ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಯಾಹೂ ಕಂಪೆನಿಂದ ನೂರಾರು ಉದ್ಯೋಗಿಗಳ ವಜಾ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯಾಹೂ ಕಂಪೆನಿಂದ ನೂರಾರು ಉದ್ಯೋಗಿಗಳ ವಜಾ?
ಯಾಹೂ ಕಂಪೆನಿಯ ಮುಖ್ಯಸ್ಥರಾಗಿ ಜನೆವರಿಯಲ್ಲಿ ಅಧಿಕಾರ ಸ್ವೀಕರಿಸಿದ ಕರೋಲ್‌ಬರ್ಟ್ಝ್, ಕಂಪೆನಿಯ ನೂರಾರು ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಮುಂಬರುವ ಮಂಗಳವಾರದಂದು ಯಾಹೂ ಕಂಪೆನಿ ಮೊದಲನೇ ತ್ರೈಮಾಸಿಕ ವರದಿ ಪ್ರಕಟಿಸಿದ ನಂತರ ಉದ್ಯೋಗಿಗಳ ವಜಾಗೊಳಿಸುವ ಕುರಿತಂತೆ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ ಎಂದು ಅನಾಮಧೇಯ ಮೂಲಗಳು ತಿಳಿಸಿವೆ. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಯಾಹೂ ಸಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆರ್ರಿ ಯಾಂಗ್ ಮೊದಲ ಸುತ್ತಿನ ಲೇ - ಆಫ್ ಘೋಷಿಸಿದ್ದರು.

ಕಳೆದ ವರ್ಷದಲ್ಲಿ ಸುಮಾರು 13,600 ಉದ್ಯೋಗಿಗಳನ್ನು ವಜಾಗೊಳಿಸಲಾಗಿತ್ತು. ಆದರೆ ಪ್ರಸ್ತುತ ಉದ್ಯೋಗಿಗಳ ವಜಾಗೊಳಿಸುವ ಕುರಿತಂತೆ ಯಾಹೂ ಕಂಪೆನಿ ಹೇಳಿಕೆ ನೀಡಲು ನಿರಾಕರಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಯಾಹೂ ಮತ್ತು ಮೈಕ್ರೋಸಾಫ್ಟ್ ಕಂಪೆನಿಗಳು ಸರ್ಚ್ ಇಂಜಿನ್‌ ವಹಿವಾಟಿನಲ್ಲಿ ಪಾಲುದಾರಿಕೆಯೊಂದಿಗೆ ಕಾರ್ಯನಿರ್ವಹಿಸುವ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಯಾಹೂ ಮುಖ್ಯಸ್ಥ ಕರೋಲ್ ವ್ಯವಸ್ಥಾಪನಾ ಮಂಡಳಿಯನ್ನು ಪುನರ್‌ರಚಿಸಲಿದ್ದಾರೆ ಎಂದು ಅನಾಮಧೇಯ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯುಬಿಎಸ್‌ನಿಂದ 8700 ಉದ್ಯೋಗಿಗಳ ವಜಾ ಸಾಧ್ಯತೆ?
ಫಾರೆಕ್ಸ್: ರೂಪಾಯಿ ಮೌಲ್ಯ ಕುಸಿತ
ಇನ್ಫೋಸಿಸ್ ಲಾಭಾಂಶದಲ್ಲಿ ಶೇ.1.71 ರಷ್ಟು ಕುಸಿತ
ಚಹದ ಬೆಲೆಯಲ್ಲೂ ಏರಿಕೆ
ಕ್ಷಿಪ್ರ ಏರಿಕೆ ಕಾಣುತ್ತಿರುವ ಸಕ್ಕರೆ ಬೆಲೆ
ಭಾರತದ ರಪ್ತು 12 ಬಿಲಿಯ ಡಾಲರ್‌ಗಿಂತ ಕಡಿಮೆ