ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 'ಯಾಹೂ!ಇಂಡಿಯಾ'‌ದ ನೂತನ ಎಂಡಿ ಅರುಣ್ ತಡಂಕಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಯಾಹೂ!ಇಂಡಿಯಾ'‌ದ ನೂತನ ಎಂಡಿ ಅರುಣ್ ತಡಂಕಿ
ಬೆಂಗಳೂರು: 'ಯಾಹೂ!ಇಂಡಿಯಾ' ಕೊನೆಗೂ 20 ತಿಂಗಳ ನಂತರ ತನ್ನ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಹುಡುಕಿದೆ. ಮೇ ತಿಂಗಳಲ್ಲಿ ಮಾನ್ಸ್ಟರ್ ಡಾಟ್ ಕಾಂನ ಏಷ್ಯಾ ಫೆಸಿಫಿಕ್ ಅಧ್ಯಕ್ಷರಾಗಿರುವ ಯುವ ಪ್ರತಿಭೆ ಅರುಣ್ ತಡಂಕಿ ಅವರು ಯಾಹೂ! ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿ ಸ್ಥಾನ ಅಲಂಕರಿಸಲಿದ್ದಾರೆ.

ಜಾರ್ಜ್ ಝಚೇರಿಯಾಸ್ ಅವರು ಯಾಹೂ‍‍‍! ಇಂಡಿಯಾಕ್ಕೆ ರಾಜೀನಾಮೆ ಕೊಟ್ಟು 20 ತಿಂಗಳಾಗಿದ್ದರೂ ಯಾಹೂಗೆ ಈ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಸಿಕ್ಕಿರಲಿಲ್ಲ. ಹೀಗಾಗಿ ಉಪಾಧ್ಯಕ್ಷರಾಗಿದ್ದ ಕೈತ್ ನೀಲ್ಸನ್ ಅವರೇ ಸಿಂಗಾಪುರದಿಂದಲೇ ಯಾಹೂ! ಇಂಡಿಯಾದ ಉಸ್ತುವಾರಿ ವಹಿಸಿದ್ದರು. ಜತೆಗೆ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾಗಿದ್ದ ಗೋಪಾಲಕೃಷ್ಣ ಅವರೂ ಸಂಸ್ಥೆಯ ಮಧ್ಯಂತರ ಅವಧಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೂಗಿಯೂ ಕಾರ್ಯ ನಿರ್ವಹಿಸಿದ್ದರು. ಕೊನೆಗೂ ಹೊಸ ವ್ಯವಸ್ಥಾಪಕ ನಿರ್ದೇಶಕರು ಸ್ಥಾನ ಅಲಂಕರಿಸಲಿರುವುದರಿಂದ ಗೋಪಾಲಕೃಷ್ಣ ಅವರು ತಮ್ಮ ಮೊದಲಿನ ಕಾರ್ಯಕ್ಕೇ ಮರಳಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೇಶದ ಆರ್ಥಿಕತೆ ಸುಧಾರಣೆಗೆ ಸಿಮೆಂಟ್, ಸ್ಟೀಲ್ ಆಧಾರ
ಮೇ ಅಂತ್ಯದೊಳಗೆ ಸತ್ಯಂ ಲೆಕ್ಕಪರಿಶೋಧನೆ ಪೂರ್ಣ: ಸೆಬಿ
ಹೀರೊ ಹೊಂಡಾ ಶೇ.12ರಷ್ಟು ಪ್ರಗತಿ
ಜಿಡಿಪಿ ದರ ಕುಸಿತ ಸಾಧ್ಯತೆ
ಸತ್ಯಂನ ನಿರ್ದೇಶಕರು ಹಗರಣದಲ್ಲಿ ಭಾಗಿಯಲ್ಲ: ಎಸ್ಎಫ್ಐಒ
2009ರ ಆರ್ಥಿಕ ಕುಸಿತ ಇನ್ನೂ ಕಠಿಣ: ಐಎಂಎಫ್