ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ದೇಶದ ಆರ್ಥಿಕತೆ ಸುಧಾರಣೆಗೆ ಸಿಮೆಂಟ್, ಸ್ಟೀಲ್ ಆಧಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇಶದ ಆರ್ಥಿಕತೆ ಸುಧಾರಣೆಗೆ ಸಿಮೆಂಟ್, ಸ್ಟೀಲ್ ಆಧಾರ
ಚೆನ್ನೈ: ಜಾಗತಿಕ ಆರ್ಥಿಕ ದುಸ್ತರವಿದ್ದರೂ ಸದ್ಯದ ಮಟ್ಟಿಗೆ ಭಾರತ ಆರ್ಥಿಕತೆಯನ್ನು ಸಹಜ ಸ್ಥಿತಿಗೆ ತರುವಲ್ಲಿ ಸ್ಟೀಲ್ ಹಾಗೂ ಸಿಮೆಂಟ್ ಉದ್ಯಮಗಳೇ ಆಧಾರ ಸ್ತಂಭಗಳಾಗಿವೆ. ಸರ್ಕಾರ ನೀಡುತ್ತಿರುವ ಹೆಚ್ಚಿನ ಮೂಲಸೌಕರ್ಯದಿಂದಾಗಿ ಇದೀಗ ಸಿಮೆಂಟ್ ಉದ್ಯಮದಲ್ಲಿ ಕಳೆದ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಶೇ.12.75ರಷ್ಟು ಅಭಿವೃದ್ಧಿ ಕಂಡಿದೆ. ಕಳೆದ ತ್ರೈಮಾಸಿಕದಲ್ಲಿ ಶೇ.9ರಷ್ಟು ಅಭಿವೃದ್ಧಿಯನ್ನು ಇದು ಕಂಡಿತ್ತು. ಸ್ಟೀಲ್ ಉದ್ಯಮವೂ ಶೇ.3.8ರಷ್ಟು ಬೆಳವಣಿಗೆ ಕಂಡಿದೆ.

ದಕ್ಷಿಣ ಭಾರತದ ದೊಡ್ಡ ಸಿಮೆಂಟ್ ಉದ್ಯಮವಾದ ದಿ ಇಂಡಿಯಾ ಸಿಮೆಂಟ್ ಲಿಮಿಟೆಡ್‌ನ ಮಾರುಕಟ್ಟೆ ವಿಭಾಗದ ಜಂಟಿ ಅಧ್ಯಕ್ಷ ರಾಕೇಶ್ ಸಿಂಗ್ ಹೇಳುವಂತೆ, ಈ ಮೊದಲಿನ ವರ್ಷಗಳಿಗೆ ಹೊಲಿಸಿದರೆ ಕಳೆದ ಆರ್ಥಿಕ ವರ್ಷ ಉತ್ತಮ ವರ್ಷವಾಗಿದೆ. ಆಗ ಒಟ್ಟು 211 ಮಿಲಿಯನ್ ಟನ್‌ಗಳಷ್ಟು ಸಿಮೆಂಟ್ ಉತ್ಪಾದಿಸಲಾಗಿತ್ತು. ಬೆಲೆಯೂ ವರ್ಷಪೂರ್ತಿ ಏರಿಳಿತಗಳನ್ನು ಕಾಣದೆ ಸಾಮಾನ್ಯವಾಗಿತ್ತು. ಆದರೆ ಬಹುದೊಡ್ಡ ತೊಂದರೆ ಎಂದರೆ ಹೆಚ್ಚಾದ ಉತ್ಪಾದನಾ ವೆಚ್ಚದ ಸಮಸ್ಯೆ ಎನ್ನುತ್ತಾರೆ.

ದೊಡ್ಡ ನಗರಗಳಲ್ಲಿ ಮನೆಗಳ, ಕಟ್ಟಡಗಳ ನಿರ್ಮಾಣಕ್ಕೆ ಹಾಗೂ ಸರ್ಕಾರದ ಪ್ರಾಯೋಜಿತ ಯೋಜನೆಗಳಿಗೆ ಹೆಚ್ಚಿನ ಸಿಮೆಂಟ್ ಪೂರೈಕೆಯಾಗುತ್ತಿದೆ. ಪೂರ್ವ ಭಾರತದಲ್ಲಿ ಶೇ.11ರಷ್ಟು ಸಿಮೆಂಟ್‌ ಉಪಯೋಗ ಹೆಚ್ಚಿದರೆ, ದಕ್ಷಿಣ ಹಾಗೂ ಮಧ್ಯ ಭಾರತದಲ್ಲಿ ಶೇ.10ರಷ್ಟು ಬೇಡಿಕೆ ಹೆಚ್ಚಿದೆ. ಉತ್ತರ ಹಾಗೂ ಪಶ್ಚಿಮದಲ್ಲಿ ಶೇ.5ರಷ್ಟು ಹೆಚ್ಚಿದೆ ಎನ್ನುತ್ತಾರೆ ರಾಕೇಶ್.

ಉತ್ತರ ಪ್ರದೇಶದಲ್ಲಿ ಸಿಮೆಂಟ್ ಬೆಲೆ ಗಗನಕ್ಕೇರಿದೆ. ಸಿಮೆಂಟ್ ಮಟ್ಟಿಗೆ ಕಳೆದ ಆರ್ಥಿಕ ವ್ಷ ತುಂಬ ಉತ್ತಮವಾದ ಆರ್ಥಿಕ ವರ್ಷವಾಗಿ ಹೊರಹೊಮ್ಮಿದೆ. ಆದರೆ ಹಲವೆಡೆ ಬೇಡಿಕೆಯ ಪೂರೈಕೆಯೇ ಅಸಾಧ್ಯವಾಗುತ್ತಿದೆ ಎಂಬುದು ಸಮಸ್ಯೆಯಾಗಿ ಪರಿಣಮಿಸಿದೆ. ಬೇಡಿಕೆ 245- 250 ಮಿಲಿಯನ್ ಟನ್‌ಗಳಷ್ಟಿವೆಯಾದರೆ, ಪೂರೈಕೆ ಸಾಧ್ಯವಾಗಿರುವುದು ಕೇವಲ 211 ಮಿಲಿಯನ್ ಟನ್‌ಗಳಷ್ಟು ಎನ್ನುತ್ತಾರೆ ರಾಕೇಶ್.

ಬೇಡಿಕೆಯ ಪೂರೈಕೆ ಸಾಧ್ಯವಾಗದೆ, ಯೋಜನೆಗಳು ವಿಳಂಬವಾಗುತ್ತಿವೆ. ಹಾಗಾಗಿ 2010ನೇ ಆರ್ಥಿಕ ವರ್ಷದಲ್ಲಿ ಸಿಮೆಂಟ್ ವಲಯಕ್ಕೆ ಬೇಡಿಕೆ ಪೂರೈಕೆಯೇ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಬಹುದು ಎಂದು ಹೇಳಲಾಗುತ್ತಿದೆ. ಕೇಂದ್ರ ಸ್ಟೀಲ್ ಕಾರ್ಯದರ್ಶಿ ಪ್ರಮೋದ್ ರಸ್ತೋಗಿ ಹೇಳುವಂತೆ, ಸ್ಟೀಲ್ ಬಳಕೆ ಶೇ.3.8ರಷ್ಟು ಕಳೆದ ಆರ್ಥಿಕ ವರ್ಷದಲ್ಲಿ ಹೆಚ್ಚಿದೆ ಹಾಗೂ ಶೇ.1.2ರಷ್ಟು ಉತ್ಪಾದನೆಯೂ ಹೆಚ್ಚಿದೆ. ಸರ್ಕಾರವೂ ಈಗ ಮೂಲಸೌಕರ್ಯ ಹೆಚ್ಚಿಸಿರುವುದರಿಂದ ಸ್ಟೀಲ್ ಉದ್ಯಮದಲ್ಲಿ ಬೆಳವಣಿಗೆ ಕಂಡಿದೆ ಎನ್ನುತ್ತಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಟೀಲ್, ಸಿಮೆಂಟ್, cement, steel
ಮತ್ತಷ್ಟು
ಮೇ ಅಂತ್ಯದೊಳಗೆ ಸತ್ಯಂ ಲೆಕ್ಕಪರಿಶೋಧನೆ ಪೂರ್ಣ: ಸೆಬಿ
ಹೀರೊ ಹೊಂಡಾ ಶೇ.12ರಷ್ಟು ಪ್ರಗತಿ
ಜಿಡಿಪಿ ದರ ಕುಸಿತ ಸಾಧ್ಯತೆ
ಸತ್ಯಂನ ನಿರ್ದೇಶಕರು ಹಗರಣದಲ್ಲಿ ಭಾಗಿಯಲ್ಲ: ಎಸ್ಎಫ್ಐಒ
2009ರ ಆರ್ಥಿಕ ಕುಸಿತ ಇನ್ನೂ ಕಠಿಣ: ಐಎಂಎಫ್
'ಅಳುತ್ತಿದ್ದ ಅನಾಥ ಮಗು' ಸತ್ಯಂ: ಸಿಎಲ್‌ಬಿ