ನೋಕಿಯಾ ಸಂಸ್ಥೆ ಇದೀಗ ತನ್ನ ಮೊಬೈಲ್ ಟಿವಿ ಉದ್ಯಮವನ್ನು ವಿಪ್ರೋ ಟೆಕ್ನಾಲಜೀಸ್ ಸಂಸ್ಥೆಗೆ ಮಾರಿದೆ. ವಿಪ್ರೋ ಕಾಡೂ ತಾನು ನೋಕಿಯಾದ ಮೊಬೈಲ್ ಟಿವಿ ಯುನಿಟ್ನ್ನು ಖರೀದಿಸಿರುವ ವಿಷಯವನ್ನು ಬಹಿರಂಗಪಡಿಸಿದರೂ, ಖರೀದಿಯ ಮೊತ್ತವನ್ನು ಬಹಿರಂಗಗೊಳಿಸಲು ನಿರಾಕರಿಸಿದೆ.ಮೊಬೈಲ್ ಟಿವಿ ಯುನಿಟ್ನಲ್ಲಿ 40 ಮಂದಿ ನೌಕರರಿದ್ದು, ಅವರು ಮೊಬೈಲ್ಗಳಲ್ಲಿರುವ ಟಿವಿ ಸೌಲಭ್ಯದ ಸಾಫ್ಟ್ವೇರ್ ಹಾಗೂ ಹಾರ್ಡ್ವೇರ್ಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಮಾಡುತ್ತಾರೆ. ಬ್ರಾಡ್ಕ್ಯಾಸ್ಟಿಂಗ್ ನೆಟ್ವರ್ಕ್ ಮೂಲಕ ಪಡೆದ ಡಾಟಾವನ್ನು ಮೊಬೈಲ್ ಟಿವಿ ಮೂಲಕ ಪಡೆಯಲು ಮೊಬೈಲ್ ಸಾಫ್ಟ್ವೇರ್ನಿಂದ ಸಾಧ್ಯವಾಗುವಂತೆ ಮಾಡುವ ಕಾರ್ಯವನ್ನೂ ಈ ಮೊಬೈಲ್ ಟಿವಿ ಯುನಿಟ್ ನಿರ್ವಹಿಸುತ್ತದೆ. |