ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ ಖರೀದಿಸಿದ ಟೆಕ್ ಮಹೀಂದ್ರಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ ಖರೀದಿಸಿದ ಟೆಕ್ ಮಹೀಂದ್ರಾ
PTI
ಇಂಜಿನಿಯರಿಂಗ್ ದೈತ್ಯ ಸಂಸ್ಥೆಯಾದ ಲಾರ್ಸನ್‌ ಆಂಡ್ ಟೌಬ್ರೋ ಮತ್ತಿತರ ಕಂಪೆನಿಗಳನ್ನು ಹಿಂದಕ್ಕೆ ತಳ್ಳಿ ಟೆಕ್ ಮಹೀಂದ್ರಾ ಸತ್ಯಂ ಸಂಸ್ಥೆಯ ಖರೀದಿಸುವಲ್ಲಿ ಯಶಸ್ವಿಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸತ್ಯಂ ಕಂಪ್ಯೂಟರ್ ಸರ್ವಿಸಸ್‌ನ ಶೇ.31 ರಷ್ಟು ಶೇರುಗಳ ಖರೀದಿಗಾಗಿ ಟೆಕ್ ಮಹೀಂದ್ರಾ 1757 ಕೋಟಿ ರೂಪಾಯಿಗಳನ್ನು ಪಾವತಿಸಬೇಕಾಗಿದ್ದು, ಪ್ರತಿ ಶೇರಿಗೆ 58 ರೂಪಾಯಿಗಳಂತೆ ಕಂಪೆನಿಗೆ ಪಾವತಿಸಲಿದೆ. ಸತ್ಯಂ ಪ್ರತಿ ಶೇರಿನ ಮುಖಬೆಲೆ 2 ರೂಪಾಯಿಗಳಾಗಿವೆ.

ಎಲ್‌ ಆಂಡ್ ಟಿ ಸಂಸ್ಥೆ ಸತ್ಯಂ ಶೇರಿಗೆ 49 ರೂಪಾಯಿಗಳನ್ನು ಪಾವತಿಸಲು ಸಿದ್ದರಿರುವುದಾಗಿ ಬಿಡ್‌ನಲ್ಲಿ ಸಲ್ಲಿಸಿತ್ತು.

ಎಲ್‌ ಆಂಡ್ ಟಿ, ಮಹೀಂದ್ರಾ ಮತ್ತು ವಿಲ್ಬರ್ ರೋಸ್ ಕಂಪೆನಿಗಳು ತಂತ್ರಜ್ಞಾನ ಮತ್ತು ಹಣಕಾಸಿನ ವಿಭಾಗಗಳಲ್ಲಿ ಬಿಡ್‌ಗಳನ್ನು ಸಲ್ಲಿಸಿದ್ದವು.

ಸ್ಪೈಸ್ ಕಾರ್ಪೋರೇಶನ್ ಮುಖ್ಯಸ್ಥ ಬಿ.ಕೆ ಮೋದಿ ಮಾತನಾಡಿ, ನಮ್ಮ ಅಡಳಿತ ಮಂಡಳಿ ಇ-ಹರಾಜು ಮಾಡುವಂತೆ ಸತ್ಯಂ ಸಂಸ್ಥೆಗೆ ಮನವಿ ಸಲ್ಲಿಸಿತ್ತು. ಆದರೆ ಸತ್ಯಂ ಸಂಸ್ಥೆ ಮನವಿಗೆ ಸ್ಪಂದಿಸದ ಕಾರಣ ಸತ್ಯಂಗೆ ನಾವು ಬಿಡ್ ಸಲ್ಲಿಸಲಿಲ್ಲ ಎಂದು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿದೇಶಿ ಬಂಡವಾಳ ಹೂಡಿಕೆ ಏರಿಕೆ ಅವಾಸ್ತವಿಕ:ಸಿಐಐ
ಡಾಲರ್ ಎದುರಿಗೆ ರೂಪಾಯಿ ಮೌಲ್ಯ ವೃದ್ಧಿ
ದೇಶದಲ್ಲಿ ಶೇ.49ರಷ್ಟು ಉದ್ಯೋಗಕ್ಕೆ ಕತ್ತರಿ
ಸತ್ಯಂ ಯಾರ ಪಾಲಿಗೆ: ಇಂದು ಪ್ರಕಟ
ಸತ್ಯಂ ಗ್ರಾಹಕರ ವಿವರ ಬಿಡುಗಡೆ
ಬ್ಯಾಂಕ್‌ಗಳಿಂದ ಬಡ್ಡಿ ದರ ಕಡಿತ