ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಫಾರೆಕ್ಸ್: ರೂಪಾಯಿ ಮೌಲ್ಯ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫಾರೆಕ್ಸ್: ರೂಪಾಯಿ ಮೌಲ್ಯ ಕುಸಿತ
PTI
ದೇಶಿಯ ಶೇರುಪೇಟೆಯ ಕುಸಿತದಿಂದಾಗಿ ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಳವಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ 18 ಪೈಸೆ ಇಳಿಕೆ ಕಂಡಿದೆ.

ಡಾಲರ್ ಎದುರಿನಲ್ಲಿ ಏಷ್ಯಾ ಕರೆನ್ಸಿಗಳ ಮೌಲ್ಯದಲ್ಲಿ ಇಳಿಕೆಯಾಗಿರುವುದು ಕೂಡಾ ರೂಪಾಯಿ ಮೌಲ್ಯ ಒತ್ತಡಕ್ಕೆ ಸಿಲುಕಿತ್ತು ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ಪ್ರತಿ ಡಾಲರ್‌ಗೆ 50.06ರೂಪಾಯಿಗಳಾಗಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 18 ಪೈಸೆ ಕುಸಿತವಾಗುವುದರೊಂದಿಗೆ 49.88/90 ರೂಪಾಯಿಗಳಿಗೆ ತಲುಪಿದೆ.

ದೇಶಿಯ ಶೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಕುಸಿತ ಕಂಡಿದ್ದರಿಂದ ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಳವಾಗುವ ನಿರೀಕ್ಷೆಯ ಹಿನ್ನೆಲೆಯಲ್ಲಿ ರೂಪಾಯಿ ಎದುರಿಗೆ ಡಾಲರ್ ಮೌಲ್ಯದಲ್ಲಿ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರದ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ 14 ಪೈಸೆ ಏರಿಕೆ ಕಂಡು 49.88/90 ರೂಪಾಯಿಗಳಿಗೆ ತಲುಪಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇನ್ಫೋಸಿಸ್ ಲಾಭಾಂಶದಲ್ಲಿ ಶೇ.1.71 ರಷ್ಟು ಕುಸಿತ
ಚಹದ ಬೆಲೆಯಲ್ಲೂ ಏರಿಕೆ
ಕ್ಷಿಪ್ರ ಏರಿಕೆ ಕಾಣುತ್ತಿರುವ ಸಕ್ಕರೆ ಬೆಲೆ
ಭಾರತದ ರಪ್ತು 12 ಬಿಲಿಯ ಡಾಲರ್‌ಗಿಂತ ಕಡಿಮೆ
ಮೊಬೈಲ್, ಕೇಬಲ್ ನಿರ್ವಾಹಕರಿಂದ ಗ್ರಾಹಕರ ಲೂಟಿ
ಸತ್ಯಂ ಉದ್ಯೋಗಿಗಳ ಗೊಂದಲ