ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಟೆಕ್ ಮಹೀಂದ್ರಾ ತೆಕ್ಕೆಯಲ್ಲಿ ಸತ್ಯಂ: ಗೊಂದಲದಲ್ಲಿ ಫಿಫಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟೆಕ್ ಮಹೀಂದ್ರಾ ತೆಕ್ಕೆಯಲ್ಲಿ ಸತ್ಯಂ: ಗೊಂದಲದಲ್ಲಿ ಫಿಫಾ
PR
ಕೋಲ್ಕತ್ತಾ: ಅಂತಾರಾಷ್ಟ್ರೀಯ ಪುಟ್‌ಬಾಲ್ ಅಸೋಸಿಯೇಶನ್ (ಫಿಫಾ) ಇದೀಗ ಹೊಸ ಸಂದಿಗ್ಧದಲ್ಲಿ ಸಿಲುಕಿದೆ. ಅದಕ್ಕೆ ಕಾರಣ ಟೆಕ್ ಮಹೀಂದ್ರಾ, ಸತ್ಯಂ ಕಂಪ್ಯೂಟರ್ಸ್‌ ಸಂಸ್ಥೆಯನ್ನು ಖರೀದಿಸಿರುವುದು.

ಫಿಫಾ 2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಸಲಿರುವ ಸೋಸರ್ ವಿಶ್ವಕಪ್‌ ಫುಟ್‌ಬಾಲ್‌ಗೆ ಮಾಹಿತಿ ತಂತ್ರಜ್ಞಾನ ಸೇವೆಯನ್ನು ನೀಡುವ ಮಹತ್ತರ ಜವಾಬ್ದಾರಿ ಸತ್ಯಂ ಕಂಪ್ಯೂಟರ್ಸ್ ಹೆಗಲ ಮೇಲಿದೆ. ಸತ್ಯಂ ಅದಕ್ಕೆ ಸಹಿ ಮಾಡಿತ್ತು. ಆದರೆ, ಇದೀಗ ಸತ್ಯಂ ಸಂಸ್ಥೆಯನ್ನು ಟೆಕ್ ಮಹೀಂದ್ರಾ ಖರೀದಿಸಿರುವ ಹಿನ್ನೆಲೆಯಲ್ಲಿ ಹಳೆಯ ಒಪ್ಪಂದವನ್ನು ಟೆಕ್ ಮಹೀಂದ್ರಾ ಮುಂದುವರಿಸುತ್ತದೆಯೋ ಎಂಬ ಅನುಮಾನ ಇದೀಗ ಫಿಫಾಕ್ಕೆ ಕಾಡುತ್ತಿದೆ.

ಫಿಫಾ ಮೂಲಗಳ ಪ್ರಕಾರ, ಸತ್ಯಂ- ಟೆಕ್ ಮಹೀಂದ್ರಾ ಸಂಬಂಧ ಈಗಾಗಲೇ ಫಿಫಾ ಗಮನಿಸುತ್ತಿದ್ದು, ಈ ಬಗ್ಗೆ ಈಗಲೇ ನಿರ್ಧಾರ ಕೈಗೊಳ್ಳುವುದು ಕಷ್ಟ. ಜತೆಗೆ ಸತ್ಯಂ ಈಗಾಗಲೇ ಸೋಸರ್ ವಿಶ್ವಕಪ್‌ಗೆ ತಾಂತ್ರಿಕ ಸಹಕಾರ ನೀಡುವ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಕಳೆದ ಆರು ತಿಂಗಳ ಹಿಂದೆಯೇ ಈ ಒಪ್ಪಂದದ ಬಗ್ಗೆ ಸತ್ಯಂ ಹಾಗೂ ಫಿಫಾ ಜತೆಗೆ ಮಾತುಕತೆಯೂ ನಡೆದಿತ್ತು. ಆದ ಸತ್ಯಂ ಹಗರಣ ಬಯಲಾಗಿರಲಿಲ್ಲ.

2007ರ ನವೆಂಬರ್ ತಿಂಗಳಲ್ಲಿ ಸತ್ಯಂ ತನ್ನ ಪತ್ರಿಕಾಗೋಷ್ಠಿಯಲ್ಲಿ 2010 ಹಾಗೂ 2014ರ ಫಿಫಾ ವಿಶ್ವಕಪ್ ಪಂದ್ಯಗಳಿಗೆ ತಾಂತ್ರಿಕ ಸಹಕಾರ ನೀಡುವ ಜವಾಬ್ದಾರಿಯನ್ನು ಸತ್ಯಂ ಮಾಡಿಕೊಂಡಿದ್ದು ಒಪ್ಪಂದಕ್ಕೆ ಸಹಿ ಮಾಡಲಾಗಿದೆ ಎಂದು ಹೇಳಿತ್ತು. ಈಗ ಹಗರಣದ ನಂತರವೂ ಸತ್ಯಂ, ಫಿಫಾ ಜತೆಗೆ ಮಾಡಿಕೊಂಡ ಒಪ್ಪಂದದಂತೆ ನಾವು ಮುಂದುವರಿಯುತ್ತೇವೆ. ಫಿಫಾ ನಮ್ಮ ಹೆಮ್ಮೆಯ ಗ್ರಾಹಕ. ಹೀಗಾಗಿ ಅದಕ್ಕೆ ಇಲ್ಲಿನ ಬದಲಾವಣೆಗಳು ಬಾಧೆ ತರಲಾರದು ಎಂದು ಹೇಳಿಕೊಂಡಿದೆ. ಆದರೂ ಫಿಫಾ ಜತೆಗೆ ಅಧಿಕೃತವಾಗಿ ಸತ್ಯಂ ತನ್ನ ಒಡೆತನದಲ್ಲಾದ ಬದಲಾವಣೆಯ ಬಗ್ಗೆ ಹೇಳಿಕೊಂಡಿದೆಯೇ ಎಂಬ ಪ್ರಶ್ನೆಗೆ ಮಾತ್ರ ಸತ್ಯಂನ ಮಾರುಕಟ್ಟೆ ವಿಭಾಗದ ಅಧ್ಯಕ್ಷ ಶ್ರೀಧರ್ ಮಾರುತಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೆಟ್ ಏರ್‌ವೇಸ್: 400 ಮಂದಿಯ ಉದ್ಯೋಗಕ್ಕೆ ಕತ್ತರಿ
1,756 ಕೋಟಿ ರೂ ಪಾವತಿಸಲು ಟೆಕ್ ಮಹೀಂದ್ರಾಗೆ ಏ.21 ಗಡುವು
ಮಾರುಕಟ್ಟೆ ಕುಸಿತ: ರಫ್ತು, ಆಮದು ಇಳಿಕೆ
ಕೃಷಿ ವಿವಿ: ಪದವಿ ಪೂರ್ವ ಪ್ರವೇಶ ಪರೀಕ್ಷೆ ಮುಂದಕ್ಕೆ
ವಿಮಾನ ಪ್ರಯಾಣಿಕರಿಗೂ ಹೊಸ ಅಭಿವೃದ್ಧಿ ದರ ಹೇರಿಕೆ?
0.18ಕ್ಕೆ ದಾಖಲೆ ಕುಸಿತ ಕಂಡ ಹಣದುಬ್ಬರ