ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವಿದೇಶಿ ಬಂಡವಾಳ ಹೂಡಿಕೆ ಏರಿಕೆ ಅವಾಸ್ತವಿಕ:ಸಿಐಐ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿದೇಶಿ ಬಂಡವಾಳ ಹೂಡಿಕೆ ಏರಿಕೆ ಅವಾಸ್ತವಿಕ:ಸಿಐಐ
ಜಾಗತಿಕ ಆರ್ಥಿಕ ಕುಸಿತದ ಸ್ಥಿತಿಗತಿಯನ್ನು ಪರಿಶೀಲಿಸಿದಲ್ಲಿ ನೇರ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾಗಲಿದೆ ಎಂದು ನಿರೀಕ್ಷಿಸುವುದು ಅವಾಸ್ತುವಿಕ ಸಂಗತಿಯಾಗಿದೆ ಎಂದು ಸಿಐಐ ಕೈಗಾರಿಕೋದ್ಯಮ ಸಂಘಟನೆ ವರದಿಯಲ್ಲಿ ಪ್ರಕಟಿಸಿದೆ.

ವಿದೇಶಿ ಬಂಡವಾಳ ಹೂಡಿಕೆ ಸಂಸ್ಥೆಗಳು ಕಡಿಮೆ ಪ್ರಮಾಣದಲ್ಲಿ ಹೂಡಿಕೆ ಮಾಡಲಿವೆ ಅಥವಾ ಹೂಡಿಕೆಯನ್ನು ಸ್ಥಗಿತಗೊಳಿಸುವ ಸಾಧ್ಯತೆಗಳಿವೆ ಎಂದು ಗ್ಲೋಬಲ್ ಎಕಾನಾಮಿಕ್ ಕ್ರೈಸೆಸ್ ಎನ್ನುವ ಅಧ್ಯಯನ ನಡೆಸಿ ಪುಸ್ತಕದಲ್ಲಿ ಪ್ರಕಟಗೊಳಿಸಲಾಗಿದೆ.

ಭಾರತ ಸೇವಾ ಕ್ಷೇತ್ರಗಳು, ಕೈಗಾರಿಕೆ, ಕೃಷಿ ಮತ್ತು ಮೂಲಸೌಕರ್ಯ ಹೂಡಿಕೆಗಳಿಗಾಗಿ ದೇಶಿಯ ಸಂಪನ್ಮೂಲಗಳ ಮೇಲೆ ಅವಲಂಬಿತವಾಗಿರಬೇಕು ಹೊರತು ನೇರ ವಿದೇಶಿ ಬಂಡವಾಳ ಹೂಡಿಕೆಯ ಮೇಲೆ ಅಲ್ಲ ಎಂದು ಕಾನ್ಫಿಡರೇಶನ್‌ ಹೇಳಿಕೆ ನೀಡಿದೆ.

ಪ್ರಸಕ್ತ ವರ್ಷದ ಫೆಬ್ರವರಿ ಮಾಸಂತ್ಯಕ್ಕೆ ನಿವ್ವಳ ವಿದೇಶಿ ಬಂಡವಾಳ ಹೂಡಿಕೆ 51 ಬಿಲಿಯನ್ ಡಾಲರ್‌ಗಳಾಗಿದ್ದು, ವಿದೇಶಿ ಬಂಡವಾಳ ಹೂಡಿಕೆ ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರಕಾರ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ಅಧ್ಯಯನದ ವರದಿಯಲ್ಲಿ ತಿಳಿಸಿದೆ.

ಉತ್ತೇಜನ ಪ್ಯಾಕೇಜ್‌ಗಳಿಂದ ಕೆಲ ಮಟ್ಟಿಗೆ ಪರಿಹಾರ ದೊರೆಯಬಹುದು. ಜಾಗತಿಕ ಆರ್ಥಿಕ ಕುಸಿತ ಆಳವಾಗಿರುವುದರಿಂದ ಮತ್ತಷ್ಟು ದೇಶಿಯ ಸಂಪನ್ಮೂಲಗಳನ್ನು ಕ್ರೂಢಿಕರಿಸುವುದು ಅಗತ್ಯವಾಗಿದೆ ಎಂದು ಸಿಐಐ ಅಭಿಪ್ರಾಯಪಟ್ಟಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡಾಲರ್ ಎದುರಿಗೆ ರೂಪಾಯಿ ಮೌಲ್ಯ ವೃದ್ಧಿ
ದೇಶದಲ್ಲಿ ಶೇ.49ರಷ್ಟು ಉದ್ಯೋಗಕ್ಕೆ ಕತ್ತರಿ
ಸತ್ಯಂ ಯಾರ ಪಾಲಿಗೆ: ಇಂದು ಪ್ರಕಟ
ಸತ್ಯಂ ಗ್ರಾಹಕರ ವಿವರ ಬಿಡುಗಡೆ
ಬ್ಯಾಂಕ್‌ಗಳಿಂದ ಬಡ್ಡಿ ದರ ಕಡಿತ
ಭಾರತದ ಆರ್ಥಿಕತೆ ಸುಭದ್ರವಾಗಿದೆ: ಸ್ಟ್ಯಾಂಡರ್ಡ್‌ ಬ್ಯಾಂಕ್