ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 'ಅಳುತ್ತಿದ್ದ ಅನಾಥ ಮಗು' ಸತ್ಯಂ: ಸಿಎಲ್‌ಬಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಅಳುತ್ತಿದ್ದ ಅನಾಥ ಮಗು' ಸತ್ಯಂ: ಸಿಎಲ್‌ಬಿ
PTI
ನವದೆಹಲಿ: 'ರಾತ್ರೋರಾತ್ರಿ ಹೆತ್ತವರನ್ನು ಕಳೆದುಕೊಂಡು ಅಳುತ್ತಾ ಕೂತಿದ್ದ ಅನಾಥ ಮಗುವನ್ನು ದತ್ತು ತೆಗೆದುಕೊಂಡರು.' ಹೀಗೆ ಹೇಳಿದ್ದು ಕಂಪನಿ ಲಾ ಬೋರ್ಡ್‌ನ ಅಧ್ಯಕ್ಷ ಎಸ್.ಬಾಲಸುಬ್ರಹ್ಮಣ್ಯನ್. ಆ ಅನಾಥ ಮಗು ಇನ್ಯಾರೂ ಅಲ್ಲ. ನಾಲ್ಕನೇ ಅತಿ ದೊಡ್ಡ ಐಟಿ ಕಂಪನಿ ಸತ್ಯಂ.

ಸತ್ಯಂ ರಾತ್ರಿ ಬೆಳಗಾಗುವಷ್ಟರಲ್ಲಿ ಹೆತ್ತವರನ್ನು ಕಳೆದುಕೊಂಡು ಅನಾಥವಾಗಿ ಹೋಯಿತು. ಈಗ ಸತ್ಯಂಗೆ ಹೊಸ ಹೆತ್ತವರು ಸಿಕ್ಕಿದ್ದಾರೆ. ಅಳುತ್ತಾ ಕೂತಿದ್ದ ಮಗುವನ್ನು ಪೋಷಿಸಲು ಆ ಮಗುವನ್ನು ದತ್ತು ಕೊಡಲಾಗಿದೆ ಎಂದು ಟೆಕ್ ಮಹೀಂದ್ರಾ ಸತ್ಯಂ ಕಂಪ್ಯೂಟರ್ಸ್ ಸಂಸ್ಥೆಯನ್ನು ಖರೀದಿಸಿರುವುದನ್ನು ಬಾಲಸುಬ್ರಹ್ಮಣ್ಯನ್ ವಿಷಾದದಿಂದ ಬಣ್ಣಿಸಿದರು.

ಸತ್ಯಂನ ಸಂಸ್ಥಾಪಕ, ಅಧ್ಯಕ್ಷ ರಾಮಲಿಂಗರಾಜು ಜನವರಿ ತಿಂಗಳಲ್ಲಿ ಸುಮಾರು ಏಳು ಸಾವಿರ ಕೋಟಿ ರೂಪಾಯಿಗಳ ಹಗರಣವನ್ನೇ ಸೃಷ್ಟಿಸಿಬಿಟ್ಟರು. ಹೀಗಾಗಿ ಸತ್ಯಂ ರಾತ್ರಿ ಬೆಳಗಾಗುವುದರೊಳಗೆ ಅನಾಥವಾಗಿ ಹೋಯಿತು. ಈಗ ಹೊಸ ಅಪ್ಪ- ಅಮ್ಮನ ಮಡಿಲಿಗೆ ಮಗುವನ್ನು ಬಿಟ್ಟಿದ್ದೇವೆ. ಹೆತ್ತವರನ್ನು ಕಳೆದುಕೊಂಡ ದುಃಖದ ಗಾಯಗಳನ್ನು ಗುಣಪಡಿಸುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಸತ್ಯಂ ಬೆಳೆದ ಮಗು. ಇನ್ನು ಟೆಕ್ ಮಹೀಂದ್ರಾ ಸತ್ಯಂಗೆ ಅಪ್ಪ- ಅಮ್ಮನಾಗಿ ಪೋಷಿಸಲಿದೆ ಎಂದು ಅವರು ಟೆಕ್ ಮಹೀಂದ್ರಾಗೆ ಸತ್ಯಂ ಖರೀದಿಯ ಅಧಿಕ-ತ ಅನುಮತಿ ಪತ್ರ ನೀಡುವ ಸಂದರ್ಭ ವಿವರಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚೀನಾದ ಆರ್ಥಿಕ ಅಭಿವೃದ್ಧಿ ಶೇ.6.1ಕ್ಕೆ ಕುಸಿತ
ಟೆಕ್ ಮಹೀಂದ್ರಾ ತೆಕ್ಕೆಯಲ್ಲಿ ಸತ್ಯಂ: ಗೊಂದಲದಲ್ಲಿ ಫಿಫಾ
ಜೆಟ್ ಏರ್‌ವೇಸ್: 400 ಮಂದಿಯ ಉದ್ಯೋಗಕ್ಕೆ ಕತ್ತರಿ
1,756 ಕೋಟಿ ರೂ ಪಾವತಿಸಲು ಟೆಕ್ ಮಹೀಂದ್ರಾಗೆ ಏ.21 ಗಡುವು
ಮಾರುಕಟ್ಟೆ ಕುಸಿತ: ರಫ್ತು, ಆಮದು ಇಳಿಕೆ
ಕೃಷಿ ವಿವಿ: ಪದವಿ ಪೂರ್ವ ಪ್ರವೇಶ ಪರೀಕ್ಷೆ ಮುಂದಕ್ಕೆ