ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ ಶೇರು ಖರೀದಿಗೆ2,910 ಕೋಟಿ ರೂ. ಠೇವಣಿ: ಮಹೀಂದ್ರಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ ಶೇರು ಖರೀದಿಗೆ2,910 ಕೋಟಿ ರೂ. ಠೇವಣಿ: ಮಹೀಂದ್ರಾ
PTI
ಮಾಹಿತಿ ತಂತ್ರಜ್ಞಾನ ಸಂಸ್ಥೆ ಟೆಕ್ ಮಹೀಂದ್ರಾ ಕಂಪೆನಿ ಸತ್ಯಂ ಕಂಪ್ಯೂಟರ್‌ ಸರ್ವಿಸಸ್‌ನ ಶೇ.51 ರಷ್ಟು ಸೇರುಗಳ ಮೇಲೆ ನಿಯಂತ್ರಣ ಹೊಂದಲು 2,910 ಕೋಟಿ ರೂ.ಗಳನ್ನು ಠೇವಣಿಯಾಗಿರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಸತ್ಯಂ ಕಂಪ್ಯೂಟರ್‌ನ ಶೇ.31 ರಷ್ಟು ಶೇರುಗಳಿಗಾಗಿ 1,756 ಕೋಟಿ ರೂಪಾಯಿ ಮತ್ತು ಶೇ.20 ಶೇರುಗಳಿಗಾಗಿ 1,150 ಕೋಟಿ ರೂಪಾಯಿಗಳನ್ನು ನಾಳೆ ಆರಂಭವಾಗುವ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಲು ನಿರ್ಧರಿಸಲಾಗಿದೆ ಎಂದು ಸತ್ಯಂ ಅಡಳಿತ ಮಂಡಳಿ ಮುಖ್ಯಸ್ಥ ಕಿರಣ್ ಕಾರ್ನಿಕ್ ಮಹೀಂದ್ರಾ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸತ್ಯಂ ಕಂಪೆನಿ ರೇಸಿಂಗ್ ಕಾರು ಇಲ್ಲದಿರಬಹುದು ಆದರೆ ಮುಳಗುವ ಹಡಗು ಅಲ್ಲ. ಕೆಲ ನಿಯಮಗಳಿಗೆ ಒಳಗಾಗಿರುವುದರಿಂದ ಸಂಪೂರ್ಣ ಮಾಹಿತಿ ನೀಡಲು ಸಾಧ್ಯವಿಲ್ಲ . ನಾಳೆಯಿಂದ ಮುಕ್ತ ಮಾರುಕಟ್ಟೆಯಲ್ಲಿ ಶೇರುಗಳ ಖರೀದಿ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಸತ್ಯಂ ಅಡಳಿತ ಮಂಡಳಿ ಟೆಕ್‌ ಮಹೀಂದ್ರಾಗೆ ಮಾಜಿ ಸಿಇಒ ರಾಮ್ ಮೈನಾಮ್‌ಪತಿ ಸೇರಿದಂತೆ 100 ಪ್ರಮುಖ ಉದ್ಯೋಗಿಗಳ ಹೆಸರುಗಳನ್ನು ನೀಡಲಾಗಿದ್ದು, ಅವರ ಮೇಲೆ ಕ್ರಮ ತೆಗೆದುಕೊಳ್ಳುವ ಕುರಿತಂತೆ ಇಲ್ಲಿಯವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ .

ಸತ್ಯಂ ಅಡಳಿತ ಮಂಡಳಿಯಲ್ಲಿರುವ ಆರು ಮಂದಿ ಸದಸ್ಯರು ಮುಂದಿನ ಆದೇಶ ಪ್ರಕಟವಾಗುವವರೆಗೆ ತಮ್ಮ ಹುದ್ದೆಯಲ್ಲಿ ಮುಂದುವರಿಯಲಿದ್ದು, ಎ.ಎಸ್‌ ಮೂರ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮುಂದುವರಿಸುವುದು ಸೂಕ್ತ ಎನ್ನುವುದು ನಮ್ಮ ಬಯಕೆಯಾಗಿದೆ ಎಂದು ಕಾರ್ನಿಕ್ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಭಾವಿ ಸಿಇಒಗಳಲ್ಲಿ ನೂಯಿಗೆ 4ನೇ ಸ್ಥಾನ
ಟಿಸಿಎಸ್‌ ನಿವ್ವಳ ಲಾಭಾಂಶ 1,333 ಕೋಟಿ ರೂ.
ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
ಗೋದಿ ಸಂಗ್ರಹ 100ಲಕ್ಷ ಟನ್!
ಆರ್‌ಬಿಐ ಹಣಕಾಸು ನೀತಿ ಇಂದು ಪ್ರಕಟ
ಬ್ಯಾಂಕ್ ಆಫ್ ಅಮೆರಿಕ ಲಾಭಾಂಶದಲ್ಲಿ ಏರಿಕೆ