ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಾರತದ ಆರ್ಥಿಕತೆ ಸುಭದ್ರವಾಗಿದೆ: ಸ್ಟ್ಯಾಂಡರ್ಡ್‌ ಬ್ಯಾಂಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದ ಆರ್ಥಿಕತೆ ಸುಭದ್ರವಾಗಿದೆ: ಸ್ಟ್ಯಾಂಡರ್ಡ್‌ ಬ್ಯಾಂಕ್
ನವದೆಹಲಿ : ಆರ್ಥಿಕ ಕುಸಿತ ಮದ್ಯೆಯು ಭಾರತದಲ್ಲಿ ಹೂಡಿಕೆ ಮಾಡಲು ಬಯಸುವುದಾಗಿ ವಿದೇಶಿ ಮೂಲದ ಸ್ಟ್ಯಾಂಡರ್ಡ್ ಚಾರ್ಟರ್ಡ್‌ ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದ ಆರ್ಥಿಕತೆ ಸುಭದ್ರವಾಗಿದೆ. ಪ್ರತಿ ವರ್ಷ ಕೂಡಾ ಹೂಡಿಕೆ ಮಾಡಲಾಗುತ್ತಿದೆ. ನೂತನ ಶಾಖೆಗಳು ವ್ಯವಸ್ಥೆ ಸುಧಾರಣೆ, ಉತ್ಪನ್ನಗಳ ಬಿಡುಗಡೆ,ಉದ್ಯೋಗವಕಾಶಗಳನ್ನು ಹೆಚ್ಚಿಸಲಾಗಿದೆ. ಹೂಡಿಕೆಯನ್ನು ಮುಂದುವರಿಸಲಾಗುತ್ತದೆ ಎಂದು ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಸ್ಪಾಲ್ ಬಿಂದ್ರಾ ಹೇಳಿದ್ದಾರೆ.

ಮಾರುಕಟ್ಟೆಗಳಲ್ಲಿ ನಮ್ಮ ಪಾಲನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೂಡಿಕೆಯಲ್ಲಿ ಹೆಚ್ಚಳ ಮಾಡಲಾಗುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ ಸಾಧಿಸಿದ ಗುರಿಯನ್ನು ಮುಂದುವರಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ರಾಯಲ್ ಬ್ಯಾಂಕ್‌ ಆಫ್ ಸ್ಕಾಟಲೆಂಡ್‌ನ ಏಷ್ಯಾ ವಹಿವಾಟನ್ನು ಖರೀದಿಸುವ ಆಸಕ್ತಿಯಿದ್ದು, ಮುಂಬರುವ ದಿನಗಳಲ್ಲಿ ಸಂಪೂರ್ಣ ವಿವರಗಳು ಲಭ್ಯವಾಗಲಿವೆ. ಎಂದು ಭಿಂದ್ರಾ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಸ್‌ಎಂಇ ಸಾಲ: ಎಸ್‌ಬಿಐನಿಂದ ಬಡ್ಡಿ ದರ ಕಡಿತ
ಐಟಿಸಿ ವೆಲ್‌ಕಮ್ ಗ್ರೂಪ್‌ಗೆ ಬೆಸ್ಟ್ ಎಂಪ್ಲಾಯರ್ ಪ್ರಶಸ್ತಿ
'ಟೋಯೋಟಾ ನಿವ್ವಳ ಲಾಭಾಂಶದಲ್ಲಿ ಕುಸಿತ
ಹೊರಗುತ್ತಿಗೆ ಹುದ್ದೆ : ಮೈಕ್ರೋಸಾಫ್ಟ್‌, ಎಚ್‌ಸಿಎಲ್ ಒಪ್ಪಂದ
ಪ್ರತಿಭಟನೆ: ಇಂಡೋ-ಏಷಿಯನ್ ಶೃಂಗಸಭೆ ರದ್ದು
ಕಾನೂನಿನ ಲೋಪ: ಕಳಪೆ ವಸ್ತುಗಳು ಭಾರತಕ್ಕೆ