ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್‌ಬಿಐನಿಂದ ರೆಪೊ, ರಿವರ್ಸ್ ರೆಪೊ ದರ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್‌ಬಿಐನಿಂದ ರೆಪೊ, ರಿವರ್ಸ್ ರೆಪೊ ದರ ಕಡಿತ
PTI
ಕೇಂದ್ರ ರಿಸರ್ವ್ ಬ್ಯಾಂಕ್ ರೆಪೊ ಮತ್ತು ರಿವರ್ಸ್ ರೆಪೊದ 25 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಿ ಆದೇಶ ಹೊರಡಿಸಿದ್ದರಿಂದ ಗೃಹ, ವಾಹನೋದ್ಯಮ ಮತ್ತು ಕಾರ್ಪೋರೇಟ್ ಸಾಲ ಪಡೆಯುವ ಗ್ರಾಹಕರಿಗೆ ಮತ್ತಷ್ಟು ನೆಮ್ಮದಿಯಿಂದ ಉಸಿರಾಡಲು ಅಕಾಶ ದೊರೆತಂತಾಗಿದೆ.

2009-10ರ ಆರ್ಥಿಕ ಸಾಲಿನ ಅವಧಿಯಲ್ಲಿ ರಿಸರ್ವ್ ಬ್ಯಾಂಕ್ ವಾರ್ಷಿಕ ಹಣಕಾಸು ನೀತಿಯಲ್ಲಿ ಪ್ರಸ್ತುತವಿದ್ದ ಶೇ.4.75 ರಷ್ಟಿದ್ದ ರೆಪೊ ದರವನ್ನು ಶೇ.3.25ರವರೆಗೆ ಕೂಡಲೇ ಜಾರಿಗೆ ಬರುವಂತೆ ಆದೇಶಿಸಿದ್ದು, ಕ್ಯಾಶ್ ರಿಸರ್ವ್ ರೇಶಿಯೋದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲಎಂದು ರಿಸರ್ವ್ ಬ್ಯಾಂಕ್ ಮೂಲಗಳು ತಿಳಿಸಿವೆ.

ಜಾಗತಿಕ ಆರ್ಥಿಕ ಕುಸಿತವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ರಿಸರ್ವ್ ಬ್ಯಾಂಕ್, ಕಳೆದ 2008-09ರ ಸಾಲಿನಲ್ಲಿದ್ದ ಶೇ.6.5-6.7 ರಷ್ಟಿದ್ದ ಜಿಡಿಪಿ ದರ ಪ್ರಸಕ್ತ ವರ್ಷದ ಆರ್ಥಿಕ ಸಾಲಿನಲ್ಲಿ ಶೇ.6ಕ್ಕೆ ತಲುಪುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.

ಕೇಂದ್ರ ರಿಸರ್ವ್ ಬ್ಯಾಂಕ್ ಮುಂಬರುವ ದಿನಗಳಲ್ಲಿ ಮತ್ತಷ್ಟು ಬಡ್ಡಿ ದರಗಳನ್ನು ಕಡಿತಗೊಳಿಸುವ ಸೂಚನೆಯನ್ನು ನೀಡಿದೆ ಎಂದು ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಕಾರ್ಯಕಾರಿ ನಿರ್ದೇಶಕ ಎಸ್‌.ಸಿ.ಸಿನ್ಹಾ ಹೇಳಿದ್ದಾರೆ.

ಹಣದುಬ್ಬರ ವರ್ಷದ ಮಧ್ಯಂತರದ ಅವಧಿಯಲ್ಲಿ ಶೇ.3ಕ್ಕೆ ತಲುಪಲಿದ್ದು, ಮಾರ್ಚ್2010ಕ್ಕೆ ಶೇ.4ಕ್ಕೆ ತಲುಪುವ ಸಾಧ್ಯತೆಗಳಿರುವುದರಿಂದ ಮತ್ತಷ್ಟು ಬಡ್ಡಿದರವನ್ನು ಕಡಿತಗೊಳಿಸುವ ಅವಕಾಶಗಳಿವೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬ್ಯಾಂಕ್‌ಗಳಿಂದ ಬಡ್ಡಿ ದರ ಕಡಿತ ನಿರೀಕ್ಷೆ:ಸರಕಾರ
ವೆಚ್ಚ ಕಡಿತದತ್ತ ಟಿಸಿಎಸ್ ಚಿತ್ತ
ಕಿಂಗ್‌ಫಿಶರ್‌ಗೆ 12 ಪೈಲಟ್‌ಗಳ ರಾಜೀನಾಮೆ
ಸತ್ಯಂ ಶೇರು ಖರೀದಿಗೆ2,910 ಕೋಟಿ ರೂ. ಠೇವಣಿ: ಮಹೀಂದ್ರಾ
ಪ್ರಭಾವಿ ಸಿಇಒಗಳಲ್ಲಿ ನೂಯಿಗೆ 4ನೇ ಸ್ಥಾನ
ಟಿಸಿಎಸ್‌ ನಿವ್ವಳ ಲಾಭಾಂಶ 1,333 ಕೋಟಿ ರೂ.