ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮೈಕ್ರೋಸಾಫ್ಟ್, ಯಾಹೂ ಮಾತುಕತೆ ಪುನರಾರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೈಕ್ರೋಸಾಫ್ಟ್, ಯಾಹೂ ಮಾತುಕತೆ ಪುನರಾರಂಭ
ಗೂಗಲ್‌‌ನೊಂದಿಗೆ ಸ್ಪರ್ಧಾತ್ಮಕತೆಯಲ್ಲಿ ಹಿನ್ನೆಡೆ ಅನುಭವಿಸಿದ ಮೈಕ್ರೋಸಾಫ್ಟ್ ಮತ್ತು ಯಾಹೂ ಸಂಸ್ಥೆಗಳು ಪರಸ್ಪರ ಒಪ್ಪಂದಕ್ಕೆ ಬರಲು ಚರ್ಚೆ ನಡೆಸಲಾಗುತ್ತಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ

ಬಿಲ್‌ಗೇಟ್ಸ್ ಸಂಚಾಲಿತ ಮೈಕ್ರೋಸಾಫ್ಟ್ ಕಂಪೆನಿ, ಗೂಗಲ್‌ನೊಂದಿಗೆ ಸ್ಪರ್ಧೆಯಲ್ಲಿ ವಿಫಲವಾದ ಕೇವಲ ಒಂದು ವರ್ಷದೊಳಗೆ ಯಾಹೂ ಸಂಸ್ಥೆಯೊಂದಿಗೆ ಪಾಲುದಾರಿಕೆ ಕುರಿತಂತೆ ಮಾತುಕತೆ ನಡೆಸುತ್ತಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಪ್ರಬಲ ಎದುರಾಳಿಯಾದ ಗೂಗಲ್‌‌ ಸಂಸ್ಥೆಯನ್ನು ನಿಯಂತ್ರಿಸಲು ಅಗತ್ಯವಾದ ರೂಪರೇಷೆಗಳ ಬಗ್ಗೆ ಉಭಯ ಕಂಪೆನಿಗಳು ಚರ್ಚಿಸುತ್ತಿವೆ ಎನ್ನಲಾಗಿದೆ.

ಸಿಲಿಕಾನ್ ವ್ಯಾಲಿಯಲ್ಲಿ ಎದುರಾಳಿ ಸಂಸ್ಥೆಯ ಖರೀದಿಗೆ ಸಲ್ಲಿಸಿದ ಮೈಕ್ರೋಸಾಫ್ಟ್‌ನ 44 ಬಿಲಿಯನ್ ಡಾಲರ್‌ ಬಿಡ್‌ ತಿರಸ್ಕಾರ ಮತ್ತು ಯಾಹೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆರ್ರಿ ಯಾಂಗ್ ಅಧಿಕಾರದಿಂದ ನಿರ್ಗಮಿಸಿದ ನಂತರ ಉಭಯ ಕಂಪೆನಿಗಳು ಒಂದಾಗಿ ಗೂಗಲ್ ದೈತ್ಯನನ್ನು ಎದುರಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಯಾಹೂ ನೂತನ ಸಿಇಒ ಸ್ಥಾನಕ್ಕೆ ಬಂದ ಕರೋಲ್ ಬರ್ಟ್ಜ್‌ ಅಡಳಿತಾತ್ಮಕ ಸಮಸ್ಯೆಗಳನ್ನು ನಿವಾರಿಸಿ ಮೈಕ್ರೋಸಾಫ್ಟ್‌ನ ಸಿಇಒ ಸ್ಟೀವ್ ಬಲ್ಲಮೆರ್‌ ಅವರೊಂದಿಗೆ ಹೊಸದಾಗಿ ಮಾತುಕತೆ ಮುಂದುವರಿಸಿದ್ದಾರೆ.

ಗೂಗಲ್ ದೈತ್ಯಾಕಾರವಾಗಿ ಬೆಳೆಯವುದನ್ನು ತಡೆದು ಉಭಯ ಕಂಪೆನಿಗಳಿಗೆ ಲಾಭವಾಗುವ ನಿಟ್ಟಿನಲ್ಲಿ ಯಾಹೂ ಮತ್ತು ಮೈಕ್ರೋಸಾಫ್ಟ್‌ ಕಂಪೆನಿಗಳು ಮುಂದುವರಿದಿದ್ದು, ಮಾರುಕಟ್ಟೆಯಲ್ಲಿ ಗೂಗಲ್‌ಗೆ ಹೋಲಿಸಿದಲ್ಲಿ ಯಾಹೂ ಮತ್ತು ಮೈಕ್ರೋಸಾಫ್ಟ್‌ ಕಂಪೆನಿಗಳು ಭಾರಿ ಹಿನ್ನೆಡೆ ಅನುಭವಿಸಿವೆ.

ಜಾಗತಿಕ ಅಂತರ್ಜಾಲ ಮಾರುಕಟ್ಟೆಯಲ್ಲಿ ಯಾಹೂ ಶೇ.20.6 ರಷ್ಟು ಪಾಲನ್ನು ಹೊಂದಿದ್ದು, ಮೈಕ್ರೋಸಾಫ್ಟ್‌ ಶೇ.8ಕ್ಕೆ ಕುಸಿತಗೊಂಡಿದ್ದು ಉಳಿದ ಪಾಲನ್ನು ಗೂಗಲ್ ಹೊಂದಿದೆ ಎಂದು ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸ್ಪೈಸ್ ‌ಜೆಟ್‌ನಿಂದ ವಿಮೆ ಯೋಜನೆ ಆರಂಭ
ಸರ್ಕಾರಿ ಕಂಪನಿಗಳಲ್ಲಿ 37 ಹುದ್ದೆಗಳು ಖಾಲಿ
ಚಿನ್ನಾಭರಣ ಮಾರುಕಟ್ಟೆ ಕುಸಿತ ಸಾಧ್ಯತೆ?
ಎಸ್‌ಬಿಐ: ಠೇವಣಿ ದರ ಶೇ.50 ಕಟ್
ಉದ್ಯೋಗಿಗಳಲ್ಲಿ ಸಾಮಾಜಿಕ ಭದ್ರತೆಯ ಕೊರತೆ
ಜಾಗತಿಕ ಕುಸಿತ: ಪ್ರವಾಸಿಗರ ಸಂಖ್ಯೆಯಲ್ಲೂ ತೀವ್ರ ಇಳಿಮುಖ