ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 2010ರಲ್ಲಿ ಸ್ಟೀಲ್ ಉತ್ಪಾದನೆ ಆರಂಭ:ಟಾಟಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2010ರಲ್ಲಿ ಸ್ಟೀಲ್ ಉತ್ಪಾದನೆ ಆರಂಭ:ಟಾಟಾ
ಜಗತ್ತಿನ ಆರನೇ ಬೃಹತ್ ಉಕ್ಕು ಉತ್ಪಾದಕ ಸಂಸ್ಥೆಯಾದ ಟಾಟಾ ಸ್ಟೀಲ್,ಮುಂಬರುವ ವರ್ಷದಿಂದ ದಕ್ಷಿಣ ಆಫ್ರಿಕಾದ ಸೆಡಿಬಂಗ್‌ ಗಣಿಯಲ್ಲಿ ಉತ್ಪಾದನೆ ಐರಂಭಿಸಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ದಕ್ಷಿಣ ಆಫ್ರಿಕಾದ ಸೆಡಿಬಂಗ್‌ ಕಬ್ಬಿಣ ಅದಿರಿನ ಗಣಿಯಲ್ಲಿ ಮುಂದಿನ ವರ್ಷದಿಂದ ಉತ್ಪಾದನೆಯನ್ನು ಆರಂಭಿಸಲಿದ್ದು, ವಾರ್ಷಿಕವಾಗಿ 2 ಮಿಲಿಯನ್ ಟನ್ ಉಕ್ಕು ದೊರೆಯುವ ನಿರೀಕ್ಷೆಯಿದೆ ಎಂದು ಟಾಟಾಸ್ಟೀಲ್ ವ್ಯವಸ್ಥಾಪಕ ನಿರ್ದೇಶಕ ಬಿ.ಮಧುರಾಮನ್ ಹೇಳಿದ್ದಾರೆ.

ಟಾಟಾ ಸ್ಟೀಲ್ ಕಂಪೆನಿ ದಕ್ಷಿಣ ಆಫ್ರಿಕಾ ಮತ್ತು ಕೆನಡಾ ದೇಶಗಳಲ್ಲಿರುವ ಘಟಕಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದು, ಮೊಝಾಂಬಿಕ್‌ ಗಣಿ ಪ್ರದೇಶದಲ್ಲಿ ದೊರೆಯುವ ಕಲ್ಲಿದ್ದಲು ಬ್ಲಾಕ್ಸ್‌ಗಳ ಬಗ್ಗೆ ಹೆಚ್ಚಿನ ಗಮನಹರಿಸಲಾಗಿದೆ ಎಂದು ತಿಳಿಸಿದ್ದಾರೆ.

ಸೆಡಿಬಂಗ್ ಗಣಿಯಲ್ಲಿ ಅಂದಾಜು 50 ಮಿಲಿಯನ್‌ ಟನ್ಸ್‌ ಉಕ್ಕಿನ ಅದಿರು ಲಭ್ಯವಿದ್ದು, ಕೆನಡಾದಲ್ಲಿರುವ ಉಕ್ಕಿನ ಗಣಿಗಳಲ್ಲಿ 100 ಮಿಲಿಯನ್ ಟನ್‌ ಉಕ್ಕಿನ ಅದಿರುವ ದೊರೆಯುವ ನಿರೀಕ್ಷೆಯಿದೆ ಎಂದು ಮಧುರಾಮನ್ ಹೇಳಿದ್ದಾರೆ.

ಸಣ್ಣ ಗಣಿ ಪ್ರದೇಶಗಳಲ್ಲಿ ಹೂಡಿಕೆ ಕಡಿಮೆಯಿದ್ದು, ಬೃಹತ್ ಗಣಿಗಳಲ್ಲಿ ಮುಂದಿನ ಕೆಲ ವರ್ಷಗಳವರೆಗೆ ಹೂಡಿಕೆಯ ಅಗತ್ಯವಿಲ್ಲ. ಮೊಝಾಂಬಿಕ್‌ ಗಣಿ ಪ್ರದೇಶದಲ್ಲಿ ದೊರೆಯುವ ಕಲ್ಲಿದ್ದಲು ಬ್ಲಾಕ್ಸ್‌ಗಳ ಗಣಿಗಳಲ್ಲಿ ಟಾಟಾ ಸ್ಟೀಲ್ ಶೇ.35 ರಷ್ಟು ಶೇರುಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.

ಟಾಟಾ ಸ್ಟೀಲ್ ವ್ಯವಸ್ಥಾಪಕ ನಿರ್ದೇಶಕ ಮಧುರರಾಮನ್ ಮಾತನಾಡಿ, ಜಗತ್ತಿನ ಅತಿ ಕಡಿಮೆ ದರದ ಕಾರು ನ್ಯಾನೋ ತಯಾರಿಕೆಗೆ ಅಗತ್ಯವಾಗಿರುವ ಉಕ್ಕಿನ ಪ್ಲೇಟ್‌ಗಳನ್ನು ಸರಬರಾಜು ಮಾಡುವ ಕುರಿತಂತೆ ಟಾಟಾ ಮೋಟಾರ್ಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆದಿದೆ ಎಂದು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಟೀಲ್, ಉತ್ಪಾದನೆ, ಟಾಟಾ, tata steel, mines
ಮತ್ತಷ್ಟು
ಇನ್ಫೋಸಿಸ್‌ನಿಂದ 2100 ಉದ್ಯೋಗಿಗಳ ವಜಾ
ಮೈಕ್ರೋಸಾಫ್ಟ್, ಯಾಹೂ ಮಾತುಕತೆ ಪುನರಾರಂಭ
ಸ್ಪೈಸ್ ‌ಜೆಟ್‌ನಿಂದ ವಿಮೆ ಯೋಜನೆ ಆರಂಭ
ಸರ್ಕಾರಿ ಕಂಪನಿಗಳಲ್ಲಿ 37 ಹುದ್ದೆಗಳು ಖಾಲಿ
ಚಿನ್ನಾಭರಣ ಮಾರುಕಟ್ಟೆ ಕುಸಿತ ಸಾಧ್ಯತೆ?
ಎಸ್‌ಬಿಐ: ಠೇವಣಿ ದರ ಶೇ.50 ಕಟ್