ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಚೀನಾದ ಆರ್ಥಿಕ ಅಭಿವೃದ್ಧಿ ಶೇ.6.1ಕ್ಕೆ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೀನಾದ ಆರ್ಥಿಕ ಅಭಿವೃದ್ಧಿ ಶೇ.6.1ಕ್ಕೆ ಕುಸಿತ
ಬೀಚಿಂಗ್: ಜಾಗತಿಕ ಆರ್ಥಿಕ ಕುಸಿತದ ಪರಿಣಾಮದಿಂದಾಗಿ ಈ ಬಾರಿ ಚೀನಾದ ಮೊದಲ ತ್ರೈಮಾಸಿಕ ಆರ್ಥಿಕ ಅಭಿವೃದ್ಧಿ ಶೇ.6.1ಕ್ಕೆ ಕುಸಿದಿದೆ. ಕಳೆದ ಒಂದು ದಶಕದಲ್ಲೇ ಇದು ಅತಿ ಕಡಿಮೆ ಅಭಿವೃದ್ಧಿ ಸಾಧಿಸಿದ ವರ್ಷ ಎಂದು ದಾಖಲಾಗಿದೆ.

ಚೀನಾ ಕಳೆದ ಹತ್ತು ವರ್ಷಗಳಲ್ಲಿ ಪ್ರತಿವರ್ಷ ಆರ್ಥಿಕ ಅಭಿವೃದ್ಧಿಯಲ್ಲಿ ಎರಡಂಕಿಯ ಸಾಧನೆ ಮಾಡುತ್ತಲೇ ಬಂದಿತ್ತು. ಆದರೆ ಈ ಬಾರಿ ಮಾತ್ರ ಕೇವಲ ಒಂದಕಿಯ ಅಭಿವೃದ್ಧಿ (ಶೇ.6.1) ಸಾಧಿಸಿದೆ. ಕಳೆದ ವರ್ಷ ಮೊದಲ ತ್ರೈಮಾಸಿಕ ಅವಧಿಯಲ್ಲಿ ಚೀನಾ ಶೇ.10.6ರಷ್ಟು ಆರ್ಥಿಕ ಅಭಿವೃದ್ಧಿ ಕಂಡಿತ್ತು. ಆದರೆ ಅದು ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಶೇ.6.9ಕ್ಕೆ ಕುಸಿದಿತ್ತು. ಈ ಬಾರಿ ಮೊದಲ ತ್ರೈಮಾಸಿಕದಲ್ಲೇ ಮತ್ತೆ ಕುಸಿತವನ್ನೇ ಕಂಡಿದೆ.

ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಹೆಚ್ಚು ಬಂಡವಾಳ ತೊಡಗಿಸಿಕೊಂಡರೂ, ಗ್ರಾಹಕ ಸ್ನೇಹಿ ಸುಧಾರಣೆ ತಂದರೂ, ಚೀನಾದಲ್ಲಾದ ವ್ಯಾಪಕ ಉದ್ಯೋಗ ನಷ್ಟ ಈ ಕುಸಿತಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಚೀನಾದ ಕ್ಯಾಬಿನೆಟ್ ಚೀನಾದ ಆರ್ಥಿಕತೆಯಲ್ಲಿ ಅಂಧ ಹಾಗೂ ಅತಿಯಾದ ಆತ್ಮವಿಶ್ವಾಸ ಹೊಂದಿರುವುದಕ್ಕೆ ಎಚ್ಚರಿಕೆಯನ್ನೂ ನೀಡಿದೆ. ಸಾಗರೋತ್ತರ ಬಂಡವಾಳ ಹೂಡಿಕೆಯಲ್ಲಿ ಇಳಿಕೆ, ಕೆಲವು ಉದ್ಯಮ ವಲಯಗಳಲ್ಲಿ ಅತಿಯಾದ ಅಂಧ ಆತ್ಮವಿಶ್ವಾಸ, ಉದ್ಯೋಗ ನಷ್ಟ, ಮಿತಿಮೀರಿ ಹಿಂದುಮುಂದು ಯೋಚನೆಯಿಲ್ಲದೆ ಖಾಸಗಿ ವಲಯಗಳಲ್ಲಿ ಬಂಡವಾಳ ಹೂಡುವುದರಿಂದ ಚೀನಾಕ್ಕೆ ಈ ಸ್ಥಿತಿ ಬಂದಿದೆ ಎಂದು ಕ್ಯಾಬಿನೆಟ್ ಆತ್ಮಾವಲೋಕನ ಮಾಡಿದೆ. ಅಲ್ಲದೆ ಚೀನಾ, ಗುರಿಯೊಂದನ್ನು ರೂಪಿಸಿಕೊಂಡಿದ್ದು, 2009ರಲ್ಲಿ ಕನಿಷ್ಟ ಶೇ.8ರಷ್ಟಾದರೂ ಆರ್ಥಿಕ ಅಭಿವೃದ್ಧಿ ಸಾಧಿಸಬೇಕು ಎಂದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚೀನಾ, ಆರ್ಥಿಕ ಕುಸಿತ, Chinas economic growth
ಮತ್ತಷ್ಟು
ಟೆಕ್ ಮಹೀಂದ್ರಾ ತೆಕ್ಕೆಯಲ್ಲಿ ಸತ್ಯಂ: ಗೊಂದಲದಲ್ಲಿ ಫಿಫಾ
ಜೆಟ್ ಏರ್‌ವೇಸ್: 400 ಮಂದಿಯ ಉದ್ಯೋಗಕ್ಕೆ ಕತ್ತರಿ
1,756 ಕೋಟಿ ರೂ ಪಾವತಿಸಲು ಟೆಕ್ ಮಹೀಂದ್ರಾಗೆ ಏ.21 ಗಡುವು
ಮಾರುಕಟ್ಟೆ ಕುಸಿತ: ರಫ್ತು, ಆಮದು ಇಳಿಕೆ
ಕೃಷಿ ವಿವಿ: ಪದವಿ ಪೂರ್ವ ಪ್ರವೇಶ ಪರೀಕ್ಷೆ ಮುಂದಕ್ಕೆ
ವಿಮಾನ ಪ್ರಯಾಣಿಕರಿಗೂ ಹೊಸ ಅಭಿವೃದ್ಧಿ ದರ ಹೇರಿಕೆ?