆಬ್ರವರಿ ತಿಂಗಳಿನಲ್ಲಿ ಏರಿಕೆ ಕಂಡಿದ್ದರೂ ಸಹ ಕಳೆದ ವರ್ಷಕ್ಕೆ ಹೋಲಿಸಿದಾಗ ಗಮನಾರ್ಹವಾಗಿಲ್ಲ. ಕಳೆದ ವರ್ಷದ ಪೆಬ್ರವರಿಯಲ್ಲಿ 561,393 ಪ್ರವಾಸಿಗರು ಬಂದಿದ್ದರೆ ಈ ವರ್ಷ 501,885 ಮಂದಿ ಮಾತ್ರ ಪ್ರವಾಸ ಕೈಗೊಂಡಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಸತ್ಯಂ'ನಿಂದ 2000 ಕೋಟಿ ಕೇಳಲಿರುವ ರಾಜು ಕುಟುಂಬ?
ಮೇತಾಸ್ ಅಧ್ಯಕ್ಷರಾಗಿ ರಾಮಲಿಂಗಂ
ಕೈಗಾರಿಕೋತ್ಪನ್ನದಲ್ಲಿ ಶೇ.1.2ರಷ್ಟು ಕುಸಿತ
ಫೋಬ್ಸ್ ಪಟ್ಟಿಯಲ್ಲಿ 47 ಭಾರತೀಯ ಕಂಪನಿಗಳು
ಸತ್ಯಂ ಆರೋಪಿಗಳ ಮಾದರಿ ಸಹಿ ಸಂಗ್ರಹ
ಔದ್ಯಮಿಕ ವೃದ್ಧಿ ಋಣಾತ್ಮಕ ವಲಯದಲ್ಲಿ