ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಪ್ರಭಾವಿ ಸಿಇಒಗಳಲ್ಲಿ ನೂಯಿಗೆ 4ನೇ ಸ್ಥಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಭಾವಿ ಸಿಇಒಗಳಲ್ಲಿ ನೂಯಿಗೆ 4ನೇ ಸ್ಥಾನ
PTI
ಫಾರ್ಚುನ್ ಪಟ್ಟಿಯಲ್ಲಿ 500 ಪ್ರಭಾವಿ ಮುಖ್ಯ ಕಾರ್ಯನಿರ್ವಾಹಧಿಕಾರಿಗಳ ಪಟ್ಟಿಯಲ್ಲಿ ಪುರುಷರು ಸ್ಥಾನಪಡೆದಿರಬಹುದು. ಆದರೆ ಮಹಿಳಾ ಮುಖ್ಯ ಕಾರ್ಯನಿರ್ವಾಹಕರ ಪಟ್ಟಿಯಲ್ಲಿ ಭಾರತೀಯ ಮೂಲದ ಸಂಜಾತೆ ಅಮೆರಿಕದ ಪೆಪ್ಸಿಕೊ ಕಂಪೆನಿಯ ಸಿಇಒ ಇಂದ್ರಾನೂಯಿ ನಾಲ್ಕನೇ ಸ್ಥಾನವನ್ನು ಪಡೆದಿದ್ದಾರೆ.

ಅಮೆರಿಕದ ಬಿಜಿನೆಸ್ ಮ್ಯಾಗ್‌ಜಿನ್ ಫಾರ್ಚುನ್‌ ಬಿಡುಗಡೆಗೊಳಿಸಿದ 15 ಮಹಿಳಾ ಸಿಇಒಗಳ ಪಟ್ಟಿಯಲ್ಲಿ ಇಂದ್ರಾ ನೂಯಿ ನಾಲ್ಕನೇ ಸ್ಥಾನವನ್ನು ಪಡೆದಿದ್ದು, ಕಳೆದ 2008ರಲ್ಲಿ ಕಂಪೆನಿಯ ಆದಾಯವನ್ನು ಶೇ.10 ರಷ್ಟು ಹೆಚ್ಚಳಗೊಳಿಸಿ 43.3 ಬಿಲಿಯನ್ ಡಾಲರ್‌ಗಳಿಗೆ ತಲುಪಿದ ಸಾಧನೆಯಿಂದಾಗಿ ಕ್ರಮಾಂಕದಲ್ಲಿ ಏರಿಕೆ ಕಂಡಿದ್ದಾರೆ ಎಂದು ತಿಳಿಸಿದೆ.

ಕಳಪೆ ದರ್ಜೆಯ ಗುಣಮಟ್ಟದಿಂದಾಗಿ ಪೆಪ್ಸಿಕೊ ಕಂಪೆನಿ ಗ್ರಾಹಕರಿಗೆ 13.4 ಮಿಲಿಯನ್ ಡಾಲರ್‌ಗಳನ್ನು ಪರಿಹಾರ ರೂಪದಲ್ಲಿ ನೀಡಬೇಕು ಎಂದು ನ್ಯಾಯಾಲಯ ಇಂದ್ರಾನೂಯಿ ಅವರಿಗೆ ಆದೇಶಿಸಿದ ಹಿನ್ನೆಲೆಯಲ್ಲಿ ಎಚ್ಚರಗೊಂಡ ಪೆಪ್ಸಿಕೊ ಕಂಪೆನಿ, ಆರೋಗ್ಯ ಪ್ರಜ್ಞೆ ಮತ್ತು ಮಹಿಳಾ ಗ್ರಾಹಕರಿಗಾಗಿ ಕಡಿಮೆ ಕ್ಯಾಲೋರಿ ಮತ್ತು ಲೋ-ಫ್ಯಾಟ್‌ ಹೊಂದಿರುವಂತಹ ನೂತನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರಿಂದ ವಹಿವಾಟಿನಲ್ಲಿ ಹೆಚ್ಚಳವಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಪೆಪ್ಸಿಕೊ ಕಂಪೆನಿ 3500 ಉದ್ಯೋಗಿಗಳನ್ನು ವಜಾಗೊಳಿಸಿ ಆರು ಘಟಕಗಳನ್ನು ಸ್ಥಗಿತಗೊಳಿಸಿದ್ದರೂ ಭಾರತದಲ್ಲಿ 500 ಮಿಲಿಯನ್ ಡಾಲರ್ ,ಚೀನಾದಲ್ಲಿ 1 ಬಿಲಿಯನ್ ಡಾಲರ್ ಮತ್ತು ಮೆಕ್ಸಿಕೊದಲ್ಲಿ 3 ಬಿಲಿಯನ್ ಡಾಲರ್‌ಗಳ ಹೂಡಿಕೆ ವಿಸ್ತರಣೆಯನ್ನು ನೂಯಿ ಘೋಷಿಸಿದ್ದಾರೆ ಎಂದು ಫಾರ್ಚೂನ್‌ ವರದಿ ಮಾಡಿದೆ.

ಉತ್ತರ ಅಮೆರಿಕದಲ್ಲಿ ಪೆಪ್ಸಿ ಮತ್ತು ಮೌಂಟೇನ್ ಡೆವ್‌ ಉತ್ಪಾದನೆಗಳ ಮಾರಾಟವನ್ನು ಹೆಚ್ಚಿಸಲು ಮುಂಬರುವ ಮೂರು ವರ್ಷಗಳ ಅವಧಿಯಲ್ಲಿ ಪ್ರಚಾರಕ್ಕಾಗಿ 1.2 ಬಿಲಿಯನ್ ಡಾಲರ್‌ಗಳನ್ನು ವೆಚ್ಚ ಮಾಡಲು ನಿರ್ಧರಿಸಿದೆ ಎಂದು ಅಮೆರಿಕದ ಬಿಜಿನೆಸ್ ಮ್ಯಾಗ್‌ಜಿನ್ ಫಾರ್ಚುನ್‌ ವರದಿಯಲ್ಲಿ ಬಹಿರಂಗಪಡಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟಿಸಿಎಸ್‌ ನಿವ್ವಳ ಲಾಭಾಂಶ 1,333 ಕೋಟಿ ರೂ.
ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
ಗೋದಿ ಸಂಗ್ರಹ 100ಲಕ್ಷ ಟನ್!
ಆರ್‌ಬಿಐ ಹಣಕಾಸು ನೀತಿ ಇಂದು ಪ್ರಕಟ
ಬ್ಯಾಂಕ್ ಆಫ್ ಅಮೆರಿಕ ಲಾಭಾಂಶದಲ್ಲಿ ಏರಿಕೆ
ಎಕ್ಸಿಸ್‌ ಬ್ಯಾಂಕ್ ವ್ಯವಸ್ಥಾಪಕರಾಗಿ ಶಿಖಾ ಶರ್ಮಾ