ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬ್ಯಾಂಕ್‌ಗಳಿಂದ ಬಡ್ಡಿ ದರ ಕಡಿತ ನಿರೀಕ್ಷೆ:ಸರಕಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ಯಾಂಕ್‌ಗಳಿಂದ ಬಡ್ಡಿ ದರ ಕಡಿತ ನಿರೀಕ್ಷೆ:ಸರಕಾರ
PTI
ಕೇಂದ್ರ ರಿಸರ್ವ್ ಬ್ಯಾಂಕ್ ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು 25 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಬಡ್ಡಿದರವನ್ನು ಇಳಿಕೆ ಮಾಡಲಿವೆ ಎಂದು ಸರಕಾರ ಆಶಾಭಾವನೆಯನ್ನು ವ್ಯಕ್ತಪಡಿಸಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜಾಗತಿಕ ಹಾಗೂ ದೇಶದ ಆರ್ಥಿಕ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ರೆಪೊ ದರಗಳಲ್ಲಿ ಶೇ25 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಿದ್ದು, ಬ್ಯಾಂಕ್‌ಗಳು ಕೂಡಾ ಶೀಘ್ರದಲ್ಲಿ ಬಡ್ಡಿದರಗಳನ್ನು ಕಡಿತಗೊಳಿಸುವುದು ಅಗತ್ಯವಾಗಿದೆ ಎಂದು ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಅಶೋಕ್ ಚಾವ್ಲಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇಂದು ಕೇಂದ್ರ ರಿಸರ್ವ್ ಬ್ಯಾಂಕ್ ಕಡಿಮೆ ಅವಧಿಯ ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು ಶೇ.4.75ರಿಂದ ಶೇ.3.25 ರವರೆಗೆ 25 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಿದ್ದು, ಬ್ಯಾಂಕ್‌ಗಳು ಕೂಡಾ ಪ್ರೈಮ್ ಲೆಂಡಿಂಗ್ ದರಗಳನ್ನು ಕಡಿತಗೊಳಿಸಬೇಕು ಎಂದು ಚಾವ್ಲಾ ಬ್ಯಾಂಕ್‌ಗಳಿಗೆ ಮನವಿ ಮಾಡಿದ್ದಾರೆ.

ಆದರೆ ಕ್ಯಾಶ್ ರಿಸರ್ವ್ ರೇಶಿಯೋ ಶೇ.5.0 ರಷ್ಟನ್ನು ಮುಂದುವರಿಸಲು ಆರ್‌ಬಿಐ ತೀರ್ಮಾನಿಸಿದ್ದು, ಮುಂಬರುವ 2009-10 ರ ಸಾಲಿನಲ್ಲಿ ಹಣಕಾಸು ನೀತಿಯಲ್ಲಿ ಸಾಲ ವಿಸ್ತರಣೆಯನ್ನು ಸೂಕ್ತ ಬಡ್ಡಿದರದಲ್ಲಿ ನೀಡಲು ನಿರ್ಧರಿಸಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಜಾಗತಿಕ ಆರ್ಥಿಕ ಕುಸಿತದಿಂದಾಗಿ ಹಣಕಾಸಿನ ಸ್ಥಿರತೆ ಮತ್ತು ದರ ಸ್ಥಿರತೆಗೆ ಪೂರಕವಾಗಿ ಬಡ್ಡಿದರವನ್ನು ನಿಗದಿಪಡಿಸಲು ಕೇಂದ್ರ ರಿಸರ್ವ್ ಬ್ಯಾಂಕ್ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎಂದು ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಅಶೋಕ್ ಚಾವ್ಲಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವೆಚ್ಚ ಕಡಿತದತ್ತ ಟಿಸಿಎಸ್ ಚಿತ್ತ
ಕಿಂಗ್‌ಫಿಶರ್‌ಗೆ 12 ಪೈಲಟ್‌ಗಳ ರಾಜೀನಾಮೆ
ಸತ್ಯಂ ಶೇರು ಖರೀದಿಗೆ2,910 ಕೋಟಿ ರೂ. ಠೇವಣಿ: ಮಹೀಂದ್ರಾ
ಪ್ರಭಾವಿ ಸಿಇಒಗಳಲ್ಲಿ ನೂಯಿಗೆ 4ನೇ ಸ್ಥಾನ
ಟಿಸಿಎಸ್‌ ನಿವ್ವಳ ಲಾಭಾಂಶ 1,333 ಕೋಟಿ ರೂ.
ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ