ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಇನ್ಫೋಸಿಸ್ ಲಾಭಾಂಶದಲ್ಲಿ ಶೇ.1.71 ರಷ್ಟು ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ಫೋಸಿಸ್ ಲಾಭಾಂಶದಲ್ಲಿ ಶೇ.1.71 ರಷ್ಟು ಕುಸಿತ
PTI
ಜಾಗತಿಕ ಆರ್ಥಿಕ ಕುಸಿತ ಹಾಗೂ ರೂಪಾಯಿ ಮೌಲ್ಯದ ಏರಿಳಿಕೆಯಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಇನ್ಫೋಸಿಸ್‌ ಟೆಕ್ನಾಲಾಜೀಸ್‌ನ ನಾಲ್ಕನೇ ತ್ರೈಮಾಸಿಕ ಆದಾಯದಲ್ಲಿ ಶೇ.1.71 ರಷ್ಟು ಕುಸಿತಗೊಂಡು 1,613 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಕಳೆದ 20007-08ರ ಸಾಲಿನ ಮಾರ್ಚ್ ತಿಂಗಳ ಅವಧಿಯಲ್ಲಿ ಇನ್ಫೋಸಿಸ್ ಟೆಕ್ನಾಲಾಜೀಸ್ 1,641 ಕೋಟಿ ರೂಪಾಯಿ ನಿವ್ವಳ ಲಾಭಗಳಿಸಿತ್ತು ಎಂದು ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ದೇಶದ ಸಾಫ್ಟ್‌ವೇರ್ ಸೇವೆಯಲ್ಲಿ ಎರಡನೇ ಸ್ಥಾನದಲ್ಲಿರುವ ಇನ್ಫೋಸಿಸ್, ಕಳೆದ ವರ್ಷದಲ್ಲಿ 5,786 ಕೋಟಿ ರೂಪಾಯಿಗಳ ಲಾಭಗಳಿಸಿತ್ತು. ಆದರೆ ಪ್ರಸಕ್ತ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ 5,786 ಕೋಟಿ ರೂಪಾಯಿಗಳ ಆದಾಯ ಗಳಿಸಿದ್ದು, ಶೇ.2.61 ರಷ್ಟು ಕುಸಿತ ಕಂಡಿದೆ.

ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಅನೇಕ ಗ್ರಾಹಕ ಕಂಪೆನಿಗಳು ಸೇವಾದರವನ್ನು ಕಡಿತಗೊಳಿಸಿ ವಹಿವಾಟನ್ನು ಮುಂದುವರಿಸಲು ಸಹಾಯ ಮಾಡುವಂತೆ ಮನವಿ ಮಾಡುತ್ತಿದ್ದಾರೆ ಎಂದು ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ತಾಪಕ ನಿರ್ದೇಶಕ ಎಸ್.ಗೋಪಾಲಕೃಷ್ಣನ್ ಹೇಳಿದ್ದಾರೆ.

ಮಾರ್ಚ್ 2009ಕ್ಕೆ ಆರ್ಥಿಕ ವರ್ಷ ಅಂತ್ಯಗೊಂಡಂತೆ ಇನ್ಫೋಸಿಸ್ ಕಂಪೆನಿ ಶೇರುದಾರರಿಗೆ ಪ್ರತಿ 5 ರೂಪಾಯಿ ಮುಖಬೆಲೆಯ ಶೇರಿಗೆ 13.50 ರೂಪಾಯಿ ಡೆವಿಡೆಂಡ್‌ ಘೋಷಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಇನ್ಫೋಸಿಸ್, ಲಾಭಾಂಶ, ಕುಸಿತ, infosis
ಮತ್ತಷ್ಟು
ಚಹದ ಬೆಲೆಯಲ್ಲೂ ಏರಿಕೆ
ಕ್ಷಿಪ್ರ ಏರಿಕೆ ಕಾಣುತ್ತಿರುವ ಸಕ್ಕರೆ ಬೆಲೆ
ಭಾರತದ ರಪ್ತು 12 ಬಿಲಿಯ ಡಾಲರ್‌ಗಿಂತ ಕಡಿಮೆ
ಮೊಬೈಲ್, ಕೇಬಲ್ ನಿರ್ವಾಹಕರಿಂದ ಗ್ರಾಹಕರ ಲೂಟಿ
ಸತ್ಯಂ ಉದ್ಯೋಗಿಗಳ ಗೊಂದಲ
ನ್ಯಾಸ್ಕಾಂ ಸಂತಸ