ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ನಾರಾಯಣ ಮೂರ್ತಿ ಕುಟುಂಬದ ಬೆಲೆ 4,000 ಕೋಟಿ ರೂ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾರಾಯಣ ಮೂರ್ತಿ ಕುಟುಂಬದ ಬೆಲೆ 4,000 ಕೋಟಿ ರೂ!
PTI
ಬೆಂಗಳೂರು: ಇನ್ಫೋಸಿಸ್ ನಾರಾಯಣಮೂರ್ತಿ ಕುಟುಂಬ ಸುಮಾರು 4,000 ಕೋಟಿ ಬೆಲೆಬಾಳುತ್ತದೆ. ಅಂದರೆ ಇನ್ಫೋಸಿಸ್‌ನಲ್ಲಿ ನಾರಾಯಣ ಮೂರ್ತಿ ಕುಟುಂಬದ ಸುಮಾರು ನಾಲ್ಕು ಸಾವಿರ ಕೋಟಿ ರುಪಾಯಿಗಳ ಷೇರು ಇದೆ. ನಾರಾಯಣಮೂರ್ತಿ ಹಾಗೂ ಪತ್ನಿ ಸುಧಾಮೂರ್ತಿ ಅವರ ಪಾಲು ಇದರಲ್ಲಿ 1,750 ಕೋಟಿ ರೂಪಾಯಿಗಳಾದರೆ, ಉಳಿದ 2,225 ಕೋಟಿ ರೂಪಾಯಿಗಳ ಪಾಲು ಅವರ ಮಕ್ಕಳಾದ ರೋಹನ್ ಹಾಗೂ ಅಕ್ಷತಾರದ್ದು. ಅದರ್ಲಲೂ 1750 ಕೋಟಿ ರೂಪಾಯಿಗಳ ದಂಪತಿಗಳ ಪಾಲಲ್ಲಿಯೂ ಸುಧಾ ಮೂರ್ತಿಯವರೇ ಮೇಲುಗೈ. 1,750 ಕೋಟಿ ರೂಪಾಯಿಯಲ್ಲಿ ಮೂರನೇ ಎರಡು ಪಾಲು ಸುಧಾ ಅವರದ್ದಾದರೆ ಒಂದು ಪಾಲು ಇನ್ಫಿ ನಾರಾಯಣ ಮೂರ್ತಿಯವರದ್ದು.

ಇನ್ಫೋಸಿಸ್‌ನಲ್ಲಿ ನಾರಾಯಣ ಮೂರ್ತಿಯವರ ಷೇರು ಶೇ.1ಕ್ಕಿಂತಲೂ ಕಡಿಮೆ. ಅದು ಕೇವಲ 0.56ರಷ್ಟು ಮಾತ್ರ, ಅಂದರೆ ಸುಮಾರು 445 ಕೋಟಿ ರೂಪಾಯಿಗಳು.. ಸುಧಾ ಮೂರ್ತಿಯದ್ದು 1.63ರಷ್ಟು, ಅಂದರೆ 1,300 ಕೋಟಿ ರೂಪಾಯಿಗಳು.

ನಾರಾಯಣ ಮೂರ್ತಿಯವರ ಮಕ್ಕಳಲ್ಲಿ ರೋಹನ್ ವೈದ್ಯ ವೃತ್ತಿಯತ್ತ ಆಸಕ್ತಿ ಹೊಂದಿದ್ದು, ಸದ್ಯ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾರೆ. ಅಕ್ಷತಾ ಅಪ್ಪನಂತೆಯೇ ಟೆಕ್ಕಿಯಾಗಿದ್ದು, ಅಮೆರಿಕದಲ್ಲಿದ್ದಾಳೆ. ಆಕೆ ಸ್ಟಾನ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಪದವೀಧರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತದ 50 ಬಹು ಪ್ರಭಾವಿ ವ್ಯಕ್ತಿಗಳ ಪಟ್ಟಿ ಪ್ರಕಟ
ಬಡ್ಡಿ ದರ ಇಳೆಕೆ: ಆಸೋಚಾಮ್ ಆಗ್ರಹ
ಭಾರತೀಯ ಕಾಲ್ ಸೆಂಟರ್ ಮುಚ್ಚುಗಡೆ: ಡೆಲ್ಟ್ ಏರ್‌ಲೈನ್ಸ್
ಚಿನ್ನ ದರ ಇಳಿಕೆ
ಹತ್ತಿ ರಫ್ತು ಬೇಡಿಕೆ ಇಳಿಕೆ
ಸತ್ಯಂ ಹಗರಣ: ಜಾಮೀನು ನಿರಾಕರಣೆ