ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಡಾಲರ್ ಎದುರಿಗೆ ರೂಪಾಯಿ ಮೌಲ್ಯ ವೃದ್ಧಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಾಲರ್ ಎದುರಿಗೆ ರೂಪಾಯಿ ಮೌಲ್ಯ ವೃದ್ಧಿ
PTI
ನೇರ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾಗುವ ಸಾಧ್ಯತೆಗಳ ನಿರೀಕ್ಷೆಯಲ್ಲಿ ದೇಶಿಯ ಶೇರುಪೇಟೆ ಸಕರಾತ್ಮಕವಾಗಿ ಆರಂಭವಾಗಿದ್ದರಿಂದ ಡಾಲರ್‌ ರೂಪಾಯಿ ಮೌಲ್ಯದಲ್ಲಿ 14ಪೈಸೆ ಹೆಚ್ಚಳವಾಗಿದೆ.

ಏಷ್ಯಾ ಕರೆನ್ಸಿಗಳ ಎದುರುಗಡೆ ಡಾಲರ್ ಮೌಲ್ಯ ದುರ್ಬಲವಾಗಿದ್ದರಿಂದ ರೂಪಾಯಿ ಮೌಲ್ಯ ಏರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ಡಾಲರ್‌ಗೆ 49.88 ರೂಪಾಯಿಗಳಿಗೆ ತಲುಪಿತ್ತು. ಆದರೆ ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 14 ಪೈಸೆ ಏರಿಕೆಯಾಗಿ 50.02/03 ರೂಪಾಯಿಗಳಿಗೆ ತಲುಪಿದೆ.

ದೇಶಿಯ ಶೇರುಪೇಟೆ ಸಕರಾತ್ಮಕ ವಲಯದಲ್ಲಿರುವುದರಿಂದ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಏರಿಕೆಗೆ ಕಾರಣವಾಗಿದೆ ಎಂದು ಫಾರೆಕ್ಸ್ ಡೀಲರ್‌‌ಗಳು ತಿಳಿಸಿದ್ದಾರೆ.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಗುರುವಾರದಂದು ಡಾಲರ್ ಎದುರಿಗೆ ರೂಪಾಯಿ 16 ಪೈಸೆ ಏರಿಕೆ ಕಂಡು 50.02/03 ರೂಪಾಯಿಗಳಿಗೆ ತಲುಪಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಡಾಲರ್, ರೂಪಾಯಿ, ಮೌಲ್ಯ ಫಾರೆಕ್ಸ್, forex
ಮತ್ತಷ್ಟು
ದೇಶದಲ್ಲಿ ಶೇ.49ರಷ್ಟು ಉದ್ಯೋಗಕ್ಕೆ ಕತ್ತರಿ
ಸತ್ಯಂ ಯಾರ ಪಾಲಿಗೆ: ಇಂದು ಪ್ರಕಟ
ಸತ್ಯಂ ಗ್ರಾಹಕರ ವಿವರ ಬಿಡುಗಡೆ
ಬ್ಯಾಂಕ್‌ಗಳಿಂದ ಬಡ್ಡಿ ದರ ಕಡಿತ
ಭಾರತದ ಆರ್ಥಿಕತೆ ಸುಭದ್ರವಾಗಿದೆ: ಸ್ಟ್ಯಾಂಡರ್ಡ್‌ ಬ್ಯಾಂಕ್
ಎಸ್‌ಎಂಇ ಸಾಲ: ಎಸ್‌ಬಿಐನಿಂದ ಬಡ್ಡಿ ದರ ಕಡಿತ