ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ದೇಶದ ವೃದ್ಧಿ ದರದಲ್ಲಿ ಶೀಘ್ರ ಸುಧಾರಣೆ :ಪ್ರಧಾನಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇಶದ ವೃದ್ಧಿ ದರದಲ್ಲಿ ಶೀಘ್ರ ಸುಧಾರಣೆ :ಪ್ರಧಾನಿ
PTI
ಮುಂಬರುವ ಸೆಪ್ಟೆಂಬರ್ ವೇಳೆಗೆ ಜಾಗತಿಕ ಆರ್ಥಿಕತೆಯಲ್ಲಿ ಸುಧಾರಣೆ ಕಂಡಬರಲಿರುವುದರಿಂದ ದೇಶದ ವಾರ್ಷಿಕ ವೃದ್ಧಿ ದರ ಶೇ.8ರಿಂದ ಶೇ.9 ರವರೆಗೆ ತಲುಪುವ ನಿರೀಕ್ಷೆಯಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ಪ್ರಸಕ್ತ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ಜಾಗತಿಕ ಆರ್ಥಿಕತೆಯಲ್ಲಿ ಕನಿಷ್ಠ ಪ್ರಮಾಣದಲ್ಲಿ ಚೇತರಿಕೆ ಕಂಡುಬರುವ ಸಾಧ್ಯತೆಗಳಿರುವುದರಿಂದ ಒಂದು ವೇಳೆ ನಿರೀಕ್ಷೆ ಸಫಲವಾದಲ್ಲಿ ದೇಶದಲ್ಲಿ ಕಳೆದ ಐದು ವರ್ಷಗಳಲ್ಲಿದ್ದ ಶೇ 8ರಿಂದ ಶೇ9 ರಷ್ಟು ಜಿಡಿಪಿ ದರ ತಲುಪುವ ಸಾಧ್ಯತೆಗಳಿವೆ ಎಂದು ಪ್ರಧಾನಿ ಡಾ.ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

2008-09ರ ಆರ್ಥಿಕ ಸಾಲಿನಲ್ಲಿ ದೇಶದ ವಾರ್ಷಿಕ ಆರ್ಥಿಕ ಅಭಿವೃದ್ಧಿ ದರ ಶೇ.7.1ರಷ್ಟಿದ್ದು,ಪ್ರಸಕ್ತ ವರ್ಷದಲ್ಲಿ ಕೂಡಾ ಶೇ.6.5 ರಿಂದ ಶೇ.7ರವರೆಗೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಜಾಗತಿಕ ಆರ್ಥಿಕ ಕುಸಿತ ಹಾಗೂ ಅದರಿಂದ ದೇಶದ ಮೇಲಾದ ಪರಿಣಾಮಗಳ ಕುರಿತಂತೆ ಮಾತನಾಡಿದ ಪ್ರಧಾನಿ ಡಾ.ಸಿಂಗ್, ಜಗತ್ತಿನ ಪ್ರಮುಖ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಆರ್ಥಿಕ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದರಿಂದ ಬಿಕ್ಕಟ್ಟು ಎದುರಾಗಿದೆ ಎಂದು ಅಭಿಪ್ರಾಯಪಟ್ಟರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಾರಾಯಣ ಮೂರ್ತಿ ಕುಟುಂಬದ ಬೆಲೆ 4,000 ಕೋಟಿ ರೂ!
ಭಾರತದ 50 ಬಹು ಪ್ರಭಾವಿ ವ್ಯಕ್ತಿಗಳ ಪಟ್ಟಿ ಪ್ರಕಟ
ಬಡ್ಡಿ ದರ ಇಳೆಕೆ: ಆಸೋಚಾಮ್ ಆಗ್ರಹ
ಭಾರತೀಯ ಕಾಲ್ ಸೆಂಟರ್ ಮುಚ್ಚುಗಡೆ: ಡೆಲ್ಟ್ ಏರ್‌ಲೈನ್ಸ್
ಚಿನ್ನ ದರ ಇಳಿಕೆ
ಹತ್ತಿ ರಫ್ತು ಬೇಡಿಕೆ ಇಳಿಕೆ