ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಚುನಾವಣೆಯಿಂದ ಜಿಡಿಪಿಯಲ್ಲಿ ಶೇ.0.5 ಚೇತರಿಕೆ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣೆಯಿಂದ ಜಿಡಿಪಿಯಲ್ಲಿ ಶೇ.0.5 ಚೇತರಿಕೆ?
PTI
ಕೊಯಂಬತ್ತೂರ್: ಈ ಬಾರಿಯ ಲೋಕಸಭಾ ಚುನಾವಣೆಯಿಂದಾಗಿ ಜಿಡಿಪಿ ಶೇ.0.5ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆ. ಚುನಾವಣಾ ಅಭ್ಯರ್ಥಿಗಳು ಗೆಲ್ಲುವ ಆಸೆಯಿಂದ ಸಾಕಷ್ಟು ಹಣ ಸುರಿಯುತ್ತಿರುವುದರಿಂದ ಜಿಡಿಯಲ್ಲಿ ಈ ಸುಧಾರಣೆ ಕಂಡುಬರಲಿದೆ ಎಂದು ಹೇಳಲಾಗುತ್ತಿದೆ.

ವಿವಿಧ ಪಕ್ಷಗಳು ತಮಮ್ ಚುಾವಣಾ ಪ್ರಣಾಳಿಕೆಗಳ ಮೂಲಕ ಜನರನ್ನು ಆಕರ್ಷಿಸುತ್ತಿದ್ದು, ಹಲವು ಭರವಸೆಗಳನ್ನು ನೀಡುತ್ತಿವೆ. ಈ ಭರವಸೆಗಳು ಈಡೇರಿದರೆ ಜಿಡಿಪಿಯಲ್ಲಿ ಶೇ, 1ರಿಂದ 2.4ರಷ್ಟು ಅಭಿವೃದ್ಧಿಯಾಗಬಹುದು. ಚುನಾವಣೆಯ ಒಟ್ಟು ಖರ್ಚು 16,700 ಕೋಟಿ ರೂಪಾಯಿಗಳಿಂದ 25,100 ಕೋಟಿ ರೂಪಾಯಿಗಳಷ್ಟಕ್ಕೆ ಅಂದರೆ ಶೇ.0.5ರಷ್ಟು ಜಿಡಿಪಿಗೆ ಸುಧಾರಣೆ ತರಬಹುದು ಎಂದು ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ ಸಂಸ್ಥೆ ಅಂದಾಜು ಮಾಡಿದೆ.

ಕೋಟಕ್‌ನ ಮುಖ್ಯ ಆರ್ಥಿಕ ತಜ್ಞ ಮೃದುಲ್ ಸಾಗರ್ ಹೇಳುವಂತೆ, ತಾತ್ಕಾಲಿಕ ಉತ್ತೇಜಕ ಪ್ಯಾಕೇಜುಗಳ ಮೂಲಕ ದೇಶದ ಆರ್ಥಿಕತೆಗೆ ಹೆಚ್ಚು ಚೈತನ್ಯ ನೀಡಬಹುದು. ಇದರಿಂದ ಜಿಡಿಯಲ್ಲೂ ಗಮನಾರ್ಹ ಸುಧಾರಣೆ ಕಂಡುಬರಬಹುದು. ಈಗ ಚುನಾವಣಾ ಪ್ರಣಾಳಿಕೆಯಲ್ಲಿರುವ ನಡವಳಿಗಳನ್ನೇ ಜಾರಿಗೆ ತಂದಲ್ಲಿ ಜಿಡಿಪಿ ಚೇತರಿಕೆಗೆ ಸಾಕಷ್ಟು ಉಪಯೋಗವಾಗುತ್ತದೆ ಎನ್ನುತ್ತಾರೆ.

ಚುನಾವಣಾ ಅಭ್ಯರ್ಥಿಗಳು ಸುಮಾರು 12,700 ಕೋಟಿ ರೂಪಾಯಿಗಳನ್ನು ಈ ಚುನಾವಣೆಗೆ ಖರ್ಚು ಮಾಡಬಹುದು ಎಂದು ಅಂದಾಜಿಸಲಾಗಿದೆ. ರಾಷ್ಟ್ರೀಯ ಪಕ್ಷಗಳು ಸುಮಾರು 700 ಕೋಟಿ ರೂಪಾಯಿಗಳನ್ನು ಚುನಾವಣೆಗೆ ಖರ್ಚುಮಾಡಲಿವೆ. ಆದರೆ, ಸ್ಥಳೀಯ ಪಕ್ಷಗಳು ರಾಷ್ಟ್ರೀಯ ಪಕ್ಷಗಳಿಗಿಂತಲೂ ಹೆಚ್ಚು ಖರ್ಚು ಮಾಡುತ್ತಿವೆ ಎಂಬುದೇ ವಿಶೇಷ. ಸ್ಥಳೀಯ ಪಕ್ಷಗಳು 1,200 ಕೋಟಿ ರೂಪಾಯಿಗಳನ್ನು ಚುನಾವಣೆಗೆ ಖರ್ಚು ಮಾಡುತ್ತಿವೆ ಎನ್ನುತ್ತಾರೆ ಮೃದುಲ್.

2004ರ ಚುನಾವಣೆಯಲ್ಲಿ ಅಧಿಕೃತವಾಗಿ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣೆಗಾಗಿ ಒಟ್ಟು 268.6 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದರು. ಈ ಬಾರಿ ಚುನಾವಣಾ ಆಯೋಗ ಸುಮಾರು 1,800 ಕೋಟಿ ರೂಪಾಯಿಗಳಷ್ಟು ಖರ್ಚಾಗಬಹುದೆಂದು ಅಂದಾಜಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚುನಾವಣೆ, ಜಿಡಿಪಿ, General elections, GDP
ಮತ್ತಷ್ಟು
'ಯಾಹೂ!ಇಂಡಿಯಾ'‌ದ ನೂತನ ಎಂಡಿ ಅರುಣ್ ತಡಂಕಿ
ದೇಶದ ಆರ್ಥಿಕತೆ ಸುಧಾರಣೆಗೆ ಸಿಮೆಂಟ್, ಸ್ಟೀಲ್ ಆಧಾರ
ಮೇ ಅಂತ್ಯದೊಳಗೆ ಸತ್ಯಂ ಲೆಕ್ಕಪರಿಶೋಧನೆ ಪೂರ್ಣ: ಸೆಬಿ
ಹೀರೊ ಹೊಂಡಾ ಶೇ.12ರಷ್ಟು ಪ್ರಗತಿ
ಜಿಡಿಪಿ ದರ ಕುಸಿತ ಸಾಧ್ಯತೆ
ಸತ್ಯಂನ ನಿರ್ದೇಶಕರು ಹಗರಣದಲ್ಲಿ ಭಾಗಿಯಲ್ಲ: ಎಸ್ಎಫ್ಐಒ