ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಚಿನ್ನ ಖರೀದಿಯಿಂದ ವಾರ್ಷಿಕ ಲಾಭ ಶೇ.26 ರಷ್ಟು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಿನ್ನ ಖರೀದಿಯಿಂದ ವಾರ್ಷಿಕ ಲಾಭ ಶೇ.26 ರಷ್ಟು
PTI
ಪ್ರಸಕ್ತ ಆರ್ಥಿಕ ಬಿಕ್ಕಟ್ಟಿನಲ್ಲಿ ಇತರ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿ ಮರಳಿ ಸೇರುತ್ತದೆ ಎನ್ನುವ ಬಗ್ಗೆ ವಿಶ್ವಾಸವಿಲ್ಲ. ಆದರೆ ಚಿನ್ನ ಪ್ರಿಯರಾದ ಭಾರತೀಯ ಮಹಿಳೆಯರು ಖರೀದಿಸಿದ ಚಿನ್ನದಿಂದಾಗಿ ಶೇ.26 ರಷ್ಟು ಲಾಭವನ್ನು ಪಡೆದಿದ್ದಾರೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಹೇಳಿಕೆ ನೀಡಿದೆ.

ವರ್ಲ್ಡ್ ಗೋಲ್ಡ್ ಕೌನ್ಸಿಲ್ ಇತ್ತೀಚೆಗೆ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ವರ್ಷಗಳುರುಳಿದಂತೆ ಚಿನ್ನದ ದರದಲ್ಲಿ ಏರಿಕೆಯಾಗುತ್ತಿದೆ.2009ರ ಮೊದಲ ತ್ರೈಮಾಸಿಕದಲ್ಲಿ ಚಿನ್ನ ಪ್ರತಿ 10 ಗ್ರಾಂಗೆ ಗರಿಷ್ಠ 15,780 ದಾಖಲೆಯನ್ನು ಸ್ಥಾಪಿಸಿತ್ತು. ಹಿಂದಿನ ವರ್ಷದ ಸರಾಸರಿ ಚಿನ್ನದ ದರವಾದ 12,147ರೂಪಾಯಿಗಳಿಗೆ ಹೋಲಿಸಿದಲ್ಲಿ ಶೇ.17 ರಷ್ಟು ಲಾಭವನ್ನು ಮರಳಿ ಪಡೆದಂತಾಗಿದೆ.

1999ರಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ 3,850 ರೂಪಾಯಿಗಳಾಗಿತ್ತು. 2008ರ ವರ್ಷಕ್ಕೆ ಹೋಲಿಸಿದಲ್ಲಿ ಶೇ.216 ರಷ್ಟು ಲಾಭ ಪಡೆದಂತಾಗಿದೆ. ಅದರಿಂದ ವಾರ್ಷಿಕ ಲಾಭಾಂಶದಲ್ಲಿ ಶೇ.24 ರಷ್ಟಾಗಿದೆ. ಕಳೆದ 2001ರಲ್ಲಿ ಪ್ರತಿ 10 ಗ್ರಾಂ ಚಿನ್ನದ ದರ 4,106 ರೂಪಾಯಿಗಳಾಗಿತ್ತು. 2008ರ ವರ್ಷದ ದರಗಳಿಗೆ ಹೋಲಿಸಿದಲ್ಲಿ ವಾರ್ಷಿಕವಾಗಿ ಶೇ. 28 ರಷ್ಟು ವಾರ್ಷಿಕ ಲಾಭಾಂಶ ದೊರೆತಂತಾಗಿದೆ ಎಂದು ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.

2006ರ ಆರ್ಥಿಕ ಸಾಲಿನಲ್ಲಿ ಪ್ರತಿ 10 ಗ್ರಾಂ ಚಿನ್ನದ ದರ 8,791 ರೂಪಾಯಿಗಳಾಗಿತ್ತು. 2008ನೇ ಆರ್ಥಿಕ ವರ್ಷದಲ್ಲಿ ದರ 12,147 ರೂಪಾಯಿಗಳಿಗೆ ಹೋಲಿಸಿದಲ್ಲಿ ಶೇ.38 ರಷ್ಟು ಲಾಭ ಮರಳಿ ಪಡೆದಂತಾಗುತ್ತದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಹೊರಡಿಸಿದ ಅಧ್ಯಯನ ವರದಿಯಲ್ಲಿ ಪ್ರಕಟಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್ಥಿಕತೆ ಹಂತ ಹಂತವಾಗಿ ಸುಸ್ಥಿತಿಗೆ: ಗೋಪಾಲ್‌ಕೃಷ್ಣನ್
ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
ದೇಶದ ವೃದ್ಧಿ ದರದಲ್ಲಿ ಶೀಘ್ರ ಸುಧಾರಣೆ :ಪ್ರಧಾನಿ
ನಾರಾಯಣ ಮೂರ್ತಿ ಕುಟುಂಬದ ಬೆಲೆ 4,000 ಕೋಟಿ ರೂ!
ಭಾರತದ 50 ಬಹು ಪ್ರಭಾವಿ ವ್ಯಕ್ತಿಗಳ ಪಟ್ಟಿ ಪ್ರಕಟ
ಬಡ್ಡಿ ದರ ಇಳೆಕೆ: ಆಸೋಚಾಮ್ ಆಗ್ರಹ