ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್‌ಬಿಐ ನಿರ್ಣಯದಿಂದ ಎನ್‌ಬಿಎಫ್‌ಸಿಗಳು ಸಧ್ಯಕ್ಕೆ ನಿರಾಳ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್‌ಬಿಐ ನಿರ್ಣಯದಿಂದ ಎನ್‌ಬಿಎಫ್‌ಸಿಗಳು ಸಧ್ಯಕ್ಕೆ ನಿರಾಳ
PTI
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನೂತನ ಹೆಜ್ಜೆ ಇದೀಗ ನಾನ್ ಬ್ಯಾಂಕಿಂಗ್ ಫೈನಾನ್ಶಿಯಲ್ ಕಂಪನಿ (ಎನ್‌ಬಿಎಫ್‌ಸಿ)ಗಳನ್ನು ಸ್ವಲ್ಪಮಟ್ಟಿಗೆ ನಿರಾಳವಾಗಿ ಉಸಿರು ಬಿಡುವಂತೆ ಮಾಡಿದೆ. ಕಠಿಣ ಮಾರುಕಟ್ಟೆ ಸ್ಥಿತಿಯಲ್ಲಿ ಈಕ್ವಿಟಿ ಬಂಡವಾಳವನ್ನು ಹೆಚ್ಚಿಸುವ ಸಲುವಾಗಿ ಆರ್‌ಬಿಐ ಕ್ಯಾಪಿಟಲ್ ಅಡೆಕ್ವೆನ್ಸಿ ರೇಶ್ಯೋವನ್ನು ಜಾರಿಗೊಳಿಸುವುದನ್ನು ಸದ್ಯಕ್ಕೆ ತಡೆಹಿಡಿದಿದೆ.

ಆರ್‌ಬಿಐ ಈ ಮೊದಲು 2010, ಮಾರ್ಚ್ 31ರವರೆಗೆ ಶೇ.12ರಷ್ಟು ಹಾಗೂ 2011ರ ಮಾರ್ಚ್ 31ರವರೆಗೆ ಶೇ.15ರಷ್ಟು ಕ್ಯಾಪಿಟಲ್ ಅಡೆಕ್ವೆನ್ಸಿ ರೇಶ್ಯೋವನ್ನು ಜಾರಿಗೊಳಿಸಲು ಈ ಮೊದಲು ನಿರ್ಧರಿಸಿತ್ತು. ಇದು ಎನ್‌ಬಿಎಫ್‌ಸಿಗಳಿಗೂ ಅನ್ವಯಿಸಲಿದೆ. ತಜ್ಞರ ಪ್ರಕಾರ ಆರ್‌ಬಿಐನ ಈ ನೂತನ ನಿರ್ಣಯದಿಂದ ಎನ್‌ಬಿಎಫ್‌ಸಿಗಳಿಗೆ, ಹಾಗೂ ವಿದೇಶೀ ಬ್ಯಾಂಕುಗಳಿಗೆ ನೆರವಾಗಲಿದ್ದು, ಸದ್ಯಕ್ಕೆ ನಿರಾಳರಾಗಿ ತಮ್ಮ ಅಭಿವೃದ್ಧಿಯತ್ತ ಗಮನ ಹರಿಸಬಹುದು ಎಂದಿದ್ದಾರೆ.

ಕ್ಯಾಪಿಟಲ್ ಅಡೆಕ್ವೆನ್ಸಿ ರೇಶ್ಯೂವನ್ನು ಜಾರಿಗೊಳಿಸುವುದನ್ನು ಒಂದು ವರ್ಷಕ್ಕೆ ತಡೆಹಿಡಿದಿರುವ ಆರ್‌ಬಿಐಯ ನಿರ್ಣಯಕ್ಕೆ ಹಲವರು ಸ್ವಾಗತ ವ್ಯಕ್ತಪಡಿಸಿದ್ದಾರೆ. ಆರ್‌ಬಿಐ ಈ ವಿಚಾರದಲ್ಲಿ ದಿಟ್ಟ ಹಾಗೂ ವಿವೇಚನಾಯುಕ್ತ ನಿರ್ಣಯ ಕೈಗೊಂಡಿದೆ ಎಂದು ಉದ್ಯಮಿಗಳು ಶ್ಲಾಘಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆರ್ಬಿಐ, ಎನ್ಬಿಎಫ್ಸಿ, NBFC, RBI
ಮತ್ತಷ್ಟು
1,000 ನ್ಯಾನೋಗಳನ್ನು ಬುಕ್ ಮಾಡಿದ ಶ್ರೀ ಸಿಮೆಂಟ್
ಶೇ.20 ಷೇರುಗಳ ಮುಕ್ತ ಹರಾಜು: ಟೆಕ್ ಮಹೀಂದ್ರ
ವೋಲ್ವೋ: 1,543 ಉದ್ಯೋಗಿಗಳು ಹೊರಕ್ಕೆ
ಯಾಹೂ: ಮತ್ತೆ ಶೇ.5 ಉದ್ಯೋಗಕ್ಕೆ ಕತ್ತರಿ
ನೋಕಿಯಾ ಮೊಬೈಲ್ ಟಿವಿಯನ್ನು ಖರೀದಿಸಿದ ವಿಪ್ರೋ
ಮಾರ್ಚ್‌ನಲ್ಲಿ 15.87 ಮಿಲಿಯನ್ ಹೊಸ ಫೋನ್ ಬಳಕೆದಾರರು