ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 1,756 ಕೋಟಿ ರೂ ಪಾವತಿಸಲು ಟೆಕ್ ಮಹೀಂದ್ರಾಗೆ ಏ.21 ಗಡುವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
1,756 ಕೋಟಿ ರೂ ಪಾವತಿಸಲು ಟೆಕ್ ಮಹೀಂದ್ರಾಗೆ ಏ.21 ಗಡುವು
PTI
ನವದೆಹಲಿ: ಸತ್ಯಂ ಖರೀದಿಸಿರುವುದಕ್ಕೆ ಟೆಕ್ ಮಹೀಂದ್ರಾ ಸಂಸ್ಥೆಗೆ ಕಂಪನಿ ಲಾ ಬೋರ್ಡ್‌ನಿಂದ ಅಧಿಕೃತ ಒಪ್ಪಿಗೆ ಸಿಕ್ಕಿದ್ದಾಗಿದೆ. ಹಾಗಾಗಿ ಇದೀಗ ಟೆಕ್ ಮಹೀಂದ್ರಾ ಸತ್ಯಂನ ಪಾಲುದಾರಿಕೆ ಶೇ.31ರಷ್ಟು ಪಡೆಯಬೇಕೆಂದಿದ್ದರೆ ಇದೇ ಏಪ್ರಿಲ್ 21ರೊಳಗೆ 1,756 ಕೋಟಿ ರೂಪಾಯಿಗಳನ್ನು ಕೊಡಬೇಕು.

ಕಂಪನಿಯ ಮೂಲಗಳ ಪ್ರಕಾರ, 1756 ಕೋಟಿ ರೂಪಾಯಿಗಳನ್ನು ಪಾವತಿಸಲು ಏ.21 ಕೊನೆಯ ದಿನಾಂಕವಾಗಿದ್ದು, ಈಗಾಗಲೇ ಆ ಬಗ್ಗೆ ಟೆಕ್ ಮಹೀಂದ್ರಾ ಸಾಕಷ್ಟು ತಯಾರಿ ನಡೆಸುತ್ತಿದೆ. 875 ಕೋಟಿ ರೂಪಾಯಿಗಳನ್ನು ಸಂಸ್ಥೆಯ ನಗದು ಮಾರುಕಟ್ಟೆಯಿಂದ ಕಲೆ ಹಾಕಲಾಗಿದ್ದು, ಸುಮಾರು 700 ಕೋಟಿ ರೂಪಾಯಿಗಳು ಈಗಾಗಲೇ ಟೆಕ್ ಮಹೀಂದ್ರಾದ ಬ್ಯಾಲೆನ್ಸ್ ಶೀಟ್‌ನಲ್ಲಿದೆ. ಉಳಿದ ಹಣವನ್ನು ಆಂತರಿಕ ಮೂಲಗಳಿಂದ ಒಟ್ಟೂಗೂಡಿಸಿ ಟೆಕ್ ಮಹೀಂದ್ರಾ ತನ್ನ ಕೊನೆಯ ದಿನಾಂಕದೊಳಗೆ ಪಾವತಿಸಲಿದೆ.

ಟೆಕ್ ಮಹೀಂದ್ರಾದ ಸಿಇಒ ಹಾಗೂ ಉಪಾಧ್ಯಕ್ಷ ವಿನೀತ್ ನಯ್ಯರ್ ಹೇಳುವಂತೆ, ಸರ್ಕಾರ ನೇಮಿಸಿದ ಮಂಡಳಿಯ ನಿರ್ಧಾರಕ್ಕೆ ನಾವು ಒಪ್ಪಿಕೊಂಡಿದ್ದು, ನಾವೀಗಾಗಲೇ ನಮ್ಮ ಕರ್ತವ್ಯಗಳ ನಿರ್ವಹಣೆಯನ್ನು ಸಮರ್ಥವಾಗಿ ಮಾಡುತ್ತಿದ್ದೇವೆ. ಹಾಗೂ ಬಿಡ್‌ನಲ್ಲಿ ವಿಜಯಿಯಾಗಿದ್ದಕ್ಕೆ, ಮುಂದಿನ ದಾರಿಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ ಎನ್ನುತ್ತಾರೆ.

ಕಂಪನಿ ಲಾ ಬೋರ್ಡ್ ಗುರುವಾರವೇ ಟೆಕ್ ಮಹೀಂದ್ರಾ ಬಿಡ್‌ ಗೆದ್ದುದಕ್ಕೆ ತನ್ನ ಅಧಿಕೃತ ಮುದ್ರೆ ಒತ್ತಿದ್ದು, ಮುಂದಿನ ಕಾರ್ಯಗಳತ್ತ ಟೆಕ್ ಮಹೀಂದ್ರಾ ಗಮನ ಹರಿಸುತ್ತಿದೆ. ಶೇ.51ರಷ್ಟು ಪಾಲುದಾರಿಕೆ ಪಡೆದಿರುವ ಟೆಕ್ ಮಹೀಂದ್ರಾ ಒಟ್ಟು 2,889 ಕೋಟಿ ರೂಪಾಯಿಗಳನ್ನು ನೀಡಬೇಕು. ಈಗ ಏಪ್ರಿಲ್ 21ರೊಳಗೆ ಮೊದಲ ಕಂತು 1,756 ಕೋಟಿ ರೂಪಾಯಿಗಳನ್ನು ನೀಡಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾರುಕಟ್ಟೆ ಕುಸಿತ: ರಫ್ತು, ಆಮದು ಇಳಿಕೆ
ಕೃಷಿ ವಿವಿ: ಪದವಿ ಪೂರ್ವ ಪ್ರವೇಶ ಪರೀಕ್ಷೆ ಮುಂದಕ್ಕೆ
ವಿಮಾನ ಪ್ರಯಾಣಿಕರಿಗೂ ಹೊಸ ಅಭಿವೃದ್ಧಿ ದರ ಹೇರಿಕೆ?
0.18ಕ್ಕೆ ದಾಖಲೆ ಕುಸಿತ ಕಂಡ ಹಣದುಬ್ಬರ
ಸತ್ಯಂ ಮೇಲಿನ ಟೆಕ್ ಮಹೀಂದ್ರಾದ ಬಿಡ್‌ಗೆ ಸಿಎಲ್‌ಬಿ ಅನುಮತಿ
2009-10ಕ್ಕೆ ಭಾರತದ ಆರ್ಥಿಕತೆ ಶೇ.5.5ರಷ್ಟು ಕುಸಿತ