ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 2009ರ ಆರ್ಥಿಕ ಕುಸಿತ ಇನ್ನೂ ಕಠಿಣ: ಐಎಂಎಫ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2009ರ ಆರ್ಥಿಕ ಕುಸಿತ ಇನ್ನೂ ಕಠಿಣ: ಐಎಂಎಫ್
ವಾಷಿಂಗ್ಟನ್: 2009ರಲ್ಲಿ ಜಾಗತಿಕ ಆರ್ಥಿಕ ಮುಗ್ಗಟ್ಟು ಇನ್ನೂ ಹೀನಾಯ ಸ್ಥಿತಿಯನ್ನು ತಲುಪಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಎಫ್)ಯ ವ್ಯವಸ್ಥಾಪಕ ನಿರ್ದೇಶಕ ಡೊಮಿನೀಕ್ ಸ್ಟ್ರಾಸ್ ಕನ್ ಭವಿಷ್ಯ ನುಡಿದಿದ್ದಾರೆ.

ರಾಷ್ಟ್ರೀಯ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಅವರು, ವಿಶ್ವದ ಮೂಲೆ ಮೂಲೆಗೂ ಆರ್ಥಿಕ ಬಿಕ್ಕಟ್ಟು ತನ್ನ ಪ್ರಭಾವ ಬೀರಿರುವುದು ಕಂಡು ಭಯವಾಗುತ್ತಿದೆ. 2009 ಆರ್ಥಿಕವಾಗಿ ಇನ್ನೂ ಹೆಚ್ಚಿನ ಕುಸಿತ ಕಾಣುವ ವರ್ಷವಾಗಿ ಪರಿಣಮಿಸಲಿದೆ ಎಂದರು.

ಆರ್ಥಿಕ ಹಿನ್ನಡೆ ಎಂಬ ಅಗ್ನಿ ತನ್ನ ಕೆನ್ನಾಲಿಗೆಯಿಂದ ಜಗವನ್ನೇ ಸುಡುತ್ತಿದೆ. ಯಾರಿಂದಲೂ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಮಾರುಕಟ್ಟೆಯೂ ಈಗ ದುಸ್ತರವಾಗಿದೆ. ರಫ್ತು ಬೇಡಿಕೆಯೂ ಕುಸಿದಿದೆ. ಬಂಡವಾಳದ ಒಳಹರಿವಿನಲ್ಲೂ ಸಾಕಷ್ಟು ಕುಸಿತ ಕಂಡುಬಂದಿದೆ ಎಂದರು. ಆರ್ಥಿಕ ಕುಸಿತ ಶ್ರೀಮಂತ ಬಡವರೆನ್ನದೆ ಎಲ್ಲ ರಾಷ್ಟ್ರಗಳಿಗೂ ಕಾಟ ಕೊಡುತ್ತಿದೆ. ಆರ್ಥಿಕ ಹೊಡೆತದಿಂದಲೇ ಬಡರಾಷ್ಟ್ರಗಳ ಬಡತನ ಇನ್ನೂ ಹೆಚ್ಚಾಗುತ್ತಿರುವುದು ಶೋಚನೀಯ ಬೆಳವಣಿಗೆ ಎಂದು ಕನ್ ಅಭಿಪ್ರಾಯಪಟ್ಟರು.

ಜಾಗತಿಕ ಆರ್ಥಿಕತೆ ಈಗಾಗಲೇ ಕುಗ್ಗುತ್ತಾ ಸಾಗಿದೆ. ಇದು ಬೆಳವಣಿಗೆ ಕಾಣಲು 2010ರವರೆಗೆ ಕಾಯಬೇಕು. ಆದರೂ ಹಲವು ಆರ್ಥಿಕ ಯೋಜನೆಗಳಿಂದ ಇದಕ್ಕೆ ಪರಿಹಾರ ಸಾಧ್ಯ. ಇದು ಪ್ರತಿ ರಾಷ್ಟ್ರ ಹೇಗೆ ಪರಿಹಾರ ಹುಡುಕುತ್ತದೆ ಎನ್ನುವುದರ ಮೇಲೆ ನಿಂತಿದೆ ಎಂದರು. ಇದೇ ಸಂದರ್ಭ, ಜಿ-20 ಶೃಂಗ ಸಭೆಯ ನಡವಳಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಜಿ-20 ಪರಿಹಾರಗಳು ಸಫಲತೆ ತರಬಹುದು. ನಮಗೆ ಸಾಕಷ್ಟು ದೃಢತೆಯಿರುವ ಆರ್ಥಿಕ ಯೋಜನೆಗಳ ಅಗತ್ಯವಿದೆ ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಿ20, ಆರ್ಥಿಕ ಕುಸಿತ, ಐಎಂಎಫ್, IMF, economic crisis, G20
ಮತ್ತಷ್ಟು
'ಅಳುತ್ತಿದ್ದ ಅನಾಥ ಮಗು' ಸತ್ಯಂ: ಸಿಎಲ್‌ಬಿ
ಚೀನಾದ ಆರ್ಥಿಕ ಅಭಿವೃದ್ಧಿ ಶೇ.6.1ಕ್ಕೆ ಕುಸಿತ
ಟೆಕ್ ಮಹೀಂದ್ರಾ ತೆಕ್ಕೆಯಲ್ಲಿ ಸತ್ಯಂ: ಗೊಂದಲದಲ್ಲಿ ಫಿಫಾ
ಜೆಟ್ ಏರ್‌ವೇಸ್: 400 ಮಂದಿಯ ಉದ್ಯೋಗಕ್ಕೆ ಕತ್ತರಿ
1,756 ಕೋಟಿ ರೂ ಪಾವತಿಸಲು ಟೆಕ್ ಮಹೀಂದ್ರಾಗೆ ಏ.21 ಗಡುವು
ಮಾರುಕಟ್ಟೆ ಕುಸಿತ: ರಫ್ತು, ಆಮದು ಇಳಿಕೆ