ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ದೇಶಿಯ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇಶಿಯ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ
PTI
ಪ್ರಸಕ್ತ ವರ್ಷದ ಆರಂಭಿಕ ಮೂರು ತಿಂಗಳಲ್ಲಿ ದೇಶಿಯ ವಿಮಾನ ಪ್ರಯಾಣಿಕರ ಸಂಖ್ಯೆಯನ್ನು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.12 ರಷ್ಟು ಕುಸಿತವಾಗಿದೆ ಎಂದು ವಿಮಾನಯಾನ ಸಂಸ್ಥೆಗಳು ಹೇಳಿಕೆ ನೀಡಿವೆ.

ಜನೆವರಿಯಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಅಂದಾಜು 99.82 ಲಕ್ಷ ಪ್ರಯಾಣಿಕರು ವಿಮಾನಯಾನ ಮಾಡಿದ್ದು, ಕಳೆದ ವರ್ಷದಲ್ಲಿ 113.04 ಲಕ್ಷ ಪ್ರಯಾಣಿಕರು ದೇಶಿಯ ವಿಮಾನಯಾನ ಕೈಗೊಂಡಿದ್ದು ಪ್ರಯಾಣಿಕರಲ್ಲಿ ಶೇ.12 ರಷ್ಟು ಕುಸಿತ ಕಂಡುಬಂದಿದೆ ಎಂದು ವಿಮಾನಯಾನ ಸಂಸ್ಥೆಗಳು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿವೆ.

ಜನೆವರಿಯಿಂದ ಮಾರ್ಚ್‌ವರೆಗಿನ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದಲ್ಲಿ ಕಿಂಗ್‌ಫಿಶರ್ ಏರ್‌ಲೈನ್ಸ್, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.2ರಷ್ಟು ಕುಸಿತ ಕಂಡಿದ್ದು, ಜೆಟ್ ಏರ್‌ವೇಸ್ ಶೇ.17.9 ರಷ್ಟು ಕುಸಿತ ಕಂಡಿದೆ. ಜೆಟ್‌ಲೈಟ್ ಏರ್‌ಲೈನ್ಸ್ ಶೇ.7.4 ರಷ್ಟು ಕುಸಿತ ದಾಖಲಿಸಿದೆ ಎಂದು ವಿಮಾನಯಾನ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ.

ಆದರೆ, ಏರ್‌ ಇಂಡಿಯಾ ಪ್ರಯಾಣಿಕರ ಸಂಖ್ಯೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.17 ರಷ್ಟು ಏರಿಕೆಯಾಗಿದ್ದು, ಇಂಡಿಗೋ ಏರ್‌ಲೈನ್ಸ್ ಪ್ರಯಾಣಿಕರ ಸಂಖ್ಯೆಯಲ್ಲಿ ಕೂಡಾ ಶೇ.13.5 ರಷ್ಟು ಹೆಚ್ಚಳವಾಗಿದೆ ಎಂದು ವಿಮಾನಯಾನ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಮಾನ, ಪ್ರಯಾಣಿಕ, ಕುಸಿತ, aeroplane
ಮತ್ತಷ್ಟು
ಎನ್‌ಡಿಎ ಅವಧಿಯಲ್ಲಿ ಆರ್ಥಿಕತೆ ಕುಸಿತ:ಚಿದಂಬರಂ
ಆರ್ಥಿಕ ಅಭಿವೃದ್ಧಿಗೆ ಬಡ್ಡಿ ದರ ಕಡಿತ ಅಗತ್ಯ:ಜಿಂದಾಲ್
ಯಾಹೂ ಕಂಪೆನಿಂದ ನೂರಾರು ಉದ್ಯೋಗಿಗಳ ವಜಾ?
ಯುಬಿಎಸ್‌ನಿಂದ 8700 ಉದ್ಯೋಗಿಗಳ ವಜಾ ಸಾಧ್ಯತೆ?
ಫಾರೆಕ್ಸ್: ರೂಪಾಯಿ ಮೌಲ್ಯ ಕುಸಿತ
ಇನ್ಫೋಸಿಸ್ ಲಾಭಾಂಶದಲ್ಲಿ ಶೇ.1.71 ರಷ್ಟು ಕುಸಿತ