ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಯಾಹೂ: ಮತ್ತೆ ಶೇ.5 ಉದ್ಯೋಗಕ್ಕೆ ಕತ್ತರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯಾಹೂ: ಮತ್ತೆ ಶೇ.5 ಉದ್ಯೋಗಕ್ಕೆ ಕತ್ತರಿ
ಯಾಹೂ ಸಂಸ್ಥೆ ತನ್ನ ತ್ರೈಮಾಸಿಕ ಆರ್ಥಿಕ ವರದಿಯ ನಂತರ ಇದೀಗ ವೆಚ್ಚ ಕಡಿಮೆ ಮಾಡಲು ನಿರ್ಧರಿಸಿದ್ದು, ಶೇ.5ರಷ್ಟು ಉದ್ಯೋಗ ಕಡಿತ ಕೈಗೊಳ್ಳಲು ನಿರ್ಧರಿಸಿದೆ. ಆರ್ಥಿಕ ನಿರ್ವಹಣೆಯೇ ದೊಡ್ಡ ಸವಾಲಾಗಿ ಸಂಸ್ಥೆಯಲ್ಲಿ ಪರಿಣಮಿಸಿರುವುದರಿಂದ ಯಾಹೂ ವೆಬ್‌ಸೈಟ್‌ನಲ್ಲಿ ಕೆಲಸ ಮಾಡುತ್ತಿರುವ ಶೇ.5ರಷ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸದೆ ವಿಧಿಯಿಲ್ಲ ಎಂದು ಹೇಳಿಕೊಂಡಿದೆ.

ಯಾಹೂ ಭವಿಷ್ಯದ ಬಗ್ಗೆ ವಿಮರ್ಶಿಸಿದ ಸಂಸ್ಥೆಯ ಹೊಸ ಮುಖ್ಯಸ್ಥ ಕ್ಯಾರೋಲ್ ಬರ್ಟ್ಸ್, ಸಂಸ್ಥೆಯ ಆದಾಯದಲ್ಲಿ ಭಾರೀ ಇಳಿಕೆಯಾಗಿದೆ. ಸಂಸ್ಥೆಯ ನಿವ್ರಹಣಾ ವೆಚ್ಚವೂ ಸಾಕಷ್ಟು ಇರುವುದರಿಂದ ವೆಚ್ಚವನ್ನು ಕಡಿಮೆಗೊಳಿಸಲೇಬೇಕಾಗಿರುವುದರಿಂದ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದರು. ಆದರೂ, ಸಂಸ್ಥೆ ತನ್ನ ಬ್ಯುಸಿನೆಸ್ ಉತ್ತಮಪಡಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂದು ಕ್ಯಾರೋಲ್ ತಿಳಿಸಿದರು.

ಕಳೆದ ಅಕ್ಟೋಬರ್‌ನಲ್ಲಿ ಯಾಹೂ ತನ್ನ ಸಂಸ್ಥೆಯಲ್ಲಿ ಹತ್ತನೇ ಒಂದರಷ್ಟು ನೌಕರರ ಉದ್ಯೋಗಕ್ಕೆ ಕತ್ತರಿ ಹಾಕಿತ್ತು. ಆಗ ಸುಮಾರು 1,600 ಮಂದಿ ಉದ್ಯೋಗ ಕಳೆದುಕೊಂಡಿದ್ದರು. 2008ರ ಅಂತ್ಯದಲ್ಲಿ ಯಾಹೂವಿನಲ್ಲಿ ಸುಮಾರು 13,600 ಮಂದಿ ನೌಕರರು ಕೆಲಸ ಮಾಡುತ್ತಿದ್ದರು. ಈಗ ಮತ್ತೆ ಯಾಹೂ ಶೇ.5 ಮಂದಿಕೆ ಕತ್ತರಿ ಪ್ರಯೋಗ ಮಾಡಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯಾಹೂ, ಉದ್ಯೋಗ, Yahoo Inc, Job loss
ಮತ್ತಷ್ಟು
ನೋಕಿಯಾ ಮೊಬೈಲ್ ಟಿವಿಯನ್ನು ಖರೀದಿಸಿದ ವಿಪ್ರೋ
ಮಾರ್ಚ್‌ನಲ್ಲಿ 15.87 ಮಿಲಿಯನ್ ಹೊಸ ಫೋನ್ ಬಳಕೆದಾರರು
ರೂಪಾಯಿ ಮೌಲ್ಯ ಏರಿಕೆ
ಸಿಂಡಿಕೇಟ್ ಬ್ಯಾಂಕ್ ಸರ್ವೀಸಸ್ ನಿವ್ವಳ ಲಾಭ
ಐಸಿಐಸಿಐ ಬಡ್ಡಿದರ ಕಡಿತ
ಆರ್‌ಬಿಐನಿಂದ ರೆಪೊ, ರಿವರ್ಸ್ ರೆಪೊ ದರ ಕಡಿತ