ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವಿಮಾನ ಪ್ರಯಾಣಿಕರಿಗೂ ಹೊಸ ಅಭಿವೃದ್ಧಿ ದರ ಹೇರಿಕೆ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಮಾನ ಪ್ರಯಾಣಿಕರಿಗೂ ಹೊಸ ಅಭಿವೃದ್ಧಿ ದರ ಹೇರಿಕೆ?
PTI
ನವದೆಹಲಿ: ಅಭಿವೃದ್ಧಿ ದರದ ಹೆಸರಿನಲ್ಲಿ ಖಾಸಗಿ ವಿಮಾನ ನಿಲ್ದಾಣಗಳಿಂದ ಸುಂಕ ವಸೂಲಿ ಮಾಡುತ್ತಿರುವ ಸರ್ಕಾರ ಇದೀಗ ದೇಶದ ಒಂಭತ್ತು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೂ ಅಭಿವೃದ್ಧಿ ಸುಂಕ ವಿಧಿಸಲು ನಿರ್ಧರಿಸಿದೆ. ಈ ಹೊಸ ಪ್ರಸ್ತಾಪ ಈಗ ಸರ್ಕಾರದ ಮುಂದಿದ್ದು, ಭಾರತ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಸದ್ಯದಲ್ಲೇ ಸರ್ಕಾರದ ಅಧಿಕೃತ ಆದೇಶ ಪಡೆಯಲಿದೆ.

ಮೂಲಗಳ ಪ್ರಕಾರ, ಈ ಪ್ರಸ್ತಾಪ ಇದೀಗ ಹಣಕಾಸು ಇಲಾಖೆ ಮುಂದಿದ್ದು, ಮೇ ತಿಂಗಳಲ್ಲಿ ಕೇವಲ ತಾತ್ಕಾಲಿಕ ಅವಧಿಗೆ ಇದನ್ನು ಜಾರಿಗೊಳಿಸುವ ಸಂಭವವಿದೆ. ಈ ಅಭಿವೃದ್ಧಿ ದರ ಸ್ಥಳೀಯ ವಿಮಾನ ಪ್ರಯಾಣಿಕರಿಗೆ 200ರಿಂದ 250 ರೂಪಾಯಿಗಳಿರಲಿದ್ದು, ವಿದೇಶ ಪ್ರಯಾಣಿಕರಿಗೆ ಒಂದು ಸಾವಿರ ರೂಪಾಯಿ ಇರಲಿದೆ.

ಪ್ರಮುಖ ಖಾಸಗಿ ವಿಮಾನ ನಿಲ್ದಾಣಗಳಾದ ಬೆಂಗಳೂರು, ಹೈದರಾಬಾದ್, ದೆಹಲಿ, ಮುಂಬೈಗಳಿಗೂ ಇದು ಅನ್ವಯಿಸಲಿದೆ. ಪ್ರಾಧಿಕಾರ ದೇಶದ ಒಂಭತ್ತು ವಿಮಾನ ನಿಲ್ದಾಣಗಳನ್ನು ಆಧುನೀಕರಣಗೊಳಿಸುವ ಯೋಜನೆ ರೂಪಿಸಿದ್ದು, ಅದಕ್ಕಾಗಿ ಕೇವಲ ತಾತ್ಕಾಲಿಕ ಅವಧಿಗೆ ಈ ಶುಲ್ಕ ಹೇರುವ ಸಂಭವವಿದೆ. ಕೋಲ್ಕತ್ತಾ, ಚೆನ್ನೈ, ಜೈಪುರ್, ತಿರುವನಂತಪುರಂ, ಅಮೃತಸರ ಹಾಗೂ ತ್ರಿಚಿ ವಿಮಾನ ನಿಲ್ದಾಣಗಳೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
0.18ರಷ್ಟು ದಾಖಲೆ ಕುಸಿತ ಕಂಡ ಹಣದುಬ್ಬರ
ಸತ್ಯಂ ಮೇಲಿನ ಟೆಕ್ ಮಹೀಂದ್ರಾದ ಬಿಡ್‌ಗೆ ಸಿಎಲ್‌ಬಿ ಅನುಮತಿ
2009-10ಕ್ಕೆ ಭಾರತದ ಆರ್ಥಿಕತೆ ಶೇ.5.5ರಷ್ಟು ಕುಸಿತ
ಸತ್ಯಂಗೆ ಹೊಸ ಸಿಇಒ?
ಫಾರೆಕ್ಸ್: ರೂಪಾಯಿ ಮೌಲ್ಯದಲ್ಲಿ ವೃದ್ಧಿ
ಬೇಳೆಕಾಳು ಆಮದು ಇಳಿಕೆ