ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಂಪನಿಗಳಿಂದ ಉದ್ಯೋಗಿಗಳಿಗೆ ನ್ಯಾನೋ ಕಾರು ಕೊಡುಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಂಪನಿಗಳಿಂದ ಉದ್ಯೋಗಿಗಳಿಗೆ ನ್ಯಾನೋ ಕಾರು ಕೊಡುಗೆ
ಹಣಕಾಸು ಹಿಂಸರಿತದಿಂದಾಗಿ ಭಾರತೀಯ ಕಂಪನಿಗಳು ಕೂಡ ಉದ್ಯೋಗಿಗಳನ್ನು ಸಾಗ ಹಾಕಿ ಕೈತೊಳೆದುಕೊಳ್ಳುತ್ತಿರುವಂತೆಯೇ, ಸಮರ್ಥ ಉದ್ಯೋಗಿಗಳನ್ನು ಸಂತೋಷದಲ್ಲಿರಿಸುವ ನಿಟ್ಟಿನಲ್ಲಿ ಕೆಲವು ಕಂಪನಿಗಳು ನ್ಯಾನೋ ಕಾರನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದು, ನ್ಯಾನೋ ಕಾರಿಗೆ ಸಗಟು ಬುಕಿಂಗ್ ಮಾಡತೊಡಗಿವೆ. ಶ್ರೀ ಸಿಮೆಂಟ್ ಮತ್ತು ಲಿಂಕ್ ಪೆನ್ ಮತ್ತಿತರ ಕಂಪನಿಗಳು ಈ ಕೊಡುಗೆ ನೀಡಲು ಮುಂದಾಗಿವೆ ಎಂದು ಮೂಲಗಳು ತಿಳಿಸಿವೆ.

ಶ್ರೀ ಸಿಮೆಂಟ್ ಕಂಪನಿಯು ಬುಧವಾರ ಒಂದು ಸಾವಿರ ಟಾಟಾ ನ್ಯಾನೋ ಕಾರುಗಳನ್ನು ಬುಕ್ ಮಾಡಿದೆ. ಅದು ಅಗ್ಗದ ಕಾರೆಂಬ ಕಾರಣಕ್ಕಾಗಿ ಮಾತ್ರವಲ್ಲ, ಇದರ ಇಂಧನ ಕ್ಷಮತೆ ಕೂಡ ಅತ್ಯುತ್ತಮವಾಗಿದೆ. ಕಡಿಮೆ ಇಂಧನ ವ್ಯಯಿಸುವ ಉದ್ದೇಶದಿಂದ, ನಾನು ಕೂಡ ಬಿಎಂಡಬ್ಲ್ಯು ಕಾರು ತೊರೆದು ನ್ಯಾನೋ ಬಳಸಲು ನಿರ್ಧರಿಸಿರುವುದಾಗಿ ಶ್ರೀ ಸಿಮೆಂಟ್ ಆಡಳಿತ ನಿರ್ದೇಶಕ ಎಚ್.ಎಂ.ಬಾಂಗುರ್ ಅವರು ತಿಳಿಸಿರುವುದಾಗಿ ಇಕಾನಮಿಕ್ ಟೈಮ್ಸ್ ವರದಿ ಮಾಡಿದೆ.

ಬುಕ್ ಮಾಡಿರುವ 1000 ಕಾರುಗಳಲ್ಲಿ, 200 ಕಾರುಗಳು ಜುಲೈ 2009 ಮತ್ತು ಜೂನ್ 2010ರ ನಡುವೆ ದೊರೆಯಲಿವೆ. ಉಳಿದ 800 ಕಾರುಗಳನ್ನು ಆ ಬಳಿಕ ನಮಗೆ ವಿತರಿಸಲಾಗುತ್ತದೆ ಎಂದಿರುವ ಅವರು, ಕಂಪನಿಯ ಮಾನವ ಸಂಪನ್ಮೂಲ ಉತ್ತೇಜನ ಕಾರ್ಯಕ್ರಮದ ಅಂಗವಾಗಿ ಇವುಗಳನ್ನು ಕೊಡುಗೆಯಾಗಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಇದುವರೆಗೆ ದ್ವಿಚಕ್ರವಾಹನಕ್ಕೆ ಪ್ರೋತ್ಸಾಹ ಧನ ಪಡೆಯುತ್ತಿದ್ದ ಕಂಪನಿ ಉದ್ಯೋಗಿಗಳು ಕಾರು ಅಲೊವೆನ್ಸ್ ಪಡೆಯಲಿದ್ದಾರೆ. ಇದೇ ರೀತಿ, ಲಿಂಕ್ ಪೆನ್ ಕಂಪನಿ ಕೂಡ ತನ್ನ ಉದ್ಯೋಗಿಗಳಿಗಾಗಿ ಈಗಾಗಲೇ 11 ನ್ಯಾನೋ ಕಾರುಗಳನ್ನು ಬುಕ್ ಮಾಡಿದೆ ಎಂದು ತಿಳಿದುಬಂದಿದೆ

ಈಗಾಗಲೇ ಐಟಿ ವಲಯದಲ್ಲಿರುವ ಉದ್ಯೋಗಿಗಳು ನ್ಯಾನೋ ಕಾರುಗಳನ್ನು ಸಾಲುಗಟ್ಟಿ ಬುಕ್ ಮಾಡುತ್ತಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹುಂಡೈ ಲಾಭ ಹಾಗೂ ಮಾರಾಟದಲ್ಲಿ ಕುಸಿತ
ರೂಪಾಯಿ ಮೌಲ್ಯ 9 ಪೈಸೆ ಕುಸಿತ
ಹಣಕಾಸು ವರ್ಷದ ಲಾಭ
12 ಪೈಲಟ್‌ಗಳು ಕತಾರ್‌ಗೆ
ಆರ್‌ಬಿಐ ನಿರ್ಣಯದಿಂದ ಎನ್‌ಬಿಎಫ್‌ಸಿಗಳು ಸಧ್ಯಕ್ಕೆ ನಿರಾಳ
1,000 ನ್ಯಾನೋಗಳನ್ನು ಬುಕ್ ಮಾಡಿದ ಶ್ರೀ ಸಿಮೆಂಟ್