ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಸ್‌ಎಂಇ ಸಾಲ: ಎಸ್‌ಬಿಐನಿಂದ ಬಡ್ಡಿ ದರ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಸ್‌ಎಂಇ ಸಾಲ: ಎಸ್‌ಬಿಐನಿಂದ ಬಡ್ಡಿ ದರ ಕಡಿತ
ಮುಂಬೈ : ದೇಶದ ಸಾರ್ವಜನಿಕ ಕ್ಷೇತ್ರದ ನಂಬರ್ ಒನ್ ಬ್ಯಾಂಕಾದ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೀಡಲಾಗುವ ಸಾಲದ ಮೇಲಿನ ಬಡ್ಡಿಯನ್ನು ಕಡಿತಗೊಳಿಸಿದ್ದು,ಸಾಲದ ನೀತಿಯಲ್ಲಿ ಮತ್ತಷ್ಟು ಸುಧಾರಣೆಗಳನ್ನು ತರುವುದಾಗಿ ಹೇಳಿಕೆ ನೀಡಿದೆ.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೀಡಲಾಗುವ 5 ಲಕ್ಷ ಸಾಲಕ್ಕೆ ಶೇ.8ರಷ್ಟು ಬಡ್ಡಿಯನ್ನು ನಿಗದಿಪಡಿಸಿದ್ದು, 5 ಲಕ್ಷ ರೂಪಾಯಿಗಳಿಂದ 25 ಲಕ್ಷ ರೂಪಾಯಿಗಳವರೆಗಿನ ಸಾಲಕ್ಕೆ ಶೇ.10 ರಷ್ಟು ನಿಗದಿಪಡಿಸಿದೆ.

ಮುಂಬರುವ ಎರಡು ವರ್ಷಗಳ ಅವಧಿಯವರೆಗೆ ಬಡ್ಡಿ ದರ ಕಡಿತ ಜಾರಿಯಲ್ಲಿರುತ್ತದೆ. ಬಂಡವಾಳ ಹೂಡಿಕೆ ಮತ್ತು ಸಾಲದ ಕಂತುಗಳನ್ನು ಸಿಜಿಟಿಎಂಎಸ್‌ಇಯನ್ನು ಹೊಂದಿರವುದು ಅಗತ್ಯವಾಗಿದೆ ಎಂದು ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಎರಡು ವರ್ಷಗಳ ನಂತರ ಮಾರುಕಟ್ಟೆಯ ಸ್ಥಿತಿಗತಿಯನ್ನು ಆಧರಿಸಿ ಬಡ್ಡಿದರ ಕಡಿತವನ್ನು ಪುನರ್‌ಪರಿಶೀಲಿಸಲಿದೆ ಎಂದು ಬ್ಯಾಂಕ್ ಹೇಳಿಕೆ ನೀಡಿದೆ.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೆಲ್ಪ್ ಮತ್ತು ಕೇರ್ ಎನ್ನುವ ಎರಡು ಯೋಜನೆಗಳನ್ನು ಏಪ್ರಿಲ್ 30 ರಿಂದ ಶೇ 8ರ ಬಡ್ಡಿದರದಲ್ಲಿ ಸಾಲ ನೀಡಿಕೆ ಆರಂಭವಾಗಲಿದೆ ಎಂದು ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಐಟಿಸಿ ವೆಲ್‌ಕಮ್ ಗ್ರೂಪ್‌ಗೆ ಬೆಸ್ಟ್ ಎಂಪ್ಲಾಯರ್ ಪ್ರಶಸ್ತಿ
'ಟೋಯೋಟಾ ನಿವ್ವಳ ಲಾಭಾಂಶದಲ್ಲಿ ಕುಸಿತ
ಹೊರಗುತ್ತಿಗೆ ಹುದ್ದೆ : ಮೈಕ್ರೋಸಾಫ್ಟ್‌, ಎಚ್‌ಸಿಎಲ್ ಒಪ್ಪಂದ
ಪ್ರತಿಭಟನೆ: ಇಂಡೋ-ಏಷಿಯನ್ ಶೃಂಗಸಭೆ ರದ್ದು
ಕಾನೂನಿನ ಲೋಪ: ಕಳಪೆ ವಸ್ತುಗಳು ಭಾರತಕ್ಕೆ
ಜಪಾನ್‌ನಿಂದ ಪಾಕ್‌ಗೆ 1 ಬಿಲಿಯನ್ ಡಾಲರ್ ನೆರವು