ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಪ್ರತಿಭಟನೆ: ಇಂಡೋ-ಏಷಿಯನ್ ಶೃಂಗಸಭೆ ರದ್ದು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರತಿಭಟನೆ: ಇಂಡೋ-ಏಷಿಯನ್ ಶೃಂಗಸಭೆ ರದ್ದು
ಥೈಲ್ಯಾಂಡ್‌ನ ಪಟ್ಟಾಯಂನಲ್ಲಿ ನಡೆಯುತ್ತಿದ್ದ ಇಂಡೋ-ಏಷಿಯನ್ ಶೃಂಗಸಭೆಯಲ್ಲಿ ಸರಕಾರಿ ವಿರೋಧಿ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದರಿಂದ ಸಭೆಯನ್ನು ರದ್ದುಗೊಳಿಸಿದ್ದು, ಉಪಸ್ಥಿತರಿದ್ದ ನಾಯಕರನ್ನು ಸುರಕ್ಷಿತವಾಗಿ ಹೊರಗೆ ಕರೆತರಲು ಹೆಲಿಕಾಪ್ಟರ್‌ಗಳನ್ನು ಬಳಸಲಾಯಿತು ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಹಾಜರಿದ್ದ ಕೇಂದ್ರ ವಾಣಿಜ್ಯ ಖಾತೆ ಸಚಿವ ಕಮಲ್‌ನಾಥ್ ಅವರು ಸುರಕ್ಷಿತವಾಗಿದ್ದಾರೆ ಎಂದು ಬ್ಯಾಂಕಾಕ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ತಕ್ಸಿನ್ ಸಗಿನ್‌ವಾತ್ರ ಅವರ ಬೆಂಬಲಿಗರು ಶೃಂಗಸಭೆ ನಡೆಯುವ ಸ್ಥಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮುತ್ತಿಗೆ ಹಾಕಿ ಪ್ರಧಾನಿಯವರ ರಾಜೀನಾಮೆಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಥೈಲ್ಯಾಂಡ್‌ನಲ್ಲಿ ದೇಶದಾದ್ಯಂತ ತುರ್ತುಪರಿಸ್ಥಿತಿಯನ್ನು ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಡಿಸೆಂಬರ್ 2008ರಲ್ಲಿ ಮೊದಲ ಬಾರಿಗೆ ಇಂಡೋ-ಏಷಿಯನ್ ಶೃಂಗಸಭೆಯನ್ನು ಆಯೋಜಿಸಿ ರದ್ದುಗೊಳಿಸಲಾಗಿತ್ತು. ಇಂದಿನ ಶೃಂಗಸಭೆ ಕೂಡಾ ಎರಡನೇ ಬಾರಿಗೆ ರದ್ದುಗೊಂಡಿದ್ದರಿಂದ ನವದೆಹಲಿ ಮತ್ತು ಹತ್ತು ರಾಷ್ಟಗಳ ಮುಕ್ತ ವ್ಯಾಪಾರ ಒಪ್ಪಂದವನ್ನು ಮುಂದಕ್ಕೆ ಹಾಕಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾನೂನಿನ ಲೋಪ: ಕಳಪೆ ವಸ್ತುಗಳು ಭಾರತಕ್ಕೆ
ಜಪಾನ್‌ನಿಂದ ಪಾಕ್‌ಗೆ 1 ಬಿಲಿಯನ್ ಡಾಲರ್ ನೆರವು
2010ರಲ್ಲಿ ಸ್ಟೀಲ್ ಉತ್ಪಾದನೆ ಆರಂಭ:ಟಾಟಾ
ಇನ್ಫೋಸಿಸ್‌ನಿಂದ 2100 ಉದ್ಯೋಗಿಗಳ ವಜಾ
ಮೈಕ್ರೋಸಾಫ್ಟ್, ಯಾಹೂ ಮಾತುಕತೆ ಪುನರಾರಂಭ
ಸ್ಪೈಸ್ ‌ಜೆಟ್‌ನಿಂದ ವಿಮೆ ಯೋಜನೆ ಆರಂಭ