ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಾರತದ ರಪ್ತು 12 ಬಿಲಿಯ ಡಾಲರ್‌ಗಿಂತ ಕಡಿಮೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದ ರಪ್ತು 12 ಬಿಲಿಯ ಡಾಲರ್‌ಗಿಂತ ಕಡಿಮೆ
ಕಳೆದ ಮಾರ್ಚ್‌ನಲ್ಲಿ ಭಾರತದ ರಫ್ತು ಬೇಡಿಕೆಯು 12 ಶತಕೋಟಿ ಅಮೆರಿಕನ್ ಡಾಲರ್‌ಗಿಂತ ಕೆಳಕ್ಕೆ ಕುಸಿದಿದ್ದು, ಸತತವಾಗಿ 6ನೇ ತಿಂಗಳು ನಕಾರಾತ್ಮಕ ಬೆಳವಣಿಗೆಯನ್ನು ತೋರಿಸಿದೆ.

ವಿಶ್ವದ ಪ್ರಮುಖ ಅರ್ಥಿಕ ರಾಷ್ಟ್ರಗಳು ಹಿಂಜರಿತದಿಂದ ತತ್ತರಿಸಿದ್ದು, ವಸ್ತುಗಳಿಗೆ ಬೇಡಿಕೆ ಕುಸಿದಿದ್ದೇ ರಫ್ತು ಬೇಡಿಕೆ ಕುಸಿತಕ್ಕೆ ಕಾರಣವೆಂದು ಹೇಳಲಾಗಿದೆ. ರಾಷ್ಟ್ರದ ಆಮದಿನ ಬೇಡಿಕೆ ಕೂಡ ಕಳೆದ ತಿಂಗಳು ಶೇ.37 ಕುಸಿತ ಅನುಭವಿಸಿದೆ.

ವಾಣಿಜ್ಯ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಸೋಮವಾರ ಈ ವಿಷಯ ತಿಳಿಸಿದ್ದು, ಕುಸಿತದ ಪ್ರವೃತ್ತಿ ಮುಂದುವರಿದಿದೆಯೆಂದು ಹೇಳಿದರು.

ಮಾರ್ಚ್ 2008ರಲ್ಲಿ ರಫ್ತು 16.28 ಬಿಲಿಯ ಡಾಲರ್ ಮೌಲ್ಯವುಳ್ಳದ್ದಾಗಿತ್ತು. 2008-09ರ ಪ್ರಥಮಾರ್ಧದಲ್ಲಿ ಶೇ.35ರ ರಫ್ತು ಬೆಳವಣಿಗೆ ದರವನ್ನು 2009-10ರ ಸಾಲಿನಲ್ಲಿ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ಐಐಎಫ್‌ಟಿ ಸಭೆಯ ನೇಪಥ್ಯದಲ್ಲಿ ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೊಬೈಲ್, ಕೇಬಲ್ ನಿರ್ವಾಹಕರಿಂದ ಗ್ರಾಹಕರ ಲೂಟಿ
ಸತ್ಯಂ ಉದ್ಯೋಗಿಗಳ ಗೊಂದಲ
ನ್ಯಾಸ್ಕಾಂ ಸಂತಸ
ಸತ್ಯಂ : ಸೆಬಿ ಹೇಳಿಕೆಯನ್ನು ದಾಖಲಿಸಿದ ಸಿಬಿಐ
ಆರ್‌ಐಎಲ್‌ನೊಂದಿಗೆ ವೀಲಿನವಿಲ್ಲ: ಆರ್‌ಐಐಎಲ್‌
ಸೆಪ್ಟೆಂಬರ್‌ ವೇಳೆಗೆ ಆರ್ಥಿಕತೆ ಸುಸ್ಥಿತಿಗೆ:ರಂಗರಾಜನ್