ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 2009-10ಕ್ಕೆ ಭಾರತದ ಆರ್ಥಿಕತೆ ಶೇ.5.5ರಷ್ಟು ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2009-10ಕ್ಕೆ ಭಾರತದ ಆರ್ಥಿಕತೆ ಶೇ.5.5ರಷ್ಟು ಕುಸಿತ
ವಾಷಿಂಗ್ಟನ್: ಕಳೆದ ನಾಲ್ಕು ವರ್ಷಗಳಲ್ಲಿ ಸರಾಸರಿ ಶೇ. 8.8ರಷ್ಟು ಅಭಿವೃದ್ಧಿ ಸಾಧಿಸಿದ್ದ ಭಾರತದ ಆರ್ಥಿಕತೆ 2009-10ರಲ್ಲಿ ಶೇ.5.5ರಷ್ಟು ಕುಸಿಯಲಿದೆ ಎಂದು ಅಮೆರಿಕದ ಹಣಕಾಸು ಇಲಾಖೆ ಕಾರ್ಯದರ್ಶಿ ಟಿಮೊತಿ ಗೇಥ್ನರ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಆರ್ಥಿಕ ವಹಿವಾಟು ದರ ಯೋಜನೆಗಳ ಅರೆವಾರ್ಷಿಕ ವರದಿ ಬಿಡುಗಡೆಯಲ್ಲಿ ಮಾತನಾಡಿದ ಅವರು, ಬಂಡವಾಳ ಹೂಡಿಕೆಯಲ್ಲಿ ಇಳಿಕೆ, ಹೊರಹರಿವಿನ ಬೇಡಿಕೆಯ ಇಳಿಕೆಯಿಂದಾಗಿ ಈ ಕುಸಿತ ಉಂಟಾಗಲಿದೆ ಎಂದು ಅಭಿಪ್ರಾಯಪಟ್ಟರು. ಇತ್ತೀಚೆಗೆ ಭಾರತ ಸರ್ಕಾರ ಆರ್ಥಿಕ ಪುನಶ್ಚೇತನ ಪ್ಯಾಕೇಜುಗಳ ಯೋಜನೆಗಳನ್ನು ರೂಪಿಸಿರುವುದರಿಂದ ಆರ್ಥಿಕ ಅಭಿವೃದ್ಧಿಯ ಕುಸಿತವನ್ನು ಸ್ವಲ್ಪ ಮಟ್ಟಿಕೆ ತಡೆಯಬಹುದು ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಆದರೆ ಬಂಡವಾಳ ಹೂಡಿಕೆಯಲ್ಲಿ ಸಾಕಷ್ಟು ಇಳಿಮುಖವಾಗಿದ್ದು, ಇದೇ ಆರ್ಥಿಕ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದೆ. ಆದರೆ, ಆರ್ಥಿಕ ಮುಗ್ಗಟ್ಟು ಹಾಗೂ ಹಿಂಜರಿತದಿಂದಾಗಿಯೇ ಬಂಡವಾಳ ಹೂಡಿಕೆಯಲ್ಲಿ ಇಳಿಕೆಯಾಗಿದೆ. ಏಷ್ಯಾದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ರಫ್ತು ವ್ಯವಹಾರವನ್ನೇ ಅವಲಂಬಿಸಿಕೊಂಡಿಲ್ಲ. ಆದರೂ, ರಫ್ತು ವ್ಯವಹಾರದ ಕುಂಠಿತದಿಂದಲೂ ಆರ್ಥಿಕ ಅಭಿವೃದ್ಧಿಗೆ ಪೆಟ್ಟು ನೀಡಲಿದೆ ಎಂದರು.

2008ರ ನಾಲ್ಕನೇ ತ್ರೈಮಾಸಿಕ ಅವಧಿಯ ಸಂದರ್ಭವೇ ವರ್ಷದಿಂದ ವರ್ಷಕ್ಕೆ ಆರ್ಥಿಕ ಬೆಳವಣಿಗೆ ಶೇ.5.3ಕ್ಕೆ ಇಳಿದಿತ್ತು. ಕಳೆದ ವರ್ಷ ಇದೇ ತ್ರೈಮಾಸಿಕ ವರ್ಷದಲ್ಲಿ ಆರ್ಥಿಕ ಬೆಳವಣಿಗೆ 8.9ರಷ್ಟಿತ್ತು ಎಂದು ಅವರು ಉದಾಹರಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭಾರತದ ಆರ್ಥಿಕ ಹಿಂಜರಿತ, Indian economy
ಮತ್ತಷ್ಟು
ಸತ್ಯಂಗೆ ಹೊಸ ಸಿಇಒ?
ಫಾರೆಕ್ಸ್: ರೂಪಾಯಿ ಮೌಲ್ಯದಲ್ಲಿ ವೃದ್ಧಿ
ಬೇಳೆಕಾಳು ಆಮದು ಇಳಿಕೆ
ಸೇವಾ ಮಾರುಕಟ್ಟೆಯಲ್ಲಿ ಐದು ವರ್ಷಗಲ್ಲಿ ಶೇ.30 ಪ್ರಗತಿ
2010-11ರಲ್ಲಿ ಮಹತ್ತರ ಆರ್ಥಿಕ ಬೆಳವಣಿಗೆ:ರಂಗರಾಜನ್
ದೇಶಿಯ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ