ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 1,000 ನ್ಯಾನೋಗಳನ್ನು ಬುಕ್ ಮಾಡಿದ ಶ್ರೀ ಸಿಮೆಂಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
1,000 ನ್ಯಾನೋಗಳನ್ನು ಬುಕ್ ಮಾಡಿದ ಶ್ರೀ ಸಿಮೆಂಟ್
PTI
ಕೋಲ್ಕತ್ತಾ ಮೂಲದ ಶ್ರೀ ಸಿಮೆಂಟ್ ಜಾಗತಿಕ ಭೂಮಿ ದಿನಾಚರಣೆ ಅಂಗವಾಗಿ ಒಂದು ಸಾವಿರ ನ್ಯಾನೋಗಳನ್ನು ಬುಕ್ ಮಾಡಿದೆ.
ಬುಕ್ ಮಾಡಿದ ಎಲ್ಲ ನ್ಯಾನೋಗಳು ಬಿಎಸ್3 ಮಾದರಿಯ ಹವಾನಿಯಂತ್ರಿತವಾಗಿದ್ದು, ಅದರಲ್ಲಿ 200 ಕಾರುಗಳು ಅತ್ಯುನ್ನತ ದರ್ಜೆಯದ್ದಾದರೆ, 800 ಕಾರುಗಳು ಮಧ್ಯಮ ದರ್ಜೆಯದ್ದು ಎಂದು ಶ್ರೀಸಿಮೆಂಟ್‌ನ ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ.ಬಂಗೂರ್ ತಿಳಿಸಿದರು.

ಟಾಟಾದ ನ್ಯಾನೋ ಅತಿ ಹೆಚ್ಚು ಮೈಲೇಜ್ ಕೊಡುವ ಕಾರಾಗಿದ್ದು, ಅದಕ್ಕಾಗಿಯೇ ಜಾಗತಿಕ ಭೂಮಿ ದಿನಾಚರಣೆ ಅಂಗವಾಗಿ ಸಾಂಕೇತಿಕವಾಗಿ 1000 ಕಾರುಗಳಿಗೆ ಬುಕ್ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಜತೆಗೆ, ನಮ್ಮ ಸಂಸ್ಥೆ ಪರಿಸರದ ಬಗ್ಗೆ ಕಾಳಜಿ ವಹಿಸಿರುವುದಲ್ಲದೆ, ನ್ಯಾನೋದಂತಹ ವಿಶೇಷ ಕಾರುಗಳಿಗೆ ವಿಶೇಷ ಪ್ರೋತ್ಸಾಹ ನೀಡುವುದೂ ನಮ್ಮ ಉದ್ದೇಶವಾಗಿದೆ. ಪರಿಸರದ ಬಗ್ಗೆ ಕಾಳಜಿಯಿಂದ ಅತಿ ಕಡಿಮೆ ಶಕ್ತಿಯ ಮೂಲಗಳನ್ನು ಬಳಸುವ ಭಾರತದ ಕಂಪನಿಗಳಲ್ಲಿ ಶ್ರೀ ಸಿಮೆಂಟ್ ಒಂದಾಗಿದೆ ಎಂದು ತಿಳಿಸಿದರು.

ಸಂಸ್ಥೆ ಟಾಟಾದ ನಿಯಮಗಳಂತೆ 1000 ಕಾರುಗಳನ್ನು ಬುಕ್ ಮಾಡಿದೆ. 1000 ಕಾರುಗಳು ಬೇಕೆಂದು ಟಾಟಾಗೆ ದೂರವಾಣಿ ಮುಖಾಂತರ ಸಂಪರ್ಕಿಸಿದಾಗ ಅವರು ಡೀಲರ್ ಮುಖಾಂತರವೇ ಪಡೆಯಲು ಹೇಳಿದು. ಹಾಗಾಗಿ ಅದೇ ಮಾರ್ಗದಲ್ಲಿ ಹೊರಟಿದ್ದೇವೆ ಎಂದು ಬಂಗೂರ್ ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನ್ಯಾನೋ, ಟಾಟಾ, ಶ್ರೀ ಸಿಮೆಂಟ್, Shree Cement, Nano, Tata
ಮತ್ತಷ್ಟು
ಶೇ.20 ಷೇರುಗಳ ಮುಕ್ತ ಹರಾಜು: ಟೆಕ್ ಮಹೀಂದ್ರ
ವೋಲ್ವೋ: 1,543 ಉದ್ಯೋಗಿಗಳು ಹೊರಕ್ಕೆ
ಯಾಹೂ: ಮತ್ತೆ ಶೇ.5 ಉದ್ಯೋಗಕ್ಕೆ ಕತ್ತರಿ
ನೋಕಿಯಾ ಮೊಬೈಲ್ ಟಿವಿಯನ್ನು ಖರೀದಿಸಿದ ವಿಪ್ರೋ
ಮಾರ್ಚ್‌ನಲ್ಲಿ 15.87 ಮಿಲಿಯನ್ ಹೊಸ ಫೋನ್ ಬಳಕೆದಾರರು
ರೂಪಾಯಿ ಮೌಲ್ಯ ಏರಿಕೆ