ಜಾಗತಿಕ ಆರ್ಥಿಕ ಕುಸಿದ ಹಿನ್ನೆಲೆಯಲ್ಲಿ ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ 2008-09ರ ಆರ್ಥಿಕ ಸಾಲಿನಲ್ಲಿ ವೃದ್ಧಿ ದರ ಶೇ.7ಕ್ಕಿಂತ ಅಲ್ಪ ಕಡಿಮೆಯಾಗಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹೇಳಿದ್ದಾರೆ. ಜಾಗತಿಕ ಆರ್ಥಿಕತೆ ಕುಸಿತ ಆಳವಾಗಿದ್ದು, ದೇಶದ ಆರ್ಥಿಕತೆಯ ಮೇಲೆ ಪ್ರಭಾವ ಬೀರಿದೆ. ಆರ್ಥಿಕ ಕುಸಿತ ತಡೆಗೆ ಉತ್ತೇಜನ ಪ್ಯಾಕೇಜ್ ಮತ್ತು ಬಡ್ಡಿ ದರ ಕಡಿತ ಸೇರಿದಂತೆ ಹಲವು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದರಿಂದ ಇತರ ದೇಶಗಳಿಗೆ ಹೋಲಿಸಿದಲ್ಲಿ ಅಲ್ಪ ಪ್ರಮಾಣದ ಪ್ರಭಾವ ಬೀರಿದೆ ಎಂದು ಟಿವಿ ಟಾನೆಲ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.ಯುಪಿಎ ಅಧಿಕಾರವಧಿಯ ಹಿಂದಿನ ನಾಲ್ಕು ವರ್ಷಗಳಲ್ಲಿ ಶೇ.9 ರಷ್ಟು ಆರ್ಥಿಕ ಅಭಿವೃದ್ಧಿ ದರವನ್ನು ತಲುಪಿದ್ದು, ಜಾಗತಿಕ ಆರ್ಥಿಕ ಕುಸಿತದ ಪರಿಣಾಮವಾಗಿ ಜಿಡಿಪಿ ದರ ಶೇ.7ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ. |