ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಶೇ.20 ಷೇರುಗಳ ಮುಕ್ತ ಹರಾಜು: ಟೆಕ್ ಮಹೀಂದ್ರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೇ.20 ಷೇರುಗಳ ಮುಕ್ತ ಹರಾಜು: ಟೆಕ್ ಮಹೀಂದ್ರ
ನವದೆಹಲಿ: ಕಳಂಕಿತ ಸತ್ಯಂ ಕಂಪ್ಯೂಟರ್ಸ್ ಸಂಸ್ಥೆಯನ್ನು ಖರೀದಿಸಿರುವ ಟೆಕ್ ಮಹೀಂದ್ರಾ ಇದೀಗ ಸತ್ಯಂನ ಶೇ.20 ಷೇರುಗಳನ್ನು ಮುಕ್ತ ಹರಾಜಿಗೆ ಮೀಸಲಿರಿಸಿದೆ.

ಟೆಕ್ ಮಹೀಂದ್ರಾ ಈ ವಿಷಯವನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದು, 1,154.66 ಕೋಟಿ ರೂಪಾಯಿಗಳ ಈ ಮುಕ್ತ ಹರಾಜು ಜೂ.12ರಿಂದ ಜು.1ರವರೆಗೆ ಮಾತ್ರ ಲಭ್ಯವಿರುತ್ತದೆ ಎಂದು ತಿಳಿಸಿದೆ. ಶೇ.20ರಷ್ಟು ಅಂದರೆ, 19.90 ಕೋಟಿ ಷೇರುಗಳನ್ನು ಬಿಡ್‌ ಮೂಲಕ ಗೆದ್ದ ಟೆಕ್ ಮಹೀಂದ್ರ ಈಗ ಅದನ್ನು ಹರಾಜಿಗೆ ಮುಕ್ತಗೊಳಿಸಿದೆ.

ಈ ಮುಕ್ತ ಹರಾಜಿನ ಮೂಲಕ ಟೆಕ್ ಮಹೀಂದ್ರ ಈಗ ಶೇ.51ರಷ್ಟು ಷೇರುಗಳನ್ನು ಸತ್ಯಂನಲ್ಲಿ ಹೊಂದಿದಂತಾಗುತ್ತದೆ. ಪ್ರತಿ ಮುಖಬೆಲೆಯ ಷೇರು 58 ರೂಪಾಯಿಗಳಂತೆ 19.90 ಕೋಟಿ ಷೇರುಗಳನ್ನು ಟೆಕ್ ಮಹೀಂದ್ರ ವಶಪಡಿಸಿಕೊಳ್ಳಲು ನಿರ್ಧರಿಸಿದೆ.

ಈಗಾಗಲೇ ಬಿಡ್‌ನಲ್ಲಿ ಗೆದ್ದ ನಂತರ ಕಳೆದ ವಾರ ಶೇ.31ರಷ್ಟು ಷೇರುಗಳಿಗೆ 1,756 ಕೋಟಿ ರೂಪಾಯಿಗಳನ್ನು ನೀಡುವ ಮೂಲಕ ಸರ್ಕಾರ ಸತ್ಯಂಗೆ ನೇಮಿಸಿದ್ದ ಮಂಡಳಿಯಿಂದ ಟೆಕ್ ಮಹೀಂದ್ರ ಅನುಮೋದನೆ ಪಡೆದಿತ್ತು. ಶೇ.51 ಷೇರುಗಳಿಗೆ 2,910 ಕೋಟಿ ರೂಪಾಯಿಗಳಿಗೆ ಇತ್ತೀಚೆಗೆ ಇದು ಕಂಪನಿ ಲಾ ಬೋರ್ಡ್‌ನಿಂದಲೂ ಅಧಿಕೃತವಾಗಿ ಅಂಕಿತ ಪಡೆದಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಟೆಕ್ ಮಹೀಂದ್ರ, ಸತ್ಯಂ, ಷೇರು, Tech Mahindra, Satyam
ಮತ್ತಷ್ಟು
ವೋಲ್ವೋ: 1,543 ಉದ್ಯೋಗಿಗಳು ಹೊರಕ್ಕೆ
ಯಾಹೂ: ಮತ್ತೆ ಶೇ.5 ಉದ್ಯೋಗಕ್ಕೆ ಕತ್ತರಿ
ನೋಕಿಯಾ ಮೊಬೈಲ್ ಟಿವಿಯನ್ನು ಖರೀದಿಸಿದ ವಿಪ್ರೋ
ಮಾರ್ಚ್‌ನಲ್ಲಿ 15.87 ಮಿಲಿಯನ್ ಹೊಸ ಫೋನ್ ಬಳಕೆದಾರರು
ರೂಪಾಯಿ ಮೌಲ್ಯ ಏರಿಕೆ
ಸಿಂಡಿಕೇಟ್ ಬ್ಯಾಂಕ್ ಸರ್ವೀಸಸ್ ನಿವ್ವಳ ಲಾಭ