ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಟಿಸಿಎಸ್‌ ನಿವ್ವಳ ಲಾಭಾಂಶ 1,333 ಕೋಟಿ ರೂ.
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಿಸಿಎಸ್‌ ನಿವ್ವಳ ಲಾಭಾಂಶ 1,333 ಕೋಟಿ ರೂ.
PTI
ದೇಶದ ಪ್ರಮುಖ ಸಾಫ್ಟ್‌ವೇರ್ ಸಂಸ್ಥೆಯಾದ ಟಾಟಾ ಕನ್ಸಲ್‌ಟನ್ಸಿ ಸರ್ವಿಸಸ್‌ ಮಾರ್ಚ್ 31 2009ಕ್ಕೆ ಅಂತ್ಯಗೊಂಡಂತೆ ನಾಲ್ಕನೇ ತ್ರೈಮಾಸಿಕ ವರದಿಯನ್ನು ಘೋಷಿಸಿದ್ದು, ನಿವ್ವಳ ಲಾಭದಲ್ಲಿ ಶೇ.2.1 ರಷ್ಟು ಕುಸಿತವಾಗಿ 1,333ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಕಂಪೆನಿಯ ಆದಾಯ 7,172 ಕೋಟಿ ರೂಪಾಯಿಗಳಿಗೆ ತಲುಪಿದ್ದು, ಶೇ.1.40 ರಷ್ಟು ಇಳಿಕೆಯಾಗಿದೆ ಎಂದು ಕಂಪೆನಿ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ಮಾರ್ಚ್ 2009ಕ್ಕೆ ಆರ್ಥಿಕ ವರ್ಷ ಕೊನೆಗೊಂಡಂತೆ ಟಾಟಾ ಕನ್ಸಲ್‌ಟನ್ಸಿ ಸರ್ವಿಸಸ್, ಕ್ರೂಢಿಕೃತ ನಿವ್ವಳ ಲಾಭದಲ್ಲಿ ಶೇ.4.58ರಷ್ಟು ಏರಿಕೆಯಾಗಿ 5,256.42 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷದ ಸಾಲಿನಲ್ಲಿ 5,026.02 ಕೋಟಿ ರೂ.ಗಳ ನಿವ್ವಳ ಲಾಭಗಳಿಸಿತ್ತು ಎಂದು ಕಂಪೆನಿ ಬಹಿರಂಗಪಡಿಸಿದೆ.

2008-09ರ ಆರ್ಥಿಕ ಸಾಲಿನಲ್ಲಿ ಕಂಪೆನಿಯ ಕ್ರೂಢಿಕೃತ ನಿವ್ವಳ ಮಾರಾಟ 27,812.88 ಕೋಟಿ ರೂ.ಗಳಿಗೆ ತಲುಪಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.21.65 ರಷ್ಟು ಹೆಚ್ಚಳವಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
ಗೋದಿ ಸಂಗ್ರಹ 100ಲಕ್ಷ ಟನ್!
ಆರ್‌ಬಿಐ ಹಣಕಾಸು ನೀತಿ ಇಂದು ಪ್ರಕಟ
ಬ್ಯಾಂಕ್ ಆಫ್ ಅಮೆರಿಕ ಲಾಭಾಂಶದಲ್ಲಿ ಏರಿಕೆ
ಎಕ್ಸಿಸ್‌ ಬ್ಯಾಂಕ್ ವ್ಯವಸ್ಥಾಪಕರಾಗಿ ಶಿಖಾ ಶರ್ಮಾ
2025ರಲ್ಲಿ ಸೆನ್ಸೆಕ್ಸ್ ಒಂ ಲಕ್ಷಕ್ಕೆ ತಲುಪಲಿದೆ: ವರದಿ