ಅಮೆರಿಕದ ಔಷಧಿ ಮಾರಾಟ ನಿಯಂತ್ರಕ ಸಂಸ್ಥೆಯಿಂದ ನೋವು ನಿವಾರಕ ಮಾತ್ರೆಗಳಾದ ರೊಕ್ಸಿಕೊಡೊನೆ,ಆಕ್ಸಿಕೊಡೊನೆ ಮತ್ತು ಹೈಡ್ರೋಕ್ಲೋರೈಡ್ ಮಾತ್ರೆಗಳನ್ನು ಮಾರಾಟ ಮಾಡಲು ಅನುಮತಿ ನೀಡಿದೆ ಎಂದು ಡ್ರಗ್ಸ್ ತಯಾರಿಕೆ ಸಂಸ್ಥೆ ಸನ್ ಫಾರ್ಮಾ ಹೇಳಿಕೆ ನೀಡಿದೆ.
ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಸನ್ ಫಾರ್ಮಾಕ್ಯೂಟಿಕಲ್ ಇಂಡಸ್ಟ್ರೀಸ್ನ ಔಷಧಿ ಉತ್ಪನ್ನಗಳಾದ ರೊಕ್ಸಿಕೊಡೊನೆ, ಆಕ್ಸಿಕೊಡೊನೆ ಮತ್ತು ಹೈಡ್ರೋಕ್ಲೋರೈಡ್ ನೋವು ನಿವಾರಕ ಮಾತ್ರೆಗಳನ್ನು ಮಾರಾಟ ಮಾಡಲು ಅಮೆರಿಕದ ಅಹಾರ ಮತ್ತು ಡ್ರಗ್ಸ್ ಅಡಳಿತಾತ್ಮಕ ಇಲಾಖೆಯ ಅನುಮತಿ ದೊರೆತಿದೆ ಎಂದು ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.
ನೋವು ನಿವಾರಕ ಮಾತ್ರೆಗಳು 5 ಎಂಜಿ, 15ಎಂಜಿ ಮತ್ತು 30 ಎಂಜಿಗಳಲ್ಲಿ ಲಭ್ಯವಿದ್ದು, ಅಮೆರಿಕ ಮಾರುಕಟ್ಟೆಯನ್ನು ಶೀಘ್ರದಲ್ಲಿ ಪ್ರವೇಶಿಸಲಿವೆ ಎಂದು ಸನ್ ಫಾರ್ಮಾ ಕಂಪೆನಿ ಮುಂಬೈ ಶೇರುಪೇಟೆಗೆ ಮಾಹಿತಿ ನೀಡಿದೆ |