ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮಾರ್ಚ್‌ನಲ್ಲಿ 15.87 ಮಿಲಿಯನ್ ಹೊಸ ಫೋನ್ ಬಳಕೆದಾರರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾರ್ಚ್‌ನಲ್ಲಿ 15.87 ಮಿಲಿಯನ್ ಹೊಸ ಫೋನ್ ಬಳಕೆದಾರರು
PTI
ಆರ್ಥಿಕ ಕುಸಿತದ ಪರಿಣಾಮದಿಂದ ಮೊಬೈಲ್/ಟೆಲಿಫೋನ್ ಬಳಕೆದಾರರ ಸಂಖ್ಯೆಯಲ್ಲೇನೂ ಕಡಿಮೆಯಾಗುತ್ತಿಲ್ಲ. ದಿನೇ ದಿನೇ ಹೊಸ ಟೆಲಿಫೋನ್ ಬಳಕೆದಾರರ ಸಂಖ್ಯೆ ಮಾತ್ರ ಹೆಚ್ಚಾಗುತ್ತಲೇ ಇದೆ.

ಟೆಲಿಕಾಂ ರೆಗ್ಯುಲೇಟರ್ ಟ್ರಾಯ್ ದಾಖಲೆಗಳ ಪ್ರಕಾರ, 15.87 ಮಿಲಿಯನ್ ಹೊಸ ಟೆಲಿಫೋನ್ (ವೈರ್‌ಲೆಸ್ ಹಾಗೂ ವೈರ್‌ಲೈನ್) ಸಂಪರ್ಕಗಳು ಕೇವಲ ಮಾರ್ಚ್ ತಿಂಗಳೊಂದರಲ್ಲೇ ನಡೆದಿವೆ. ಫೆಬ್ರವರಿಯಲ್ಲಿ ಈ ಸಂಖ್ಯೆ 13.82ರಷ್ಟಿತ್ತು. ಹೀಗಾಗಿ ಮಾರ್ಚ್ ಅಂತ್ಯದ ವೇಳೆಗೆ ಕಳೆದ ಆರ್ಥಿಕ ವರ್ಷದಲ್ಲಿ ಒಟ್ಟು 429.72 ಮಿಲಿಯನ್ ಹೊಸ ಟೆಲಿಫೋನ್ ಸಂಪರ್ಕಗಳು ಆಗಿವೆ.

ವೈರ್‌ಲೆಸ್ ಸಂಪರ್ಕಗಳ ಪೈಕಿ ಜಿಎಸ್‌ಎಂ, ಸಿಡಿಎಂಎ ಹಾಗೂ ಡಬ್ಲ್ಯುಎಲ್ಎಲ್‌ಗಳೂ ಸೇರಿ ಮಾರ್ಚ್ ತಿಂಗಳಲ್ಲಿ 15.64 ಮಿಲಿಯನ್ ಹೊಸ ಸಂಪರ್ಕಗಳು ಆಗಿವೆ. ಆ ಮೂಲಕ ಮಾರ್ಚ್ ಅಂತ್ಯದಲ್ಲಿ 391.76 ಮಿಲಿಯನ್ ಹೊಸ ವೈರ್‌ಲೆಸ್ ಸಂಪರ್ಕಗಳು ಈ ವರ್ಷ ನಡೆದಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರೂಪಾಯಿ ಮೌಲ್ಯ ಏರಿಕೆ
ಸಿಂಡಿಕೇಟ್ ಬ್ಯಾಂಕ್ ಸರ್ವೀಸಸ್ ನಿವ್ವಳ ಲಾಭ
ಐಸಿಐಸಿಐ ಬಡ್ಡಿದರ ಕಡಿತ
ಆರ್‌ಬಿಐನಿಂದ ರೆಪೊ, ರಿವರ್ಸ್ ರೆಪೊ ದರ ಕಡಿತ
ಬ್ಯಾಂಕ್‌ಗಳಿಂದ ಬಡ್ಡಿ ದರ ಕಡಿತ ನಿರೀಕ್ಷೆ:ಸರಕಾರ
ವೆಚ್ಚ ಕಡಿತದತ್ತ ಟಿಸಿಎಸ್ ಚಿತ್ತ